ರತನ್ ಟಾಟಾ ಅವರಿಗೇ ಅವಮಾನ ಮಾಡಿತ್ತು ಫೋರ್ಡ್.! ಹತ್ತು ವರ್ಷದಲ್ಲೆ ಹೆಂಗೆ ಉತ್ತರ ಕೊಟ್ಟರು ಗೊತ್ತಾ…?

1
91
ಯಾರಿಗೇ ಆಗ್ಲಿ, ಅವಮಾನ ಆದ್ರೆ ಮಾತ್ರ ಸಹಿಸೋಕೆ ಸಾಧ್ಯವೇ ಇಲ್ಲ..! ಅವನು ಕಡುಬಡವನೇ ಆಗ್ಲಿ, ಸಖತ್ ಶ್ರೀಮಂತನೇ ಆಗ್ಲಿ, ಯಾರಾದ್ರೂ ಎದುರಿಗೆ ಕೂತು ಅವಮಾನ ಆಗೋ ತರ ನಾಲ್ಕು ಮಾತಾಡಿಬಿಟ್ರೆ ತಲೆಕೆಟ್ಟು ಹನ್ನರೆಡಾಣೆ ಆಗಿಬಿಡುತ್ತೆ..! ಅಂತದ್ರಲ್ಲಿ ದಿ ಗ್ರೇಟ್ `ರತನ್ ಟಾಟಾ’ ಅವರಿಗೆ ಅವಮಾನ ಆದ್ರೆ ಹೇಗಾಗಬೇಡ..! ಅಂತಹ ಪರಿಸ್ಥಿತಿ ರತನ್ ಟಾಟಾ ಎದುರಿಸಿದ್ರು..! ಆದ್ರೆ ಆ ಅವಮಾನಕ್ಕೆ ಅವರು ಕೊಟ್ಟ ಉತ್ತರ ಇದಿಯಲ್ಲ, ಅದು ಮಾತ್ರ ಸೂಪರ್..! ಟೈಮ್ ಒಂದೇ ತರ ಇರಲ್ಲ ಅನ್ನೋಕೆ ರತನ್ ಟಾಟಾ ಅವರ ಈ ಅವಮಾನದ ಸ್ಟೋರೀನೇ ಬೆಸ್ಟ್ ಉದಾಹರಣೆ..! ಓದಿ, ಹತ್ತು ವರ್ಷದಲ್ಲಿ ಇತಿಹಾಸ ಬದಲಿಸಿದ ಓದಿ ಆ ಅದ್ಭುತ ಸ್ಟೋರಿಯನ್ನು..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಟಾಟಾ ಅಂದ್ರೆ ಇಂಡಿಯಾದಲ್ಲಿ ಯಾರಿಗೆ ತಾನೇ ಗೊತ್ತಿಲ್ಲ..! ಮಿನಿ ಬಸ್ಸು, ಮೀಡಿಯಂ ಬಸ್ಸು, ದೊಡ್ಡ ಬಸ್ಸು, ಲಾರಿ, ಸಣ್ಣ ಲಾರಿ, ದೊಡ್ಡ ಲಾರಿ, 16 ಚಕ್ರದ ಲಾರಿ, 20 ಚಕ್ರದ ಲಾರಿ ಹೀಗೆ ಎಲ್ಲೆಲ್ಲೂ ಟಾಟಾ.. ಎಲ್ಲೆಲ್ಲೂ ಟಾಟಾ..! ದೊಡ್ಡ ವಾಹನಗಳ ಇಂಡಸ್ಟ್ರಿಯಲ್ಲಿ ಕಿಂಗ್ ಆಗಿದ್ದ ಟಾಟಾ ಗ್ರೂಪ್, ತನ್ನ ಕಂಪನಿಯಿಂದ ಕಾರುಗಳನ್ನೂ ತಯಾರು ಮಾಡಿದ್ರೆ ಹೇಗೆ ಅಂತ ಯೋಚನೆ ಮಾಡಿ, ಟಾಟಾ ಇಂಡಿಕಾ ಕಾರುಗಳನ್ನು ಮಾರುಕಟ್ಟೆಗೆ ತರೋಕೆ ಡಿಸೈಡ್ ಮಾಡ್ತು..! 2008ರಲ್ಲಿ ಟಾಟಾ ಇಂಡಿಕಾ ರಿಲೀಸ್ ಮಾಡೇ ಬಿಟ್ರು ರತನ್ ಟಾಟಾ..! ಆದ್ರೆ ಲಾರಿ-ಬಸ್ಸುಗಳು ಕೈಹಿಡಿದ ಹಾಗೆ ಈ ಇಂಡಿಕಾ, ಟಾಟಾದವರ ಕೈ ಹಿಡೀಲಿಲ್ಲ..! ಮೊದಲ ವರ್ಷದಲ್ಲೇ ಇಂಡಿಕಾಗೆ ಉಳಿದ ಕಾರುಗಳ ವಿರುದ್ಧ ಹೋರಾಡೋ ಶಕ್ತಿ ಇಲ್ಲ ಅನ್ನೋದು ಟಾಟಾದವರಿಗೆ ಗೊತ್ತಾಗಿಬಿಡುತ್ತೆ..! ಇನ್ನು ಇದನ್ನು ಇಟ್ಟುಕೊಳ್ಳೋದು ಬೇಡ, ನಮಗೆ ನಮ್ಮ ಬಸ್ಸು-ಲಾರಿ ಸಾಕು ಅಂತ ಡಿಸೈಡ್ ಮಾಡಿ, ಫೋರ್ಡ್ ಕಂಪನಿಗೆ ಒಂದು ಆಫರ್ ಕೊಡ್ತಾರೆ..! ನಮ್ಮ ಇಂಡಿಕಾ ಕಾರಿನ ಕಂಪ್ಲೀಟ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್, ಮಡೆಲ್, ಎಲ್ಲ ಸೇಲ್ ಮಾಡಿಬಿಡ್ತೀವಿ, ತಗೋತೀರಾ ಅಂತ..! ಅವರೂ ಒಪ್ಪಿಕೊಳ್ತಾರೆ..! ಟಾಟಾದ ಕೆಲವು ಅಧಿಕಾರಿಗಳ ಜೊತೆ ರತನ್ ಟಾಟಾ ಅವರು ಬಿಸ್ನೆಸ್ ಮಾತುಕತೆಗೆ ವಿಮಾನ ಹತ್ತಿಬಿಡ್ತಾರೆ.. ಡೀಲ್ ಮಾತುಕತೆ ಶುರುವಾಗುತ್ತೆ..!  ಫೋರ್ಡ್ ಕಂಪನಿಯ ಚೇರ್ಮನ್ ಬಿಲ್ ಫೋರ್ಡ್ ಸಹ ಮೀಟಿಂಗ್ ನಲ್ಲಿರ್ತಾರೆ..! ಬಿಸ್ನೆಸ್ ಡೀಲ್ ಜೊತೆಜೊತೆಗೆ ಫೋರ್ಡ್ ಟಾಟಾ ಅವರನ್ನು ಅವಮಾನಿಸೋಕೆ ಶುರು ಮಾಡ್ತಾರೆ..! ನಿಮಗೆ ಈ ಕಾರಿನ ಬಿಸ್ನೆಸ್ ಗೊತ್ತಿಲ್ಲ ಅಂದಮೇಲೆ ಸುಮ್ನೆ ಯಾಕೆ ಇದಕ್ಕೆಲ್ಲಾ ಕೈ ಹಾಕ್ತೀರಿ..? ನಮ್ಮಂತ ಕಂಪನಿಗಳ ಜೊತೆ ಹೋರಾಡೋ ತಾಕತ್ತು ನಿಮಗೆಲ್ಲಿದೆ..? ಹಾಗೇ ಹೀಗೇ ಅಂತ..! ರತನ್ ಟಾಟಾ ಅವರಿಗೆ ಈ ಅವಮಾನ ಸಹಿಸಿಕೊಳ್ಳೋಕೆ ಸಾಧ್ಯವಾಗಲೇ ಇಲ್ಲ… ಅದರಲ್ಲೂ ಮಾತಿನ ನಡುವೆ ಫೋರ್ಡ್ ಅವರು ` ಈಗ ನಮ್ಮ ಕಂಪನಿ ಇಂಡಿಕ ತಗೊಂಡ್ರೆ, ಅದು ನಿಮಗೆ ಮಾಡೋ ಬಹಳ ದೊಡ್ಡ ಉಪಕರ’ ಅಂತ ಹೇಳಿದ ತಕ್ಷಣವೇ ತಮ್ಮ ಅಧಿಕಾರಿಗಳ ಟೀಂ ಜೊತೆ ಮೀಟಿಂಗ್ ರೂಮಿಂದ ಹೊರಬಂದ ರತನ್ ಟಾಟಾ ಭಾರತಕ್ಕೆ ವಾಪಸ್ ಹೊರಟುಬಿಡ್ತಾರೆ..!
ವಿಮಾನದಲ್ಲೇ ಡಿಸೈಡ್ ಮಾಡಿಬಿಟ್ಟಿದ್ರು..`ಏನಾಗುತ್ತೋ, ಹೇಗೆ ಮಾಡ್ತೀವೋ ಗೊತ್ತಿಲ್ಲ, ಟಾಟಾದವರು ಕಾರುಗಳ ಮಾರುಕಟ್ಟೆಯಲ್ಲೂ ಸೂಪರ್ ಸ್ಟಾರ್ ಅಂತ ಪ್ರಪಂಚಕ್ಕೆ ತೋರಿಸಬೇಕು’ ಅಂತ..! ನಿರ್ಧಾರ ಮಾಡಿದ ಮೇಲೆ ಫಿನಿಶ್..! ಅದು ಹಾಗೇ ಆಗುತ್ತೆ..! ಟಾಟಾ ಇಂಡಿಕಾವನ್ನು ಹೇಗೆಲ್ಲಾ ಸಾಧ್ಯವೋ ಅಷ್ಟು ಸುಲಭವಾಗಿ ಜನರಿಗೆ ತಲುಪಿಸೋ ಕಾರ್ಯ ಶುರುವಾಗುತ್ತೆ. ಎಲ್ಲೋ ಬೋರ್ಡ್ ಅಂದ್ರೆ ಟಾಟಾ ಇಂಡಿಕಾ ಅನ್ನೋ ಹಾಗೆ ಇಂಡಿಯಾದಲ್ಲೆಲ್ಲಾ ಇಂಡಿಕಾ ಹರಡಿಕೊಳ್ಳುತ್ತೆ..! ನೋಡನೋಡ್ತಿದ್ದ ಹಾಗೆ ಇಂಡಿಯಾದ ಒಂದು ಟ್ರಾಫಿಕ್ ಸಿಗ್ನಲ್ಲಲ್ಲಿ ಕನಿಷ್ಟ ಮೂರು ನಾಲ್ಕು ಇಂಡಿಕಾ ಕಾಣೊ ಹಾಗಾಗುತ್ತೆ..! ಆ ನಂತರ ಟಾಟಾದ ಬೇರೆಬೇರೆ ಕಾರುಗಳೂ ಸೂಪರ್ ಹಿಟ್ ಆಗುತ್ತೆ..! ಇಂಡಿಗೋ, ಸಫಾರಿ ಸೇರಿದಂತೆ ಹಲವು ಕಾರುಗಳು ಮನೆಮನೆ ತಲುಪುತ್ತೆ..! ಟಾಟಾ ಕಾರುಗಳು ಬೆಳೆದ ಪರಿ ನೋಡಿ ಜಗತ್ತಿನ ಮಹನ್ ಆಟೋಮೊಬೈಲ್ ಕಂಪನಿಗಳೆಲ್ಲಾ ಬೆರಗಾಗಿ ಹೋಗುತ್ತೆ..!
ಅದು 2008, ಈ ಕಡೆ ಟಾಟಾ ಯಶಸ್ಸಿನ ಉತ್ತುಂಗದಲ್ಲಿದ್ರೆ, ಆ ಕಡೆ ಫೋರ್ಡ್ ಕಂಪನಿ ಮುಳುಗುವ ಹಂತ ತಲುಪಿರುತ್ತೆ..! ಎಷ್ಟೇ ಒದ್ದಾಡಿದ್ರೂ ಕಂಪನಿ ಚೇತರಿಸಿಕೊಳ್ಳೋ ಲಕ್ಷಣಗಳೇ ಕಾಣೋದಿಲ್ಲ..! ಅದರಲ್ಲೂ ಫೋರ್ಡ್ ಕಂಪನಿಯ ಲಕ್ಷುರಿ ಕಾರುಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಅಂತೂ ಉತ್ಪಾದನೆಯನ್ನೇ ನಿಲ್ಲಿಸೋ ಹಂತ ತಲುಪಿಬಿಟ್ಟಿರುತ್ತೆ..! ಆಗ ಫೋರ್ಡ್ ಕಂಪನಿಗೆ ಆಫರ್ ಕೊಡೋದು ಯಾರು ಗೊತ್ತಾ..? ಅವತ್ತು ಇಂಡಿಕಾ ತಗೋತೀರಾ ಅಂತ ಕೇಳಿದ್ದ ಅದೇ ರತನ್ ಟಾಟಾ..! ಟಾಟಾ ಕೇಳಿದ್ದೇ ತಡ, ಬಿಲ್ ಫೋರ್ಡ್ ಅವರ ತಂಡದ ಜೊತೆ ಟಾಟಾರವರ ಮುಂಬೈ ನಿವಾಸ `ಬಾಂಬೆ ಹೌಸ್’ಗೆ ವಿಮಾನ ಹತ್ತೇಬಿಡ್ತಾರೆ..! ಮಾತುಕತೆ ನಡೆಯುತ್ತೆ..! 2.3 ಬಿಲಿಯನ್ ಡಾಲರ್ ಅಂದ್ರೆ, ಅವತ್ತಿನ 9300 ಕೋಟಿ ರೂಪಾಯಿಗೆ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕೊಂಡುಕೊಳ್ತಾರೆ ರತನ್ ಟಾಟಾ..! ಆಗ ಬಿಲ್ ಫೋರ್ಡ್ ಒಂದು ಮಾತು ಹೇಳ್ತಾರೆ.. `ನೀವು ನಮ್ಮ ಈ ಎರಡು ಲಕ್ಷುರಿ ಕಾರುಗಳ ಕಂಪನಿ ತಗೊಂಡು ನಮಗೆ ತುಂಬ ದೊಡ್ಡ ಸಹಾಯ ಮಾಡಿದ್ರಿ’ ಅಂತ..! ಸರಿಯಾಗಿ ಹತ್ತು ವರ್ಷಕ್ಕೆ ಇತಿಹಾಸ ಮರುಕಳಿಸಿತ್ತು..! ಆದ್ರೆ ಕೊಡುವವರು ಮತ್ತು ಕೊಳ್ಳುವವರು ಅದಲುಬದಲಾಗಿದ್ರು ಅಷ್ಟೆ..! ರತನ್ ಟಾಟಾ ಮರು ಮಾತನಾಡದೇ ಡೀಲ್ ಸೈನ್ ಮಾಡಿ. ವೈಭವದ ಆತಿಥ್ಯ ಕೊಟ್ಟು, ಫೋರ್ಡ್ ಕಂಪನಿಗೆ ಒಳ್ಳೇದಾಗಲಿ ಅಂತ ಹಾರೈಸಿ ಕಳಿಸಿದ್ರಂತೆ..!
ಅದಕ್ಕೇ ಹೇಳೋದು, ಯಾರಿಗೇ ಅವಮಾನ ಮಾಡೋಕೂ ಮುಂಚೆ ನೂರು ಸಲ ಯೋಚಿಸಿ. ಟೈಂ ಹಂಗೇ ಇರಲ್ಲ..! ಅದಕ್ಕೆ ಈ ಸ್ಟೋರಿ ಬೆಸ್ಟ್ ಉದಾಹರಣೆ..! ಟಾಟಾ ನಾಟ್ ಓನ್ಲಿ ದಿ ಗ್ರೇಟ್..! ಟಾಟಾ ಈಸ್ ಪ್ರೌಡ್ ಆಫ್ ಇಂಡಿಯಾ..!
– ಕೀರ್ತಿ ಶಂಕರಘಟ್ಟ

1 COMMENT

LEAVE A REPLY

Please enter your comment!
Please enter your name here