#Mee Too ಕಾಮದ ಕಣ್ಣುಗಳಲ್ಲಿ ಹೆಣ್ಣನ್ನು ನೋಡುವವರಿಗೆ , ನೋಡಿದವರಿಗೆ ಚಳಿ-ಜ್ವರ ಹುಟ್ಟಿಸಿದೆ.
ಇದು ಮಹಿಳಾ ಚಳುವಳಿಯಾಗಿ ಮಹಿಳೆಯರ ಘನತೆ ಎತ್ತಿ ಹಿಡಿಯುವಲ್ಲಿ ಗೆದ್ದರೆ ಸಾರ್ಥಕ ಎಂದೆನಿಸುತ್ತದೆ.
ಅದಿರಲಿ ಇದು ಕಾರ್ಪೋರೇಟ್ ವರ್ಲ್ಡ್ . ಈ ಜಗತ್ತಿನಲ್ಲಿ ಮಹಿಳೆ-ಪುರುಷರು ಕ್ಲೋಸ್ ಆಗಿರೋದು, ಜೊತೆ ಸುತ್ತೋದು, ಪಾರ್ಟಿ ಮಾಡೋದು ಕಾಮನ್..! ಹಾಗಂತ ಎಲ್ಲೆ ಮೀರಿದರೆ ಯಾರೂ ಸಹಿಸಲು ಆಗಲ್ಲ.
ಪುರುಷರು ಮಹಿಳಾ ಸಹೋದ್ಯೋಗಿ ಜೊತೆ ಹೀಗೆ ವರ್ತಿಸ್ಬೇಕು.
* ಮಹಿಳೆಯರ ಜೊತೆ ಡಬಲ್ ಮೀನಿಂಗ್ ಮಾತುಗಳು, ಅನಗತ್ಯ ಜೋಕ್ಸ್ ಗಳು ಬೇಡ.
* ಆಡುವ ಮಾತಿನ ಮೇಲೆ ನಿಗಾವಿರಲಿ.
*ಕಣ್ಣಿಗೆ ಕಣ್ಣು ಕೊಟ್ಟು ಮಾತಾಡಿ. ಕುತ್ತಿಗೆಯ ಕೆಳಭಾಗದತ್ತ ಕಣ್ಣಾಡಿಸಿ ಕೆಟ್ಟವರಾಗಬೇಡಿ.
*ಅವರನ್ನು ಮೈ ಕೈ ಮುಟ್ಟಿ ಮಾತಾಡಿಸೋದು. ಒತ್ತಾಯ ಪೂರ್ವಕವಾಗಿ ತಬ್ಬಿ ಕೊಳ್ಳೋದು ಬೇಡ.
* ಪ್ರೀತಿಸಿ, ಕಾಮಿಸಬೇಡಿ. ರಸಿಕತೆ ಇರಲಿ ಕಾಮುಕತೆ ಬೇಡ.
* ನಿಮ್ಮ ವರ್ತನೆ,ಮಾತ-ಕತೆಯಿಂದಲೇ ಹೆಣ್ಣು ನಿಮ್ಮನ್ನು ಅಳೆಯುತ್ತಾಳೆ.
ಹೀಗೆ ನೀವು ಮಹಿಳಾ ಸಹೋದ್ಯೋಗಿಗಳೊಂದಿಗೆ ಆತ್ಮೀಯರಾಗಿರೋದು ತಪ್ಪಲ್ಲ. ಆದರೆ, ಆ ಆತ್ಮೀಯತೆ ಹೆಸರಲ್ಲಿ ಮುಜುಗರ ಆಗುವಂತೆ ವರ್ತಿಸೋದು ಸರಿಯಲ್ಲ.