ಕನ್ನಡ ಬಿಗ್ ಬಾಸ್ ಸೀಸನ್ 6 ಇನ್ನೇನು ಶುರುವಾಗಲಿದೆ. ಇನ್ನೆರಡು ದಿನಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋ ನ ಆರಂಭ.
ಬಿಗ್ ಬಾಸ್ ಮನೆಗೆ ಹೋಗಲು ಲೆಕ್ಕವಿಲ್ಲದಷ್ಟು ಮಂದಿ ಕಾಯ್ತಿದ್ದಾರೆ.
ಈ ವರ್ಷವಂತೂ ಶೋ ಕಾಮನ್ ಮ್ಯಾನ್ ಗಳದ್ದಾಗಿದೆ.
ಈ ಬಾರಿ ಒಟ್ಟು 18 ಕಂಟೆಸ್ಟೆಂಟ್ ಗಳ ಪೈಕಿ 10 ಮಂದಿ ಕಾಮನ್ ಮ್ಯಾನ್ ಗಳಿರುತ್ತಾರಂತೆ…!
ಕಾಮನ್ ಮ್ಯಾನ್ ಕೋಟದಲ್ಲಿ ಬಿಗ್ ಬಾಸ್ ಗೆ ಪ್ರವೇಶ ಪಡೆಯುವವರು 10 ಜನ. ಆದರೆ, ಇದಕ್ಕಾಗಿ ಸುಮಾರು 1ಲಕ್ಷ ಅರ್ಜಿಗಳು ಬಂದಿವೆ ಎಂದು ತಿಳಿದುಬಂದಿದೆ. ಇಷ್ಟೊಂದು ಮಂದಿಯಲ್ಲಿ ಅಂತಿಮ 10 ಮಂದಿಯನ್ನು ಆಯ್ಕೆ ಮಾಡೋದು ಕೂಡ ಸವಾಲಿನ ಕೆಲಸವೇ ಸರಿ.