ಇದು ಪತ್ರಕರ್ತರಿಗೆ ಗುಡ್ ನ್ಯೂಸ್! ಆಯವ್ಯಯದಲ್ಲಿ ಘೋಷಿಸಿದ್ದ ‘ಮಾಧ್ಯಮ ಸಂಜೀವಿನಿ’ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ.
ಪತ್ರಕರ್ತರು ಕೆಲಸದ ವೇಳೆ ಅಪಘಾತಕ್ಕೆ ಈಡಾದಾಗ ಇಲ್ಲವೇ ಇನ್ನೇನಾದರು ಅವಘಡಗಳಾಗಿ ಅಕಾಲಿಕ ಮರಣವನ್ನಪ್ಪಿದರೆ ಈ ಯೋಜನೆಯಡಿ ಮೃತರ ಕುಟುಂಬಕ್ಕೆ 5ಲಕ್ಷ ರೂವರೆಗೆ ಜೀವವಿಮೆ ನೀಡಲಾಗುತ್ತದೆ. ಈ ಜೀವ ವಿಮೆ ಕಂತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಮೂಲಕ ಭರಿಸಲಾಗುವುದು. ಪತ್ರಕರ್ತರು ತಮ್ಮ 60 ವರ್ಷ ವಯಸ್ಸಿನ ವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಲಾಗುವುದು.
ಪತ್ರಕರ್ತರು ಇಲಾಖೆಯಿಂದ ಮಾನ್ಯತೆ ಪತ್ರವನ್ನು ಪಡೆದಿರಬೇಕು. 25 ವರ್ಷದಿಂದ 60 ನೇ ವಯಸ್ಸಿನವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪತ್ರಕರ್ತರು ವೃತ್ತಿ ನಿರತ ಕೆಲಸದ ಮೇಲೆ ಅಪಘಾತಕ್ಕೆ ಒಳಗಾಗದರೆ ಅಥವಾ ಗಂಭೀರ ಮತ್ತು ಇನ್ನಿತರೆ ಮಾರಣಾಂತಿಕ ಕಾಯಿಲೆಗಳಿಂದ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.