ಸ್ನೇಹಿತರೊಂದಿಗೆ ಇಸ್ಪೀಟ್ ಆಡುವಾಗ ಜೆಡಿಎಸ್ ಮುಖಂಡ ತೀವ್ರ ಹೃದಯಾಘಾತದಿಂದ ಮೃತಪಟ್ಟಿರೋ ಘಟನೆ ಮೈಸೂರು ಜಿಲ್ಲೆಯಲ್ಲಿ ಸಂಭವಿಸಿದೆ.ಮೃತ ಜೆಡಿಎಸ್ ಮುಖಂಡ ಅಶ್ವಥ್ ಅವರು ಮೈಸೂರಿನ ಕೆ.ಟಿ. ಸ್ಟ್ರೀಟ್ ನಿವಾಸಿ, ಜೆಡಿಎಸ್ ಪಕ್ಷದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಶ್ವಥ್ ಸ್ನೇಹಿತರ ಜೊತೆ ಇಸ್ಪೀಟ್ ಕಾರ್ಡ್ಗಳನ್ನು ಎತ್ತಿಡುವಾಗಲೇ ತೀವ್ರ ಹೃದಯಾಘಾತವಾಗಿದೆ. ಈ ವೇಳೆ ಆಟ ಆಡುತ್ತಲೇ ಪಕ್ಕದಲ್ಲಿ ಇದ್ದ ಸ್ನೇಹಿತನ ಭುಜದ ಮೇಲೆ ಬಿದ್ದಿದ್ದಾರೆ. ಮೃತ ಅಶ್ವಥ್ ಎದೆ ನೋವಿನಿಂದ ಕುಸಿದು ಸ್ನೇಹಿತರ ಭುಜಕ್ಕೆ ಒರಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಕ್ಷಣವೇ ಸ್ನೇಹಿತರು ಸೇರಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದು, ಆದರೆ ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇಸ್ಪೀಟ್ ಆಡುವಾಗ ಜೆಡಿಎಸ್ ಮುಖಂಡ ಹೃದಯಾಘಾತದಿಂದ ಮೃತ
Date: