ಉಚಿತ ಡೇಟಾ ಸೌಲಭ್ಯವನ್ನು ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ರಿಲಾಯನ್ಸ್ ಜಿಯೋ ಇದೀಗ ಮತ್ತೊಂದು ಹೊಸ ಆಫರ್ ನೀಡಲು ಮುಂದಾಗಿದೆ.
ಕ್ಯಾಡ್ ಬರಿ ಸಹಭಾಗಿತ್ವದಲ್ಲೀಗ ಹೊಸ ಆಟ ಶುರುಮಾಡಿದೆ. ಕ್ಯಾಡ್ ಬರಿ ಡೈರಿ ಮಿಲ್ಕ್ ಚಾಕಲೇಟ್ ಜೊತೆಗೆ 1ಜಿಬಿ 4ಜಿ ಡೇಟಾ ನೀಡಲಿದೆ.
5ರೂ ನಿಂದ ಹಿಡಿದು 100ರೂ ಚಾಕಲೇಟ್ ವರೆಗೂ ಈ ಆಫರ್ ಬರಲಿದ್ದು ಸೆಪ್ಟೆಂಬರ್ 30ರವರೆಗೆ ಈ ಸೌಲಭ್ಯ ಲಭ್ಯ.
ಡೈರಿ ಮಿಲ್ಕ್ ಫ್ರೂಟ್ ಅಂಡ್ ನಟ್, ರೆಗ್ಯುಲರ್ ಚಾಕಲೇಟ್, ಕ್ರ್ಯಾಕಲ್ ಕೊಂಡಲ್ಲಿ ಈ ಆಫರ್ ಸಿಗಲಿದೆ.
ಚಾಕಲೇಟ್ ರ್ಯಾಪರ್ ಮೇಲೆ ಕೋಡ್ ಅನ್ನು ಜಿಯೋ ಆ್ಯಪ್ ಬಳಸಿ ಸ್ಕ್ಯಾನ್ ಮಾಡಿ ಡೇಟಾ ಪಡೆಯಬಹುದು.