ಡಿಂಪಲ್ ಕ್ವೀನ್ ರಚಿತಾ ರಾಮ್ ಲೇಡಿ ಜೋಗಿಯಾಗಿದ್ದಾರೆ….! ಇನ್ಸ್ಟಾಗ್ರಾಮ್ ನಲ್ಲಿ ಫೋಟೊ ಅಪ್ ಲೋಡ್ ಮಾಡಿ , ಜೋಗಿ ಶಿವಣ್ಣನ ರೀತಿ ಫೋಸ್ ಕೊಟ್ಟಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ. ಕೂದಲ್ ಫ್ರೀ ಬಿಟ್ಟು ಸ್ಮೈಲ್ ಮಾಡಿದ್ದಾರೆ ಡಿಂಪಲ್ ಕ್ವೀನ್. ಆದರೆ, ಕಾಲಿನ ಪಕ್ಕ ಲಾಂಗ್ ಮಿಸ್ ಆಗಿದೆ….!
‘ಜೋಗಿ ಥರಾ ಪೋಸ್ ಕೊಡ್ತಿದ್ದೀನಿ.ಫೀಮೇಲ್ ವರ್ಷನ್ ಜೋಗಿ ಹಾಗೇ ಜಸ್ಟ್ ಟ್ರೈ ಮಾಡಿದ್ದೀನಿ. ಏನಾದ್ರೂ ಸೆಂಚುರಿ ಸ್ಟಾರ್ ಶಿವಣ್ಣನ ಮೀರಿಸೋಕೆ ಆಗಲ್ಲ. ನಾನು ತುಂಬಾ ಆರಾಧಿಸೋ ಅಚ್ಚುಮೆಚ್ಚಿನ ವ್ಯಕ್ತಿ ಶಿವಣ್ಣ. ಈ ಫೋಟೊ ಎಲ್ಲಾ ಕನ್ನಡಿಗರಿಗಾಗಿ, ಕನ್ನಡ ಚಿತ್ರಾಭಿಮಾನಿಗಳಿಗಾಗಿ’ ಎಂದು ಬರೆದುಕೊಂಡಿದ್ದಾರೆ.