ಕನ್ನಡ ಕನ್ನಡ ಎಂದು ನೀವು ಬೊಬ್ಬೆ ಹೊಡಿತಾ ಇದ್ರೆ ಕನ್ನಡ ಕಲಿತ ಮಕ್ಕಳು ನೀರಿನೊಳಗಿರೋ ಕಪ್ಪೆಗಳಂತಾಗಿ ಬಿಡ್ತಾರೆ.. ಹೌದು ಕನ್ನಡ ಕಲಿತ ಮಕ್ಕಳಿಗೆ ಸರ್ಕಾರ ನೀಡ್ತಾ ಇರೋ ಅವಕಾಶಗಳೇನು..? ಹೀಗೆಂದು ಪ್ರಶ್ನೆ ಮಾಡಿದ್ದು ಬೇರ್ಯಾರು ಅಲ್ಲ ರಾಜ್ಯ ಹೈಕೋರ್ಟ್ ನ್ಯಾಯ ಮೂರ್ತಿಗಳಾದ ಆನಂದ ಬೈರಾರೆಡ್ಡಿ ಅವರು.
ಪ್ರಕರಣವೊಂದರ ವಿಚಾರಣೆ ವೇಳೆ ಮಾತನಾಡಿದ ಬೈರಾರೆಡ್ಡಿ ಅವರು ಸರ್ಕಾರಿ ವಕೀಲ ಚೇತನ್ ದೆಸಾಯಿ ಅವರ ಹೇಳಿಕೆಯನ್ನುದ್ದೇಶಿಸಿ ಮಾತನಾಡುವಾಗ ಕನ್ನಡ ಕನ್ನಡ ಅಂತ ಬೊಬ್ಬೆ ಹೊಡಿತಾ ಇದ್ರೆ ಕನ್ನಡದ ಮಕ್ಕಳು ಕೇವಲ ಬಾವಿಯಲ್ಲಿರೋ ಕಪ್ಪೆಗಳಾಗ್ತಾರೆ ಅಷ್ಟೇ..! ರಾಜ್ಯ ಸರ್ಕಾರ ಕನ್ನಡ ಓದಿದ ಮಕ್ಕಳಿಗೆ ಯಾವ ರೀತಿಯ ಅವಕಾಶಗಳನ್ನು ನೀಡ್ತಾ ಇದೆ..? ಕನ್ನಡದಲ್ಲೇ ಕಲಿತ ಮಕ್ಕಳಿಗೆ ಮುಂದಿನ ಭವಿಷ್ಯದಲ್ಲಿ ಇರುವ ಅವಕಾಶಗಳಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಮಕ್ಕಳು ಕನ್ನಡ ಕಲಿತು ಇಲ್ಲೇ ಉಳಿಯಬೇಕೆಂಬದು ನಿಮ್ಮ ಆಸೆನಾ..? ಎಂದಿರುವ ಅವರು ಒಂದು ಮಗು ತಾನು ಬಾಲ್ಯದಲ್ಲಿ ಕಲಿತದ್ದು ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂಬುದು ನಿಮ್ಮ ವಾದವಾದರೆ ಐದನೇ ತರಗತಿಯವರೆಗೆ ಕನ್ನಡ ಕಡ್ಡಾಯ ಮಾಡಿ ಮಾಧ್ಯಮಿಕ ತರಗತಿಯಲ್ಲಿ ಇಂಗ್ಲೀಷ್ ಭೋಧಿಸಿದರೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.
ದೂರು ದಾಖಲು: ಬೆಂಗಳೂರು ನಗರ ಬೇಗೂರು ಬಳಿಯ ಎನ್‍ಎಸ್ ಪಾಳ್ಯದಲ್ಲಿ ಪರೋಹರ್ ಗ್ಲೋಬಲ್ ಫೌಂಡೇಶನ್ ನಡೆಸುತ್ತಿರುವ ವಿಬ್‍ಗಯಾರ್ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಕಾಯ್ದೆ ಉಲ್ಲಂಘಿಸಿದೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ವಲಯದ ಶಿಕ್ಷಣಾಧಿಕಾರಿ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2014ರ ನವೆಂಬರ್‍ನಲ್ಲಿ ದಾಖಲಿಸಲಾದ ಈ ದೂರಿನಲ್ಲಿ ಈ ಸಂಸ್ಥೆ ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸಲು ಅನುಮತಿ ಕೋರಿಕೊಂಡು ಇಂಗ್ಲೀಷ್ ಮಾಧ್ಯಮದಲ್ಲಿ ಭೋಧಿಸುತ್ತಿದೆ. ಇದಕ್ಕೆ ಸರ್ಕಾರದಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
POPULAR STORIES :
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!