ಫೆಬ್ರವರಿ 18ರಿಂದ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ದ. ಆಫ್ರಿಕಾ ತಂಡವನ್ನು ಜೀನ್ ಪಾಲ್ ಡುಮಿನಿ ಮುನ್ನಡೆಸಲಿದ್ದಾರೆ.
ಟೆಸ್ಟ್ ಸರಣಿಯನ್ನು 2-1ಅಂತರದಿಂದ ಗೆದ್ದಿದ್ದ ದ. ಆಫ್ರಿಕಾ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕೈ ಚೆಲ್ಲಿಕೊಂಡಿದೆ. ಏಕದಿನ ಸರಣಿ ಗೆದ್ದಿರುವ ಭಾರತ ಟಿ20ಗೆ ಸಜ್ಜಾಗಿದೆ.
ಫೆ.16ರಂದು 6ಮತ್ತು ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಫೆ.18ರಂದು ಮೊದಲ ಟಿ20 ಪಂದ್ಯ ನಡೆಯುತ್ತೆ. 21ರಂದು ಎರಡನೇ, 24ರಂದು ಮೂರನೇ ಪಂದ್ಯ ಜರುಗಲಿದೆ.