ಕಬ್ಬಡಿ ಸೋತಿದ್ದಕ್ಕೆ ಹತಾಶೆಗೊಂಡು ಸ್ಯಾಂಡಲ್ ವುಡ್ ನಟನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಬಿಬಿಎಂಪಿ ಪಾರ್ಕ್ ನಲ್ಲಿ ನಡೆದಿದೆ. 18 ಪ್ಲಸ್ ಸಿನಿಮಾ ನಟ ಭರತ್ ಹಲ್ಲೆಗೊಳಗಾದವರು.
ಭರತ್ ಅವರಿದ್ದ ತಂಡ ಗೆದ್ದಿತ್ತು. ಇದನ್ನು ಸಹಿಸಲಾರದೆ ಕಿಟ್ಟಿ, ಪ್ರೇಮ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಅನ್ನಪೂರ್ಣೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.