1 . ಪತ್ರಕರ್ತರಿಗೆ ಹಣ ತೋರಿಸಿದ ಖೇಣಿ..!
ಬೆಂಗಳೂರು-ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಮೂಲ ಒಪ್ಪಂದವನ್ನು ಉಲ್ಲಂಘನೆ ಮಾಡಿದ ಆರೋಪವನ್ನು ಎದುರಿಸುತ್ತಿರುವ ನೈಸ್ ಸಂಸ್ಥೆಯ ಮುಖ್ಯಸ್ಥ, ಶಾಸಕ ಅಶೋಕ್ ಖೇಣಿ ಸುದ್ದಿ ಗೋಷ್ಠಿಯಲ್ಲಿ ಪತ್ರಕರ್ತರಿಗೆ ಹಣ ತೋರಿಸಿ ಅವಮಾನಿಸಿದ ಘಟನೆ ನಡೆದಿದೆ.
ಸಕರ್ಾರಕ್ಕೆ ನೈಸ್ ಸಂಸ್ಥೆ 500 ಕೋಟಿ ವಂಚಿಸಿದ್ದು, ಈ ಹಣವನ್ನು ವಸೂಲಿ ಮಾಡುವಂತೆ ಸನೈಸ್ ಸದನ ಸಮಿತಿಯು ಸಕರ್ಾರಕ್ಕೆ ವರದಿ ನೀಡಿತ್ತು. ಈ ಬಗ್ಗೆ ಉತ್ತರಿಸಲು ಸುದ್ದಿಗೋಷ್ಠಿಯನ್ನು ಖೇಣಿ ಕರೆದಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರು, ಸಕರ್ಾರಕ್ಕೆ ನೈಸ್ ಸಂಸ್ಥೆ ಕಟ್ಟಬೇಕಿರುವ ದಂಡದ ಹಣದ ಬಗ್ಗೆ ಪ್ರಶ್ನೆ ಮಾಡಿದಾಗ ತಮ್ಮ ಜೇಬಿನಿಂದ ಹಣದ ಕಂತೆ ತೆಗೆದು ” ಇದನ್ನು ತೆಗೆದುಕೊಂಡು ನೀವೇ ಹೋಗಿ ಸಕರ್ಾರಕ್ಕೆ ಕೊಟ್ಟು ಬಿಡಿ” ಎಂದಿದ್ದಾರೆ..!
2. ಕಡಿಮೆ ದರದಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಕೊಡಿ : ಪ್ರಣಬ್ ಮುಖರ್ಜಿ
ಗ್ರಾಮೀಣ ಮತ್ತು ಬಡ ರೋಗಿಗಳಿಗೆ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಕಡಿಮೆ ದರದಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡುವ ಮೂಲಕ ಕ್ಯಾನ್ಸರ್ ಅನ್ನು ತಡೆಗಟ್ಟುವ ಕಾರ್ಯಕ್ರಮವನ್ನು ರೂಪಿಸ ಬೇಕಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಹೇಳಿದ್ದಾರೆ.
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಲಿರುವ `ರಾಜ್ಯ ಕ್ಯಾನ್ಸರ್’ ಸಂಸ್ಥೆಗೆ ಶಿಲಾವಿನ್ಯಾಸ ನೆರವೇರಿಸಿ ಮಾತನಾಡಿದ ಅವರು ಕ್ಯಾನ್ಸರ್ ಜಾಗೃತಿ ಬಗ್ಗೆ, ಹಾಗೂ ಅದನ್ನು ಆರಂಭದಲ್ಲೇ ತಡೆಗಟ್ಟುವ ಬಗ್ಗೆ ಗಮನಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ಬಡವರಿಗೆ ಅಗ್ಗದ ದರದಲ್ಲಿ ಚಿಕಿತ್ಸೆ ನೀಡುವಂತೆ ತಿಳಿಸಿದರು.
3. ದೆಹಲಿ ಕೋರ್ಟಲ್ಲೆ ಶೂಟೌಟ್..!
ದೆಹಲಿಯ ಕೋರ್ಟಲ್ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ವಿಚಾರಣೆಗೆ ಬಂದಿದ್ದ ರೌಡಿ ಶೀಟರ್ ಮೇಲೆ ದುಷ್ಕರ್ಮಿ ಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ದುಷ್ಕರ್ಮಿಗಳ ಗುರಿಯಾಗಿದ್ದ ಕೈದಿ ಇರ್ಫಾನ್ ಹಾಗೂ ನ್ಯಾಯ ಮೂರ್ತಿ ಸುನಿಲ್ ಗುಪ್ತಾ ಬಚಾವ್ ಆಗಿದ್ದು, ಕೈದಿಯನ್ನು ವಿಚಾರಣೆಗೆ ತಂದಿದ್ದ ರಾಮ್ಕುಮಾರ್ಎಂಬ ಪೇದೆ ಬಲಿಯಾಗಿದ್ದಾರೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ದಾಳಿ ಮಾಡಿದ ಗುಂಪಿನ ವ್ಯಕ್ತಿಯೊಬ್ಬನನ್ನು ಇರ್ಫಾನ್ ಕೊಲೆ ಮಾಡಿದ್ದು, ಅದರ ಸೇಡಿಗಾಗಿ ಹೀಗೆ ದಾಳಿ ಮಾಡಿದ್ದಾರೆಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
4.ಕೀರ್ತಿ ಅಜಾದ್ ಅಮಾನತು : ಅಡ್ವಾಣಿ, ಮತ್ತಿತರ ಬಿಜೆಪಿ ಹಿರಿಯ ನಾಯಕರ ಸಭೆ
ಬಿಜೆಪಿಯ ಹಿರಿಯನಾಯಕರುಗಳಾದ ಎಲ್.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಶಾಂತ ಕುಮಾರ್ ಮತ್ತು ಯಶವಂತ್ ಸಿನ್ಹಾ ಸಭೆ ನಡೆಸಿ ಬಿಜೆಪಿ ಸಂಸದ ಕೀರ್ತಿ ಅಜಾದ್ ಅಮಾನತು ಕುರಿತು ಚರ್ಚಿಸಿದ್ದಾರೆ.
ಡಿಡಿಸಿಎ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವ ಜೇಟ್ಲಿ ವಿರುದ್ಧ ಬಹಿರಂಗ ಆರೋಪ ಮಾಡಿದ್ದ ಕೀತರ್ಿ ಅಜಾದ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಮೇಲೆ ಪಕ್ಷದಿಂದ ಅಮಾನತುಗೊಳಿಸಿತ್ತು. ಈ ವಿಚಾರದಲ್ಲಿ ಅಡ್ವಾಣಿ, ಜೋಶಿ, ವಾಜಪೇಯಿ, ಮೋದಿ ಮತ್ತು ರಾಜ್ನಾಥ್ ಸಿಂಗ್ ಅವರನ್ನೊಳಗೊಂಡ ಮಾರ್ಗದರ್ಶಕ ಮಂಡಳಿ ಮಧ್ಯಪ್ರವೇಶಿಸ ಬೇಕೆಂದು ಕೇಳಿಕೊಂಡಿದ್ದರು.
5. ಯಶ್ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ :
ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಮಾಸ್ಟರ್ ಪೀಸ್ ಸಿನಿಮಾಕ್ಕೆ ಇಂದು ರಾಜ್ಯಾದ್ಯಂತ ಭರ್ಜರಿಯಾದ ಓಪನಿಂಗ್ ಸಿಕ್ಕಿದೆ. ಆದರೆ ಮಂಡ್ಯದಲ್ಲಿ ಚಿತ್ರ ಪ್ರದರ್ಶಿಸದಂತೆ `ಮಂಡ್ಯ ಸ್ಟಾರ್’ ಕರೆಕೊಟ್ಟಿದ್ದರಿಂದ ಚಿತ್ರಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ.
ಯಶ್ ಮೇಲೆ ರೈತರ ಬಗ್ಗೆ ಅವಹೇಳನಕಾರಿ ಮಾತಾಡಿದ್ದಾರೆಂದು ಆರೋಪಿಸಿರು ಮಂಡ್ಯ ಸ್ಟಾರ್ ತಂಡ ಪ್ರತಿಭಟನೆ ನಡೆಸಿದ್ದು, ಯಶ್ ಕ್ಷಮೆ ಕೋರದೇ ಇದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನಾಕಾರರು ಯಶ್ ಪೋಸ್ಟರ್ ಗಳನ್ನು ಹರಿದು ಹಾಕಿದ್ದಲ್ಲದೇ, ಬೆಂಕಿ ಹಚ್ಚಿದರು. ಸಿನಿಮಾಕ್ಕೆ ಅಡ್ಡಿಪಡಿಸಿದ್ದರಿಂದ ಯಶ್ ಅಭಿಮಾನಿಗಳು ಆಕ್ರೋಶಿತರಾದರು ಪರಿಣಾಮ ಇತ್ತಂಡಗಳ ನಡುವೆ ಮಾತಿಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
6. ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲು
`ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುರುಡೆ ಬಿಡುವುದನ್ನು ಬಿಟ್ಟು ತಾವು ಹಾಕಿರುವ ಸವಾಲು ಸ್ವೀಕರಿಸಲಿ’ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮತ್ತೆ ಸವಾಲು ಎಸೆದಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ಗಿಂತ ಹೆಚ್ಚು ಸ್ಥಾನ ಪಡೆಯದಿದ್ದರೆ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಳಿದ್ದೆ. ಅದಕ್ಕೆ ಈಗಲೂ ನಾನು ಬದ್ಧ. ಆದರೆ ಮುಖ್ಯಮಂತ್ರಿಯವರು ತಮ್ಮ ಸವಾಲು ಸ್ವೀಕರಿಸುವ ಬದಲು `ಈಶ್ವರಪ್ಪ ಸಿಕ್ಕಾಕಂಡ’ ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ.
7. ಸೌದಿ ಅರೇಬಿಯಾ ಆಸ್ಪತ್ರೆಯಲ್ಲಿ ಅಗ್ನಿ ದುರಂತ : 25 ಬಲಿ
ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ದಕ್ಷಿಣ ಸೌದಿಯ ಜಝಾನ್ ಜನರಲ್ ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 25 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
8. ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅಸ್ವಸ್ಥ
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ನಿವಾಸದಲ್ಲಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಮುಫ್ತಿ ಮೊಹಮ್ಮದ್ ಸಯೀದ್ ರನ್ನು ವಿಶೇಷ ವಿಮಾನದ ಮೂಲಕ ದೆಹಲಿಗೆ ಕರೆತರಲಾಯಿತು.
9. ದೆಹಲಿ ಸಮ, ಬೆಸ ನಿಯಮ ಬ್ಲೂಪ್ರಿಂಟ್ ರಿಲೀಸ್
ವಾಯುಮಾಲಿನ್ಯ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ಸಮ ಮತ್ತು ಬೆಸ ಸಂಖ್ಯೆ ವಾಹನ ಸಂಚಾರ ನಿಯಮದ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಬ್ಲೂಪ್ರಿಂಟ್ ಬಿಡುಗಡೆ ಮಾಡಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ 2016ರ ಜನವರಿ 1ರಿಂದ 15ರವರೆಗೆ ಸಮ, ಬೆಸ ಸಂಖ್ಯೆ ನಿಯಮ ಜಾರಿಗೆ ಬರಲಿದ್ದು, ಸಮ, ಬೆಸ ನಿಯಮ ಜಾರಿ ಕುರಿತಂತೆ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಬ್ಲೂಪ್ರಿಂಟ್ ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ ದೆಹಲಿ ಮುಖ್ಯಮಂತ್ರಿಗೂ ಇದರಿಂದ ವಿನಾಯಿತಿ ನೀಡಿಲ್ಲ.
10 .ರೈಲ್ವೆ ಪ್ರಯಾಣಿಕರಿಗೆ ಶಾಕ್, ತತ್ಕಾಲ್ ಟಿಕೆಟ್ ದರ ಏರಿಕೆ
ಪ್ರಯಾಣ ಶುಲ್ಕದಿಂದ ಬರುವ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ರೈಲ್ವೆ ಇಲಾಖೆಯು ಕ್ರಿಸ್ಮಸ್ ಶಾಕ್ ರೂಪದಲ್ಲಿ ತತ್ಕಾಲ್ ಟಿಕೆಟ್ ದರವನ್ನು ಏರಿಸಿದೆ. ವಿಶೇಷವೆಂದರೆ ಕ್ರಿಸ್ಮಸ್ ದಿನವಾದ ಡಿ.25ರಿಂದಲೇ, ಅಂದರೆ ನಾಳೆಯಿಂದಲೇ, ಈ ಏರಿದ ದರಗಳು ಜಾರಿಗೆ ಬರಲಿವೆ.