700 ದಿನಗಳಲ್ಲಿ 425 ಪೌಂಡ್ ತೂಕ ಇಳಿಸಿದ ಭೂಪ..! ತೂಕ ಇಳಿಸುವವರಿಗೆ ಈ ಮಾಜಿ ಧೈತ್ಯ ದೇಹಿಯೇ ಸ್ಪೂರ್ತಿ ..!

0
52

ತೂಕ ಹೆಚ್ಚಿಸಿಕೊಳ್ಳುವುದು ಸುಲಭ.. ಆದರೆ ಅದೇ ತೂಕವನ್ನು ಇಳಿಸುವುದು ಭಾರೀ ಕಷ್ಟ. ಆದರೆ ಇಚ್ಛಾಶಕ್ತಿಯೊಂದಿದ್ದರೆ ಸಾಕು ಎಂಥದ್ದೇ ಸವಾಲನ್ನೂ ಕೂಡಾ ಸುಲಭವಾಗಿ ಮೆಟ್ಟಿ ನಿಲ್ಲಬಹುದು. ಅಷ್ಟೆಲ್ಲಾ ಮಾಡುವುದಾದರೆ ತೂಕ ಇಳಿಸುವುದು ಮಹಾನ್ ಕೆಲಸವೇನಲ್ಲ ಬಿಡಿ. ಇಷ್ಟಕ್ಕೂ ಈ ಪೀಠಿಕೆ ಹಾಕಲು ಕಾರಣ ಓರ್ವ ಧೈತ್ಯ ದೇಹಿ..! ಯೆಸ್.. ಒಂದು ಕಾಲದಲ್ಲಿ ಧೈತ್ಯ ದೇಹವನ್ನು ಹೊಂದಿದ್ದ ವ್ಯಕ್ತಿ ಇಂದು ಅದೇ ದೇಹವನ್ನು ಹುರಿಗೊಳಿಸಿದ್ದಾನೆ. ಎಲ್ಲರಂತೆ ಸ್ಲಿಮ್ ಆಗಿದ್ದಾನೆ..!
ಅದು ಮೂರು ವರ್ಷದ ಹಿಂದಿನ ಮಾತು. ರೋನಿ ಎಂಬ ಆ ಮನುಷ್ಯ ಓಡಾಡಲು ಕಷ್ಟಪಡುತ್ತಿದ್ದ, ಹಾಗೋಮ್ಮೆ ರಸ್ತೆಯ ಮೇಲೆ ಓಡಾಡುತ್ತಿದ್ದರೆ ಜನರೆಲ್ಲ ರಸ್ತೆಗೆ ರೋಡ್ ರೋಲರ್ ಬಂತು ಅಂತ ಅಣುಕಿಸುತ್ತಿದ್ದರು. ಇನ್ನೊಂದೆಡೆ ನೀನು ತೂಕ ಇಳಿಸಿಕೊಳ್ಳದಿದ್ದರೆ ಕೆಲವೇ ವರ್ಷಗಳಲ್ಲಿ ಸಾವನ್ನಪ್ಪುತ್ತೀಯಾ ಎಂದು ವೈದ್ಯರು ಎಚ್ಚರಿಕೆಯನ್ನೂ ಕೊಟ್ಟಿದ್ದರು. ಇದರಿಂದ ಎಚ್ಚೆತ್ತ ರೋನಿ ತನ್ನ ತೂಕ ಇಳಿಸಿಕೊಳ್ಳಲು ಮುಂದಾದ. ತೂಕ ಇಳಿಸಲು ಆರಂಭಿಸಿದಾಗ ಆತ ಬರೋಬ್ಬರಿ 700 ಪೌಂಡ್ ತೂಗುತ್ತಿದ್ದ..! ಕೆಜಿ ಲೆಕ್ಕದಲ್ಲಿ ಹೇಳುವುದಾದರೆ 317 ಕೆಜಿ..!
ರೋನಿ ಪ್ರತಿದಿನ ವ್ಯಾಯಾಮ ಮಾಡತೊಡಗಿದ. ತೂಕ ಇಳಿಯುತ್ತಿರುವುದು ಗಮನಕ್ಕೆ ಬಂತು. ಅಲ್ಲದೇ ಅದು ತೂಕ ಇಳಿಸಲು ಮತ್ತಷ್ಟು ಉತ್ತೇಜನ ನೀಡಿತು. 50 ದಿನಗಳ ವೇಳೆಗೆ ಆತನ ಸ್ಟ್ಯಾಮಿನಾ ಒಂದು ಹಂತಕ್ಕೆ ಬಂತು. ಇದರಿಂದ ವ್ಯಾಯಾಮವನ್ನು ಮತ್ತಷ್ಟು ಹೆಚ್ಚಿಸಿದ ರೋನಿ 400 ದಿನಗಳಲ್ಲಿ ಬರೋಬ್ಬರಿ 425 ಪೌಂಡ್ ತೂಕ ಇಳಿಸಿಕೊಂಡ. ಇಷ್ಟಕ್ಕೂ 425 ಪೌಂಡನ್ನು ಕೆಜಿ ಲೆಕ್ಕದಲ್ಲಿ ಹೇಳುವುದಾದರೆ ಬರೋಬ್ಬರಿ 193 ಕೆಜಿ..! ಅಂದರೆ ರೋನಿ ಪ್ರತಿ ದಿನ ಹೆಚ್ಚು ಕಡಿಮೆ ಅರ್ಧ ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದಾನೆ ಎಂದರ್ಥ..!
ಯೆಸ್.. ರೋನಿಯ ದೃಢ ನಿರ್ದಾರ ಇಂದು ಆತನಿಗೆ ಬದುಕುವ ಆಸೆ ಮೂಡಿಸಿದೆ. ರೋನಿಯನ್ನು ಕಂಡು ಎಲ್ಲರೂ ಅಚ್ಚರಿಯಾಗಿದ್ದಾರೆ. ಮೂರು ವರ್ಷದ ಹಿಂದೆ ರೋನಿಯನ್ನು ನೋಡಿದವರು ಆತನನ್ನು ಕಂಡು ಹಿಡಿಯಲು ಹೆಣಗಾಡುತ್ತಿದ್ದಾರೆ..! ವಿಶೇಷವೆಂದರೆ ಈಗ ರೋನಿಯನ್ನು ಓರ್ವ ಹುಡುಗಿ ಪ್ರೀತಿಸುತ್ತಿದ್ದು, ಆಕೆ ರೋನಿಯ ತೂಕ ಹೆಚ್ಚದಂತೆ ಎಚ್ಚರ ವಹಿಸುತ್ತಿದ್ದಾಳೆ..!
ಆತ್ಮ ವಿಶ್ವಾಸವೊಂದಿದ್ದರೆ ಸಾಕು ಬೆಟ್ಟವನ್ನೇ ಕರಗಿಸಬಹುದು ಎಂದು ನಮ್ಮ ಹಿರಿಯರು ಹೇಳಿದ್ದರು. ಆದರೆ ಬೆಟ್ಟ ಕರಗಿಸುವುದು ಎಷ್ಟು ಸತ್ಯವೋ ಗೊತ್ತಿಲ್ಲ, ದೇಹವನ್ನು ಕರಗಿಸುವುದು ಸತ್ಯ ಎಂದು ರೋನಿ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

50 ಕೋಟಿ ಬೆಲೆಬಾಳುವ ಕಂಪನಿ ಕಟ್ಟಿದ ಹುಟ್ಟು ಕುರುಡರಾದ ಶ್ರೀಕಾಂತ್…! ಇದು ಅಂಧನ ಯಶೋಗಾಥೆ..!

ರಷ್ಯಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಮೋದಿ..! #Video

ಮಾಸ್ಟರ್ ಪೀಸು… ಹಿಂಗೈತಿ ಬಾಸು..! – ಕಿರಿಕ್ ಕೀರ್ತಿ ..!

ಬರಲಿದೆ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಕಾಲಿಂಗ್..! ಅಚ್ಚರಿಗಳನ್ನು ಹೊತ್ತು ತರಲಿದೆ ಹೊಸ ಮಾದರಿ..!

ಅವನೇ ಪ್ರಪೋಸ್ ಮಾಡ್ಲಿ ಅಂತ ಕಾದಿದ್ದ ಅವಳು ತನ್ನ ಹಠದಲ್ಲಿ ಸೋತಳು, ಪ್ರೀತಿಯಲ್ಲಿ ಗೆದ್ದಳು…!

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಈ ಗೋಡೆಗಳ ಮೇಲೆ ಬಟ್ಟೆ ಇಲ್ಲದವರಿಗೆ ಬಟ್ಟೆ ಸಿಗುತ್ತೆ..!

LEAVE A REPLY

Please enter your comment!
Please enter your name here