ಮಂಡ್ಯ : ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.ಪರಿಸರ ಸಂರಕ್ಷಕ, ಆಧುನಿಕ ಭಗೀರಥ ಖ್ಯಾತಿ ಪಡೆದಿದ್ದರು .
ಕಾಮೇಗೌಡ ಅವರು ಅಂತರ್ಜಲ ಹೆಚ್ಚಳ ಮಾಡುವ ಸಲುವಾಗಿ ಕುಂದೂರು ಬೆಟ್ಟದ ಮೇಲೆ ಸ್ವತಃ 16 ಕೆರೆ ನಿರ್ಮಿಸಿದ್ದರು .ಸಾವಿರಾರು ಗಿಡಗಳನ್ನ ನೆಟ್ಟು ಪರಿಸರ ಕಾಳಜಿ ಮೆರೆದಿದ್ದರು . ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಗಳಿಕೆಗೂ ಕಲ್ಮೆ ಕಾಮೇಗೌಡ ಪಾತ್ರರಾಗಿದ್ದು, ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಕಾಮೇಗೌಡರಿಗೆ ಲಭಿಸಿವೆ. ಇನ್ನ ಸ್ವಗ್ರಾಮ ದಾಸನದೊಡ್ಡಿಯಲ್ಲಿ ಕಾಮೇಗೌಡರ ಅಂತ್ಯಕ್ರಿಯೆ ನೆರವೇರಲಿದ್ದು, ಕಾಮೇಗೌಡರ ನಿಧನಕ್ಕೆ ಸಿಎಂ ಬೊಮ್ಮಾಯಿ, ಮಂಡ್ಯ ಉಸ್ತುವಾರಿ ಸಚವಿ ಗೋಪಾಲಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.