ಜಿಯೋ ಗ್ರಾಹಕರಿಗೆ ಇತರೆ ಟೆಲಿಕಾಂ ಸಂಸ್ಥೆಗಳ ನೆಟ್‍ವರ್ಕ್ ಸಮಸ್ಯೆಗೆ ನಾವು ಪರಿಹಾರ ಕಂಡುಕೊಂಡಿದ್ದು, ಎಲ್ಲಾ ಜಿಯೋ ಗ್ರಾಹಕರಿಗೆ ಇನ್ನೊಂದೇ ವಾರದಲ್ಲಿ ಸಮಸ್ಯೆಯನ್ನು ನಿವಾರಣೆ ಮಾಡಲಿದದ್ದೇವೆ. ಇತರೆ ಟೆಲಿಕಾಂ ಸಂಸ್ಥೆಗಳು ವಾರಗಳವರೆಗೆ ನಿಯಮ ಉಲ್ಲಂಘಿಸಲು ಸಾಧ್ಯ ಆ ನಂತರ ಕಾನೂನು ಉಲ್ಲಂಘನೆ ಅಸಾಧ್ಯ. ಈಗಿರುವ ಕಂಪನಿಗಳು ತಮ್ಮ ಇಂಟರ್ ಕನೆಕ್ಟಿವಿಟಿಯನ್ನು ಮೇಲ್ದರ್ಜೆಗೆ ಏರಿಸಲೇಬೇಕು ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ತಿಳಿಸಿದ್ದಾರೆ.
ಈ ಒಂದು ವಾರದಲ್ಲಿ ರಿಲಾಯನ್ಸ್ ಜಿಯೋ ಗ್ರಾಹಕರು ಇತರ ಟೆಲಿಕಾಂ ನೆಟ್‍ವರ್ಕ್ ಸಿಗದೇ ಸುಮಾರು 5 ಕೋಟಿಗೂ ಅಧೀಕ ಕರೆಗಳ ವೈಫಲ್ಯ ಎದುರಿಸಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಂಬಾನಿ ಈ ಸಮಸ್ಯೆಗೆ ಕೆಲವೇ ವಾರಗಳಲ್ಲಿ ಪರಿಹಾರ ನಿಡಲಾಗುವುದು ಎಂದು ಭರವಸೆ ನೀಡಿದರು.
ಜಿಯೋ ಜಗತ್ತಿನ ಅತೀ ದೊಡ್ಡ ಸ್ಟಾರ್ಟ್ ಅಪ್. ಈ ಸಂಸ್ಥೆ ಯಾವುದೇ ಲಾಭದಾಯಕ ಆದಾಯ ನೋಡದೇ 1.5 ಲಕ್ಷ ಕೋಟಿ ಹೂಡಿಕೆ ಮಾಡಿರುವ ಹೆಗ್ಗಳಿಕೆ ನಮ್ಮದು ಎಂದು ಅಂಬಾನಿ ತಿಳಿಸಿದ್ದಾರೆ. ನಮಗೆ ಸೂಕ್ತವಾದ ಮತ್ತು ಸ್ಥಿರವಾದ ಆದಾಯ ಜಿಯೊನಿಂದ ಆದಷ್ಟು ಬೇಗ ಬರುತ್ತದೆ ಎಂಬ ಭರವಸೆ ನನ್ನಲ್ಲಿದೆ. ಹದಿಹರೆಯದ ಗ್ರಾಹಕರೇ ನಮ್ಮ ಭಂಡವಾಳಕ್ಕೆ ಪ್ರತಿಫಲ ಎಂದು ತಿಳಿಸಿದ್ದಾರೆ. ರಿಲಾಯನ್ಸ್ ಈಗ ಜಿಯೋ ಮತ್ತು ರಿಫೈನರಿ ಹಾಗೂ ಪೆಟ್ರೋಲಿಯಂನಲ್ಲೂ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಮುಂದೆ ನಮ್ಮ ಸಂಸ್ಥೆಗೆ ಉತ್ತಮ ಆದಾಯ ತಂದು ಕೊಡಲಿದೆ ಎಂದರು.
POPULAR STORIES :
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!