ಕನ್ನಡದವರು ಅಮೆರಿಕದಲ್ಲಿ ಹೋಗಿ ಸೆಟಲ್ ಆಗೋದು ಹೊಸದೇನೂ ಅಲ್ಲ ಬಿಡಿ..! ಆದ್ರೆ ಅಲ್ಲಿಗೆ ಹೋದ ಮೇಲೂ ಕನ್ನಡವನ್ನು ಮರೆಯದೇ, ಕನ್ನಡವನ್ನು ಅಲ್ಲೂ ಫೇಮಸ್ ಮಾಡೋರ ಸಂಖ್ಯೆ ಸಖತ್ ಕಮ್ಮಿ..! ಆದ್ರೆ ಇಂಜಿನಿಯರ್ ಆಗಿ ಅಮೆರಿಕಕ್ಕೆ ಹೋದ್ರೂ ಸಹ, ಅಲ್ಲಿ ಕನ್ನಡ ಭಾಷೆಯನ್ನು ತಮ್ಮದೇ ಸ್ಟೈಲಲ್ಲಿ ಸಿಕ್ಕಾಪಟ್ಟೆ ಫೇಸ್ ಮಾಡಿರೋರು ಮಲ್ಲಿ ಸಣ್ಣಪ್ಪನವರ್ ಅಲಿಯಾಸ್ ಕನ್ನಡಮಲ್ಲಿ..!
ಯೂಟ್ಯೂಬ್ ನಲ್ಲಿ ಕನ್ನಡ ಮಲ್ಲಿ ಅಂತ ಸರ್ಚ್ ಮಾಡಿನೋಡಿ, ರಾಶಿರಾಶಿ ವೀಡಿಯೋಗಳು ಸಿಗುತ್ತೆ, ಅದ್ರಲ್ಲೂ ಒಂದೊಂದು ರೀತಿಯಲ್ಲಿ ಡಿಫರೆಂಟ್ ಅಂಡ್ ಎಂಟರ್ ಟೇನಿಂಗ್.. ಕನ್ನಡಮಲ್ಲಿ ಅಂತಲೇ ಅಮೆರಿಕದಲ್ಲೂ ಫೇಮಸ್ ಆಗಿರೋ ಸಣ್ಣಪ್ಪನವರ್ ಮೂಲತಃ ಬ್ಯಾಡಗಿ ಸಮೀಪದ ಕದರಮಂಡಲಗಿಯವರು. ಇಂಜಿನಿಯರ್ ಮುಗಿದ ಮೇಲೆ ಅಮೆರಿಕ ಕೈಬೀಸಿ ಕರೀತು. ನಮ್ಮೂರ ಹುಡುಗ ಅಮೆರಿಕ ಸೇರಿದ ಮೇಲೆ ಇಂಗ್ಲೀಷ್ ಪುತ್ರ ಆಗ್ತಾನೆ ಅಂತ ಎಲ್ಲರೂ ಅನ್ಕೊಂಡಿದ್ರು. ಆದ್ರೆ ಮಲ್ಲಿ ಹಾಗಲ್ಲ..! ಅಲ್ಲಿಗೆ ಹೋದಮೇಲೆ, ದಾರಿ ದೂರ ಇದ್ದರೂ, ಪ್ರೀತಿ ಹತ್ತಿರವಿರಲಿ ಅನ್ನೋ ಹಾಗೆ, ಕನ್ನಡ ಪ್ರೀತಿ ಜಾಸ್ತಿ ಆಯ್ತು..! ಈ ಹಿಂದೆಯೂ ಶಾಲಾಕಾಲೇಜು ದಿನಗಳಲ್ಲೇ ನಾಟಕ, ಡ್ರಾಮಾ, ಮ್ಯಾಡ್ ಆಡ್ಸ್ ಮಾಡ್ತಿದ್ದ ಮಲ್ಲಿ, ಅಮೆರಿಕದಲ್ಲೂ ತಮ್ಮ ಇಂಟರೆಸ್ಟ್ ಕಂಟಿನ್ಯೂ ಮಾಡಿದ್ರು..! ನ್ಯೂಯಾರ್ಕ್, ನ್ಯೂಜೆರ್ಸಿ, ಅಟ್ಲಾಂಟಾ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳಲ್ಲಿ ಕನ್ನಡ ಕಂಪು ಹರಿಸಿದ್ರು..! 2010ರ ಅಕ್ಕ ಸಮ್ಮೇಳನದಲ್ಲಿ ಅಮೆರಿಕದಲ್ಲಿ ಯಮರಾಜ ಅನ್ನೋ ನಾಟಕ ಬರೆದು, ನಿರ್ದೇಶಿಸಿ ಸಖತ್ ಪ್ರಶಂಸೆ ಗಳಿಸಿದ್ರು..! ಜೊತೆಜೊತೆಗೆ ಆಸಕ್ತಿ ಯೂಟ್ಯೂಬ್ ಕಡೆ ಹೊರಳ್ತು. ಅದರ ಪರಿಣಾಮವಾಗಿ ರೆಡಿಯಾಗಿದ್ದು `ಯಡಿಯೂರಪ್ಪ ಮಹಾತ್ಮೆ’.. ಅದು ಅಂತಿಂಥ ಹಿಟ್ ಆಗ್ಲಿಲ್ಲ, ಲಕ್ಷಾಂತರ ಜನ ನೋಡಿದ್ರು, ಸಾವಿರಾರು ಜನ ಶೇರ್ ಮಾಡಿದ್ರು..! ಕನ್ನಡ ಮಾಧ್ಯಮಗಳೂ ಕನ್ನಡ ಮಲ್ಲಿಯ ವೀಡಿಯೋಗಳನ್ನು ಟೆಲಿಕಾಸ್ಟ್ ಮಾಡಿದ್ವು..! ಮಲ್ಲಿ ಮಾಡೋ ರಾಜಕೀಯ ಅಣಕ ಗೀತೆಗಳು ಸಿಕ್ಕಾಪಟ್ಟೆ ಫೇಮಸ್.. ಅವರ ಉತ್ತರ ಕರ್ನಾಟಕ ಶೈಲಿಯ ಸಾಹಿತ್ಯ, ಗಾಯನ ಸಖತ್ ಮಜಾ ಕೊಡುತ್ತೆ.. ಇತ್ತೀಚಿನ ಜವಾರಿ ಸ್ಟೈಲ್ ಸಹ ಹಿಟ್ ಆಗಿತ್ತು.. ಪ್ರಸ್ತುತ ಅವರ ಪುಟ್ಟ ಕುಟುಂಬದ ಜೊತೆ ಅಮೆರಿಕದಲ್ಲೇ ವಾಸವಿರೋ ನಮ್ಮ ಕನ್ನಡದ ಮಲ್ಲಿಯ ವೀಡಿಯೋ ನೋಡಿ, ನಮ್ಮ ಸಣ್ಣಪ್ಪನವರಿಗೆ ಆಲ್ ದಿ ಬೆಸ್ಟ್ ಹೇಳಿ..
Video :