ಕುಬ್ಜಾ ನದಿಯು ಕುಂದಾಪುರ ತಾಲೂಕಿನ ಪ್ರಸಿದ್ಧ ಕಮಲಶಿಲೆ ದುರ್ಗಾಪರಮೇಶ್ವರಿ ದೇವಿಗೆ ನೈಸರ್ಗಿಕ ಅಭಿಷೇಕ ಮಾಡಿದೆ.
ಕುಬ್ಜ ನದಿಯ ಪಕ್ಕದಲ್ಲೇ ದುರ್ಗಾಪರಮೇಶ್ವರಿ ದೇವಾಲಯವಿದೆ. ನದಿ ತುಂಬಿ ಹರಿಯುತ್ತಿರುವುದರಿಂದ ದೇವಾಲಯದ ಆವರಣ, ಗರ್ಭಗುಡಿಯೊಳಗೆ ನೀರು ನುಗ್ಗಿದೆ.
ಇದು ಪ್ರತೀತಿಯಾಗಿದೆ. ಪ್ರತಿವರ್ಷ ದೇವಿಗೆ ನೈಸರ್ಗಿಕವಾಗಿ ಅಭಿಷೇಕ ನಡೆಯುತ್ತದೆ. ದೇವಾಲಯಕ್ಕೆ ನೀರು ನುಗುತ್ತಿದ್ದಂತೆ ಅರ್ಚರು ವಿಶೇಷ ಮಂಗಳಾರತಿ ಮಾಡಿದ್ದಾರೆ.