ಕನ್ನಡ ಸಿನಿಮಾ ಉದ್ದಾರ ಆಗಬೇಕಂದ್ರೆ…..!

Date:

ಮಲ್ಟಿಪ್ಲೆಕ್ಸ್ ನವರು ಕನ್ನಡ ಚಿತ್ರಗಳಿಗೆ ಮಾಡುತ್ತಿರುವ ಅನ್ಯಾಯಕ್ಕೆ ನನ್ನ ವಿರೋಧವಿದೆ. ಗೆಳೆಯ ಕೀರ್ತಿ ಶುರುಮಾಡಿದ ಹೋರಾಟಕ್ಕೆ ನನ್ನ ಬೆಂಬಲವಿದೆ.
ಈ ಡಿಸ್ ಕ್ಲೈಮರ್ ನ ನಂತರ
ನಮ್ಮ ಸಿನಿಮಾ ಮಂದಿ ಜೊತೆಗೊಂದೆರ್ಡ್ ಮಾತು
ಬುಕ್ ಮೈ ಶೋ ಫುಲ್ ಅಂತ ತೋರಿಸತ್ತೆ.. ಒಳಗೆ ನೋಡಿದ್ರೆ ಖಾಲಿ. ಸಿನಿಮಾ ಹೌಸ್ ಫುಲ್ ಅನ್ಕೊಂಡು ಜನ ಥೇಟ್ರಿಗೆ ಬರ್ತಿಲ್ಲ. ಆಮೇಲೆ ನೋಡಿದ್ರೆ… ಖಾಲಿ ಥೇಟ್ರ್ ಇದೆ. ಕಲೆಕ್ಷನ್ ಇಲ್ಲ ಅನ್ನೋ ಕಾರಣಕ್ಕೆ ಮಲ್ಟಿಪ್ಲೆಕ್ಸವ್ರು ಸಿನ್ಮಾ ಎತ್ತಾಕ್ತಾ ಇದಾರೆ.
ಇದು ಕಂಪ್ಲೇಂಟು ತಾನೆ? ನಿಜಕ್ಕೂ ಇದು ಯಾವ್ ಕೋನದಿಂದ ನೋಡಿದ್ರೂ ತಪ್ಪೇ.
ಆದರೆ…
ಆದರೆ..
ಇದು ನೀವೇ ಹಾಕಿಕೊಟ್ಟ ಸಂಪ್ರದಾಯದ ಮುಂದುವರೆದ ಭಾಗ ಅಥವಾ ಇನ್ನೊಂದು ಮುಖವಲ್ಲವೇ?
ಸಿನಿಮಾ ಬಿಡುಗಡೆಯಾದ ದಿನ ಸಿನಿಮಾ ತಂಡವೇ ಸಾವಿರಗಟ್ಲೆ ಟಿಕೆಟ್ ಹರಿಸಿ ಫ್ರೆಂಡ್ಸು ರಿಲೇಟಿವ್ಸ್ ಮೂಲಕ ಥೇಟ್ರು ತುಂಬಿಸೋಕೆ ಟ್ರೈ ಮಾಡಿ.. ತುಂಬಿದ್ರೂ ತುಂಬದೇ ಹೋದ್ರೂ…. ಥೇಟ್ರು ಮುಂದೆ ಹೌಸ್ ಫುಲ್ ಬೋರ್ಡ್ ಹಾಕ್ಸಿ… ಅದೆಷ್ಟು ಸಿನಿಪ್ರೇಮಿಗಳನ್ನ ನೀವು ವಾಪಸ್ ಕಳಿಸಿಲ್ಲ? ಅಥವಾ ನೆಕ್ಸ್ಟ್ ಶೋಗೋಸ್ಕರ ಟಿಕೆಟ್ ಗಾಗಿ ಕಾಯಿಸಿಲ್ಲ? ಅಥವಾ ಒಳಗೆ ಸೀಟ್ ಇದ್ದಾಗ್ಲೂ ಟಿಕೆಟ್ ಗಳು ಬ್ಲಾಕ್ ನಲ್ಲಿ ವ್ಯಾಪಾರ ಆಗೋ ಹಾಗೆ ಮಾಡಿಲ್ಲ?
(ಬ್ಲಾಕ್ ಗೂ ನಮಗೂ ಸಂಬಂಧ ಇಲ್ಲ. ಅದು ಥೇಟ್ರವ್ರ ಒಳವ್ಯವಹಾರ ಅಂತ ನೀವ್ ಜಾರ್ಕೊಳ್ಬಹುದು. ಆದರೆ ಐನೂರ್ ರುಪಾಯ್ ಬ್ಲಾಕಲ್ ಹೋಗ್ತಿದೆ.. ಸಾವ್ರ್ ರೂಪಾಯ್ಗೆ ಬ್ಲಾಕಲ್ ಹೋಗ್ತಿದೆ ಅಂತ ಓಪನ್ನಾಗಿ ಸಂಭ್ರಮಿಸಿರೋದನ್ನ ನಾವೆಲ್ಲ ಬೇಕಾದಷ್ಟ್ ಸಲ ನೋಡಿದೀವಿ)
ಇದು ನಿಮಗೆ ಯಾವತ್ತೂ ತಪ್ಪನಿಸಿಲ್ವಾ?
ನಿಮ್ಮ ಪ್ರತಿಷ್ಟೆಗೋ, ಇನ್ಯಾರಿಗೋ ಥೇಟ್ರು ಸಿಗ್ದೇ ಇರೋ ಹಾಗ್ ಮಾಡಕ್ಕೋ… ಇನ್ನೇನಕ್ಕೋ… ಅಥ್ವಾ ಐವತ್ ದಿನ ನೂರ್ ದಿನ ಓಡಿಸ್ಲೇಬೇಕು ಎಂಬ ಹಟಕ್ಕಾಗಿ ಅದೆಷ್ಟು ಸಲ ಸುಮ್ ಸುಮ್ನೆ ಟಿಕೆಟ್ ಹರಿಸಿಲ್ಲ ನೀವು ಸಿನ್ಮಾದವ್ರು?
ಮಲ್ಟಿಪ್ಲೆಕ್ಸವ್ರು ಅಥ್ವಾ ಬುಕ್ ಮೈ ಶೋದವ್ರು ಮಾಡಿದ್ದು ಅಸ್ಲೀ ಹಲ್ಕಾ ಕೆಲ್ಸ. ನೀವ್ ಮಾಡಿದ್ದು ಮಾಡ್ತಿರೋದು ಏನು??
ಒಂದಲ್ಲ ಎರಡಲ್ಲ ಸುಮಾರು ಸಿನಿಮಾಗಳ ಫಸ್ಟ್ ಡೇ ಫಸ್ಟ್ ಶೋ ಡೀಟೇಲ್ಸನ್ನ ಬುಕ್ ಮೈ ಶೋ ಲಿಸ್ಟಲ್ಲಿ ನಾನು ಗಮನಿಸಿದೀನಿ. ಸೋಲ್ಡ್ ಔಟ್ ಫಾಸ್ಟ್ ಫಿಲ್ಲಿಂಗ್ ಅಂತ ಇರೋದು ನೋಡಿ ಖುಷಿ ಪಟ್ಟಿರೋದಕ್ಕಿಂತ ಹೆಚ್ಚು ಬಾರಿ ಅನುಮಾನಪಟ್ಟಿದೀನಿ.
ಇದೂ ಕೂಡ ಸಿನಿಮಾದವ್ರೇ ಬುಕ್ ಮಾಡಿಸಿ ಬ್ಲಾಕ್ ಮಾಡಿರಬಹುದಾ ಅಂತ!
ಯಾವುದೋ ಒಂದು ಕ್ಲಬ್, ಪ್ರೈಮ್ ಸಿಲ್ವರ್ ಹೀಗೆ ಯಾವುದೋ ಒಂದು ಮೂವತ್ತು ಸೀಟಿನ ಕ್ಲಾಸು ಫುಲ್ ಆಗಿರೋದನ್ನೇ ಹೈಲೈಟ್ ಮಾಡಿ ಮಲ್ಟಿಪ್ಲೆಕ್ಸ್ ಹೌಸ್ ಫುಲ್ ಎಂದು ಸ್ಕ್ರೀನ್ ಶಾಟ್ ಹಾಕಿರೋವ್ರನ್ನೂ ನೋಡಿದೀನಿ.
ಮೊನ್ನೆ ಐನಾಕ್ಸಲ್ಲಿ ಒಂದು ಸಿನಿಮಾ. ಫಸ್ಟ್ ಡೇ ಫಸ್ಟ್ ಷೋ..
ಬುಕ್ ಮೈ ಶೋ ಗಮನಿಸಿದೆ.
ಪ್ರೈಮ್- ಫಾಸ್ಟ್ ಫಿಲ್ಲಿಂಗ್
ಮಿಕ್ಕಿದ್ದು ಅವೇಲೆಬಲ್ ಅಂತ ತೋರಿಸ್ತಿತ್ತು.
ಟಿಕೆಟ್ ತಗೊಂಡು ಒಳಗೆ ಹೋದೆ.. ಇಡೀ ಥೇಟ್ರು ಖಾಲಿ. ನಾನೊಬ್ನೇ ಇಡೀ ಥೇಟ್ರಿಗೆ.
ಪ್ರೈಮ್ ಫಾಸ್ಟ್ ಫಿಲ್ಲಿಂಗ್ ಅಂತ ಇತ್ತಲ್ಲ.. ಅದು ಇರೋದೇ ಒಂದು ರೋ ಅಲ್ಲಿ!
ಅಂದ್ರೆ ಸುಮಾರು ಇಪ್ಪತ್ತು ಸೀಟು. ಬಹುಶಃ ಅದರಲ್ಲಿ ನಾಲ್ಕೋ ಐದೋ ಸೀಟು ರಿಸರ್ವ್ ಆದ್ರೂ ಅವೇಲೆಬಲ್ ಅನ್ನೋ ಸೂಚನೆ ಫಾಸ್ಟ್ ಫಿಲ್ಲಿಂಗ್ ಆಗಿ ಬದಲಾಗತ್ತೆ…
ಜನ ನೋಡ್ತಿರೋ ಸಿನಿಮಾಗಳ ವಿಷಯದಲ್ಲಿ ಸಿನಿಮಾಗೂ ಬುಕ್ ಮೈ ಷೋಗೂ ಒಪ್ಪಂದವೂ ಇರಬಹುದು ಎಂಬ ಅನುಮಾನ ನನ್ನಲ್ಲಿದೆ.
(ಒಪ್ಪಂದ ಅಂದ್ರೆ ನಾನು ಹೇಳ್ತಿರೋದು ಜೆನ್ಯೂನ್ ಒಡಂಬಡಿಕೆ )
ಅಷ್ಟನ್ನೂ ಬುಕ್ ಮೈ ಷೋಗೆ ನೀಡದೆಯೇ… ಆಫ್ ಲೈನ್ ಸೇಲ್ ಗೆ ಒಂದಷ್ಟು ಆನ್ ಲೈನ್ ಸೇಲ್ ಗೆ ಒಂದಷ್ಟು ಎಂದು ಡಿವೈಡ್ ಮಾಡಿಕೊಳ್ಳುವ ಒಪ್ಪಂದ.
ಹೀಗಾಗಿ ನೂರು ಸೀಟ್ ಇರೋ ಥೇಟ್ರಲ್ಲಿ ಐವತ್ತು ಬುಕ್ ಮೈ ಶೋ ಐವತ್ತು ಆಫ್ ಲೈನ್ ಸೇಲ್ ಅಂತ ಒಪ್ಪಂದ ಇದ್ರೆ…
ಆ ಐವತ್ತು ಸೇಲ್ ಆದ ಕೂಡಲೇ ಬುಕ್ ಮೈ ಷೋ ಸೋಲ್ಡ್ ಔಟ್ ಎಂದು ತೋರಿಸುವುದು ಅನಿವಾರ್ಯ.
ನಂದಿನಿಯಲ್ಲಿ ಹೀಗಾಗಿದ್ದು ನೋಡಿದ್ದೇನೆ.
ಬುಕ್ ಮೈ ಷೋಲಿ ಸೋಲ್ಡ್ ಔಟ್ ಅಂತ ತೋರಿಸಿದ ಮೇಲೂ ಕೌಂಟರಲ್ಲಿ ಟಿಕೆಟ್ ಸಿಕ್ತಾ ಇದ್ದದ್ದು ಕಂಡಿದೀನಿ.
ಕೌಂಟರಲ್ಲಿ ಹೌಸ್ ಫುಲ್ ಆದಮೇಲೂ ಬುಕ್ ಮೈ ಷೋಲಿ ಟಿಕೆಟ್ ಸಿಕ್ಕಿದ್ದಿದೆ.
ಒಟ್ಟಾರೆಯಾಗಿ ಇಲ್ಲಿ ಪಾರದರ್ಶಕತೆ ಮತು ಸ್ಪಷ್ಟತೆ ಇಲ್ಲ ಅನ್ನೋದಂತೂ ಸತ್ಯ.
ಪಾರದರ್ಶಕತೆ ಬೇಕು ಅಂತ ಪ್ರೇಕ್ಷಕರಿಗೆ ಅನ್ಸತ್ತೆ. ಸೋತ ನಿರ್ಮಾಪಕನಿಗೆ ಅನ್ಸತ್ತೆ. ಆಕ್ಟರ್ ನಂಥ ಒಬ್ಬ ನಟನಿಗೆ ಅನ್ಸತ್ತೆ. ಆದರೆ ಇದು ಸ್ಟಾರ್ ಗಳಿಗೆ… ಬ್ಲಾಕ್ ಮನಿಯಲ್ಲಿ ಉಂಡೇಳೋ ಶೋಕಿ ನಿರ್ಮಾಪಕನಿಗೆ… ನಿರ್ಮಾಪಕರಿಗೆ ಮುಂಡಾಯ್ಸಿ ಮುಂದಿನ್ ಸಿನ್ಮಾಗೆ ಸ್ಕೆಚ್ ಹಾಕೋ ನಿರ್ದೇಶಕರಿಗೆ ಯಾವತ್ತೂ ಅನ್ಸಲ್ಲ.
ಇಲ್ಯಾವ ಗೆದ್ದ ನಿರ್ಮಾಪಕನೂ ತನ್ನ ನಿಜವಾದ ಲಾಭಗಳಿಕೆಯನ್ನು ಹೇಳಿಕೊಳ್ಳೋಲ್ಲ. ಟ್ಯಾಕ್ಸ್ ಪ್ರಾಬ್ಲಮ್ಮು, ಸಾಲ ಕೊಟ್ಟವರ ಪ್ರಾಬ್ಲಮ್ಮು.. ಸಿನಿಮಾದಲ್ಲಿ ತಾನು ತಂತ್ರಜ್ಞರಿಗೆ ನಟನಟಿಯರಿಗೆ ಕೊಡಬೇಕಾದ ಬಾಕಿ ನೀಡಬೇಕಾದ ಇಕ್ಕಟ್ಟು. ಯಾರ್ ಯಾರ್ ಹತ್ರನೋ ದುಡ್ ಹಾಕ್ಸಿ ಡಮ್ಮಿ ಸಹ ನಿರ್ಮಾಪಕರನ್ನು ಮಾಡ್ಕಂಡು ಗಿಂಜಿರೋ ದುಡ್ಡು ವಾಪಸ್ ಕೊಡೋ ಹಾಗ್ ಆದ್ರೆ ಅಂತ.. ಲಾಭ ಆದ್ರೂ ಲಾಸ್ ಅಂತನೇ ಹೇಳ್ತಾನೆ.
ಯಾವ ನಿರ್ದೇಶಕನೂ ತನ್ನ ಸಿನಿಮಾ ಸೋತಿದೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳೋಲ್ಲ. ಲಾಭ ಬಂದಿದೆ ನಿರ್ಮಾಪಕರು ಹೇಳ್ಕೊಳ್ತಿಲ್ಲ ಅಷ್ಟೆ ಅಂತಾನೆ. ಅಥವಾ ಒಳ್ಳೇ ಸಿನಿಮಾ ನಿರ್ಮಾಪಕರು ಉಳಿಸ್ಕೊಳ್ಲಿಲ್ಲ ಕೊಂದ್ ಬಿಟ್ರು ಅಂತ ಗೂಬೆ ಕೂರಿಸ್ತಾನೆ. ಯಾಕಂದ್ರೆ ತನಗೆ ಮುಂದಿನ ಸಿನಿಮಾ ಸಿಗಬೇಕು ಅಂದ್ರೆ ಇದು ಗೆದ್ದ ಸಿನಿಮಾ ಎಂಬಂತೆಯೇ ಮಾತನಾಡುವ ಅನಿವಾರ್ಯತೆ ಅವನಿಗೆ.
ಸ್ಟಾರ್ ಗಳೂ ಅಷ್ಟೆ. ತಮ್ಮ ಸಿನಿಮಾ ಸೋತಿದೆ ಅಂತ ಒಪ್ಕೊಳಲ್ಲ. ಮೊದಲ ದಿನದ್ದೋ ಮೊದಲ ವಾರದ್ದೋ ಕಲೆಕ್ಷನ್ ತೋರಿಸ್ಕೊಂಡ್ ತಮ್ಮ ಸಂಭಾವನೆ ಏರಿಸ್ಕೊಳೋಕೋಸ್ಕರ! ಆಮೇಲೆ ಬೇಕಾದ್ರೆ ಸ್ವಂತ ದುಡ್ಡಲಾದ್ರೂ ನೂರ್ ದಿನ ಓಡಿಸ್ತಾರೆ. ಅಥ್ವಾ ಪ್ರೊಡ್ಯೂಸರ್ ಗೆ ಧಮ್ಕಿ ಹಾಕಿಯೋ… ಡಿಸ್ಟ್ರಿಬ್ಯೂಟರ್ ನ ಕಾಲಿಗ್ ಬಿದ್ದೋ… ಅಂಡರ್ ವರ್ಲ್ಡ್ ನಿಂದ ಫೋನ್ ಮಾಡಿಸಿಯೋ… ಐವತ್ತು ನೂರು ದಿನ ಪೂರೈಸೋ ಹಾಗೆ ಮಾಡ್ತಾರೆ.
ಅದ್ಕೇ ಈಗ ಮಲ್ಟಿಪ್ಲೆಕ್ಸಲ್ಲಿ ಇಂಥ ಅನ್ಯಾಯ ನಡೀತಿದ್ರೂ ಒಂದೋ ಎರ್ಡೋ ಧ್ವನಿಗಳು ಬಿಟ್ಟು ಚಿತ್ರೋದ್ಯಮದ ದೊಡ್ಡ ತಲೆಗಳ್ಯಾವುವೂ ಮಾತನಾಡ್ತಿಲ್ಲ.
ಕಿರಿಕ್ ಆದ ಕೂಡ್ಲೇ ಒಂದ್ಸಲ ಛೇಂಬರಲ್ಲಿರೋವ್ರು ತಾವ್ ಇದೀವಿ ಅನ್ನೋ ಥರ ಒಂದ್ ರೌಂಡ್ ಮಾತಿನ ಶಾಸ್ತ್ರ ಮಾಡ್ತಾರಷ್ಟೆ.
ಅವ್ರೂ ಥೇಟ್ರವ್ರೊಂದಿಗೆ ಮಲ್ಟಿಪ್ಲೆಕ್ಸ್ ಗಳೊಂದಿಗೆ ಬೇರೆಯೇ ಥರದಲ್ಲಿ ಶಾಮೀಲಾಗಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸ್ತಿದೆ.
ಇಲ್ಲಿ ಕೀರ್ತಿ, ದಯಾಳ್, ನವೀನ್ ಕೃಷ್ಣ, ವೀರೇಶ್ ಹೀಗೆ ಯಾರೋ ನಾಲ್ಕೈದ್ ಜನ ಕೂಗಾಡಿದ್ರೆ ಏನ್ ಉಪ್ಯೋಗ? ಫೇಸ್ ಬುಕ್ಕಲ್ಲಿ ಸಾವ್ರ ಜನ ಕೀರ್ತಿ ಮಾತಾಡಿರೋದನ್ನ ಮೆಚ್ಚಿ ಶೇರ್ ಮಾಡಿದ್ರೂ ಏನ್ ಪ್ರಯೋಜ್ನ?
ಪ್ರಯೋಜ್ನ ಇದೆ.
ಧ್ವನಿ ಎದ್ದಿದೆ. ಪೂರ್ತಿ ಸರಿ ಆಗೋ ತನಕ ಧ್ವನಿ ನಿಲ್ಲಬಾರ್ದು. ಇದಕ್ಕೆ ಸ್ಟಾರ್ ಗಳು… ಜೆನ್ಯೂನ್ ನಿರ್ಮಾಪಕರು, ನಿರ್ದೇಶಕರು…
(ಇಷ್ಟ್ ದಿನ ಹಲ್ಕ ಕೆಲ್ಸ ಮಾಡಿದವ್ರು ಇನ್ಮುಂದೆ ಸರಿ ಹೋಗೋಣ ಅಂತ ಬಂದ್ರೂ ಓಕೆ) ಎಲ್ರೂ ಸೇರ್ಕೊಂಡ್ ಬರ್ಬೇಕು. ಹಾಗೆ ಒಗ್ಗೂಡ್ಸೋ ಕೆಲ್ಸ ಮಾಡ್ಬೇಕು
“ಅನ್ಯಾಯ ಆಗಿರೋದು ಅವ್ರಿಗೆ ತಾನೆ… ನಮ್ಗಲ್ವಲ್ಲ… ನಾವ್ ಯಾರಿಗೋ ಸಪೋರ್ಟ್ ಮಾಡೋಕ್ ಹೋಗಿ ಇನ್ಯಾರನ್ನೋ ಎದ್ರ್ ಹಾಕ್ಕಂಡ್ ನಮ್ ಮುಂದಿನ್ ಸಿನ್ಮಾಗಳಿಗೆ ತೊಂದ್ರೆ ಮಾಡ್ಕಳದ್ ಬೇಡಪ್ಪಾ..”
ಈ ಥರದ ಮನಸ್ಥಿತಿಗಳನ್ನು ಬಿಟ್ಟು ಬರಬೇಕು..
ಕೆಲ್ಸ ಆಗತ್ತೆ..
ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೊಫೆಶನಲಿಸಮ್ ಬಂದ್ರೆ ಎಲ್ಲ ಸಿನಿಮಾಗಳೂ ಗೆಲ್ತವೆ. ಗೆದ್ದೇ ಗೆಲ್ತವೆ.
ಯಾಕ್ ಗೆಲ್ಲಲ್ಲ ನೋಡೋಣ.

  • ನವೀನ್ ಸಾಗರ್

Share post:

Subscribe

spot_imgspot_img

Popular

More like this
Related

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...