ಪತ್ರಕರ್ತರೊಬ್ಬರ ತಾಯಿ ಮತ್ತು ಒಂದು ವರ್ಷದ ಮಗುವನ್ನು ಕೊಂದು ಶವವನ್ನು ಚೀಲದಲ್ಲಿ ಬಿಸಾಕಿರೋ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಪತ್ರಕರ್ತ ರವಿಕಾಂಬ್ಳೆ ಅವರ. 52 ವರ್ಷ ವರ್ಷದ ಉಷಾ ಕಂಬ್ಳೆ ಹಾಗೂ ಮಗಳು ರಾಶಿ ಹತ್ಯೆಗೀಡಾದವರು.
ಉಷಾ ಅವರು ಸಾಲ ನೀಡುವ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್ಪುರದ ಪವನ್ ಪುತ್ರ ಪ್ರದೇಶದ 26ವರ್ಷದ ಗಣೇಶ್ ರಂಬಾರಣ್ ಶಾಹು ಎಂಬಾತನನ್ನು ಬಂಧಿಸಲಾಗಿದೆ. ಉಷಾ ಮತ್ತು ಗಣೇಶ್ ನಡುವೆ ಹಣದ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿತ್ತು ಎನ್ನಲಾಗಿದೆ.