K. L ರಾಹುಲ್ ನಾಯಕತ್ವದ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದೇನು..?
ಕನ್ನಡಿಗ ಕೆ.ಎಲ್ ರಾಹುಲ್ ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಎಂದೇ ಕರೆಯಲ್ಪಡುತ್ತಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟ್ ಬೀಸಬಲ್ಲ ರಾಹುಲ್ , ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಆಧಾರವಾಗಿದ್ದಾರೆ. ಅಗತ್ಯವಿದ್ದಾಗ ತಂಡವನ್ನು ಮುನ್ನೆಡೆಸಲು ಕೂಡ ಕರ್ನಾಟಕದ ಈ ಆಟಗಾರ ರೆಡಿ..!
ರಾಹುಲ್ ಈಗ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ. ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯು ಎ ಇ ನಲ್ಲಿ ನಡೆಯಲಿರುವ 13 ನೇ ಆವೃತ್ತಿ ಐ ಪಿ ಎಲ್ ನಲ್ಲಿ ಪಂಜಾಬ್ ತಂಡವನ್ನು ನಮ್ಮ ರಾಹುಲ್ ಮುನ್ನೆಡೆಸುತ್ತಿದ್ದಾರೆ .
ಪಂಜಾಬ್ ಪರ ಕಳೆದ ಎರಡು ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು ರಾಹುಲ್. 2018 ರಲ್ಲಿ 14 ಪಂದ್ಯಗಳನ್ನು ಆಡಿದ್ದ ರಾಹುಲ್ 6 ಅರ್ಧಶತಕಗಳ ಸಹಿತ ಒಟ್ಟು 659 ರನ್ ಬಾರಿಸಿದ್ದರು . 2019ರ ಆವೃತ್ತಿಯಲ್ಲಿ 1 ಶತಕ ಮತ್ತು 6 ಅರ್ಧಶತಕದೊಂದಿಗೆ 593ರನ್ ಬಾರಿಸಿ ಮಿಂಚಿದ್ದರು .
ಈ ಬಾರಿ ರಾಹುಲ್ ತಂಡದ ಸದಸ್ಯ ಮಾತ್ರವಲ್ಲದೆ ಅವರು ತಂಡದ ನಾಯಕ ಕೂಡ ..
ಇನ್ನು ರಾಹುಲ್ ನಾಯಕತ್ವದ ಬಗ್ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್, ಕನ್ನಡಿಗರೇ ಆದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ವಿಶ್ವಾಸದ ನುಡಿಗಳನ್ನಾಡಿದ್ದಾರೆ .
ಕೆ ಎಲ್ ರಾಹುಲ್ ಗೆ ಅಂತಾರಾಷ್ಟ್ರೀಯ ಕ್ರಿಕೆಟಿನ ಅನುಭವ ಚೆನ್ನಾಗಿದೆ .ಹಾಗಾಗಿ ಅವರು ತಂಡವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ .
ಕೆ ಎಲ್ ರಾಹುಲ್ ಬಹಳ ನಿರಾಳಾರಗಿದ್ದಾರೆ . ಅವರು ಪ್ರಬುದ್ಧ ಆಟಗಾರ . ಅವರ ಬಗ್ಗೆ ಬಹಳ ಹಿಂದಿನಿಂದಲೂ ನನಗೆ ಅರಿವಿದೆ . ಕಳೆದ ಎರಡು ವರ್ಷಗಳಿಂದ ಪಂಜಾಬ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ ಎಂದು ವಿಶ್ವಕಂಡ ಅದ್ಭುತ ಕ್ರಿಕೆಟಿಗರಲ್ಲಿ ಒಬ್ಬರಾದ ಕನ್ನಡಿಗ, ,IPL ನಲ್ಲಿ ರಾಹುಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ನುಡಿದಿದ್ದಾರೆ .
ಮೇಘನಾ ರಾಜ್ ಕ್ಷಮೆಕೋರಿದ ಇಂದ್ರಜಿತ್ ಲಂಕೇಶ್ ..!
ಡ್ರಸ್ ವಿಚಾರದಲ್ಲಿ `ಕಿರಿಕ್’ ; ಕಣ್ಣೀರಿಟ್ಟ ಸಂಯುಕ್ತಾ ಹೆಗ್ಡೆ ..!
ಯಾವ್ದೇ ಕಾರಣಕ್ಕೂ ಆರ್ ಸಿಬಿ ಬಿಡಲ್ಲ ಅಂದ್ರು ವಿರಾಟ್ ಕೊಹ್ಲಿ..!
ಒಂದಲ್ಲ ಎರಡಲ್ಲ 400 ಕಂಪನಿಗಳ ಒಡೆಯ..!
ತುಪ್ಪದ ಬೆಡಗಿ ರಾಗಿಣಿ ಅರೆಸ್ಟ್ ..!
ಕನ್ನಡಿಗ ರಾಹುಲ್ ಅದ್ಭುತ ಫಾರ್ಮ್ ಈ ವಿಕೆಟ್ ಕೀಪರ್ ಗಳಿಗೆ ತಲೆನೋವು..!
PUBG ಬ್ಯಾನ್ ಮಾಡಿದ್ದಕ್ಕೆ ಚೀನಾದ ಬಿಟ್ಟಿ ಉಪದೇಶ..!
ತುಪ್ಪದ ಬೆಡಗಿ ರಾಗಿಣಿಗೆ ಶಾಕ್..! ಬೆಳ್ಳಂಬೆಳಗ್ಗೆ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ..!
ಸ್ಪೂನ್ ಬಿಟ್ಟು ಕೈಯಲ್ಲೇ ಊಟ ಮಾಡುವುದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಕನ್ನಡಿಗ ರಾಹುಲ್ ನಾಯಕತ್ವ ಗುಣಕ್ಕೆ ಧೋನಿ, ಕೊಹ್ಲಿ, ಶರ್ಮಾ ಸ್ಫೂರ್ತಿಯಂತೆ…!