ರೆಡ್ಡಿ ಜಾಮೀನು ಹಗರಣದಲ್ಲಿ ಭಾಗಿಯಾಗಿದ್ದ ಜಡ್ಜ್ ಸಾವು
ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಹಗರಣದಲ್ಲಿ ಶಾಮೀಲಾಗಿದ್ದ ನಿವೃತ್ತ ಜಡ್ಜ್ ಡಿ. ಪ್ರಭಾಕರ ರಾವ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹೈದರಾಬಾದ್ ನ ಪೂರ್ವ ಮರೇದ್ ಪಳ್ಳಿಯ ನಿವಾಸದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪ್ರಭಾಕರ್ ರಾವ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರಿಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಮೇಲಷ್ಟೇ ಸಾವಿನ ಕಾರಣ ತಿಳಿದು ಬರಲಿದೆ.
ಚಂಡೀಲಾಗೆ ಕ್ರಿಕೆಟ್ನಿಂದ ಆಜೀವ ನಿಷೇಧ
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಕ್ರಿಕೆಟಿಗ ಅಜಿತ್ ಚಂಡೀಲಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕ್ರಿಕೆಟ್ನಿಂದ ಆಜೀವ ನಿಷೇಧ ಹೇರಿದೆ. ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದ ಶಿಸ್ತು ಪಾಲನಾ ಸಮಿತಿ, ಐಪಿಎಲ್ ಸೀಸನ್ 6ರ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆಟಗಾರರಿಗೆ ಶಿಕ್ಷೆ ವಿಧಿಸಿದ್ದು, ಅಜಿತ್ ಚಂಡೀಲಾಗೆ ಅಜೀವ ನಿಷೇಧ ಹಾಗೂ ಹಿಕೇನ್ ಶಾಗೆ 5 ವರ್ಷಗಳ ನಿಷೇಧ ವಿಧಿಸಿ ಆದೇಶಿಸಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ವಿಚಾರಣೆ ಮುಂದೂಡಿಕೆ
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಸಲ್ಲಿಸಲು ಕಾಲಾವಕಾಶ ಬೇಕೆಂದು ಹಲವರು ಕೋರಿರುವ ಹಿನ್ನೆಲೆಯಲ್ಲಿ ಕೇಸಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿದೆ. ಭಾರತೀಯ ಜನತಾ ಪಕ್ಷದ ಮಾಜಿ ಮುಖಂಡರ ವಿರುದ್ಧ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪಿತೂರಿ ನಡೆಸಿರುವ ಕೇಸನ್ನು ಕೈ ಬಿಟ್ಟಿರುವುದನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ. ಕೇಂದ್ರ ತನಿಖಾ ದಳ ಬಿಜೆಪಿ ನಾಯಕರ ವಿರುದ್ಧ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಶ್ರೀಲಂಕಾದಿಂದ ಭಾರತೀಯ ಮೀನುಗಾರರ ಬಿಡುಗಡೆ
ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಮೀನು ಹಿಡಿಯುತ್ತಿದ್ದಾಗ ಬಂಧನಗೊಂಡಿದ್ದ 106 ಭಾರತೀಯ ಮೀನುಗಾರರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಸರ್ಕಾರ ಆದೇಶಿಸಿದೆ. ಭಾನುವಾರ ಶ್ರೀಲಂಕಾ ನೌಕಾಪಡೆ ಸೆರೆ ಹಿಡಿದಿದ್ದ ಮೂವರು ಮೀನುಗಾರರು ಕೂಡ ಜೊತೆಗೆ ಬಿಡುಗಡೆಯಾಗಲಿದ್ದಾರೆ. 55 ಮೀನುಗಾರರನ್ನು ಬಿಡುಗಡೆ ಮಾಡಲು ಜಾಫ್ನಾ ಮತ್ತು ಮನ್ನಾರ್ ಮ್ಯಾಜಿಸ್ಟ್ರೆಟ್ ಕೋರ್ಟ್ ಗಳು ಈಗಾಗಲೇ ಆದೇಶಿಸಿವೆ. ಆದರೆ ಇನ್ನುಳಿದ 51 ಮೀನುಗಾರರ ಬಿಡುಗಡೆ ಆದೇಶ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಕರುಣಾನಿಧಿ ಮಾನನಷ್ಟ ಮೊಕದ್ದಮೆ ಕೇಸ್ ಮುಂದೂಡಿಕೆ
ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಮಾರ್ಚ್ 10ಕ್ಕೆ ಮುಂದೂಡಿದೆ. ಕರುಣಾನಿಧಿ ವಿರುದ್ಧ ಮುಖ್ಯಮಂತ್ರಿ ಜೆ. ಜಯಲಲಿತಾ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸು ದಾಖಲಿಸಿದ್ದು, ಈ ಸಂಬಂಧ ಮದ್ರಾಸ್ ಹೈಕೋರ್ಟ್ ಗೆ ಇಂದು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದ್ದಾರೆ.
ಟೆನಿಸ್ ಗೂ ಅಂಟಿದ ಫಿಕ್ಸಿಂಗ್ ಕಳಂಕ
ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯನ್ ಓಪನ್ ಆರಂಭವಾಗಿರುವಾಗಲೇ, ಟೆನಿಸ್ ನಲ್ಲಿಯೂ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಟೆನಿಸ್ನಲ್ಲಿ ಟಾಪ್ 50 ಪಟ್ಟಿಯಲ್ಲಿರುವ 16 ಮಂದಿ ಆಟಗಾರರು ಕಳೆದ 10 ವರ್ಷಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದರು ಎಂಬ ಆರೋಪದ ಮೇರೆಗೆ ಟೆನಿಸ್ ಇಂಟೆಗ್ರಿಟಿ ಯುನಿಟ್ (ಟಿಐಯು) ಆಟಗಾರರ ಮೇಲೆ ನಿಗಾ ಇರಿಸಿತ್ತು. ಈ ಬಗ್ಗೆ ಬಿಬಿಸಿ ಮತ್ತು ಆನ್ಲೈನ್ ಬಜ್ಫೀಡ್ ನ್ಯೂಸ್ ಸುದ್ದಿ ಪ್ರಕಟಿಸಿದ್ದು, ಟೆನಿಸ್ ಸಂಸ್ಥೆಗಳು ಈ ವರದಿಯನ್ನು ತಳ್ಳಿ ಹಾಕಿವೆ.
ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಾರು
ಬೆಂಗಳೂರಿನ ಕಾವೇರಿ ಜಂಕ್ಷನ್ ಹ್ಯುಂಡೈ ಶೋರೂಂ ಬಳಿ ಚಲಿಸುತ್ತಿದ್ದ ಕಾರೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರುಕಲಾದ ಘಟನೆ ನಡೆದಿದೆ. ಕೇರಳ ನೋಂದಣಿಯ ಕಾರು ಬೊಮ್ಮನಹಳ್ಳಿ ನಿವಾಸಿ ಶ್ರೀನಿವಾಸ ರೆಡ್ಡಿ ಎಂಬುವರಿಗೆ ಸೇರಿದೆ. ಕೆಲಸ ನಿಮಿತ್ತ ಮಧ್ಯಾಹ್ನ 12ರ ಸುಮಾರಿಗೆ ಕುಟುಂಬದ ಸದಸ್ಯರೊಂದಿಗೆ ಯಲಹಂಕಕ್ಕೆ ತೆರಳುವಾಗ ಕಾವೇರಿ ಜಂಕ್ಷನ್ನಲ್ಲಿ ಈ ಘಟನೆ ನಡೆದಿದೆ. ಕಾರಿನ ಎಂಜಿನ್ ನಲ್ಲಿ ಏಕಾಏಕಿ ದಟ್ಟ ಹೊಗೆ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಕಾರು ಚಾಲನೆ ಮಾಡುತ್ತಿದ್ದ ಶ್ರೀನಿವಾಸ ರೆಡ್ಡಿ ರಸ್ತೆ ಮಧ್ಯದಲ್ಲೇ ಕಾರು ನಿಲ್ಲಿಸಿದ್ದಾರೆ. ಕಾರಿನಲ್ಲಿ ಕುಳಿತ್ತಿದ್ದ ಸಹೋದರ ಮತ್ತು ಮೂವರು ಮಹಿಳೆಯರನ್ನು ಹೊರಕ್ಕೆ ಕಳುಹಿಸಿದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಐಸಿಸ್ ನಿಂದ 300 ಮಂದಿ ಹತ್ಯೆ, 400 ಮಂದಿ ಅಪಹರಣ
ಸಿರಿಯಾ ಪಡೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಐಎಸ್ ಉಗ್ರ ಸಂಘಟನೆ 300 ಮಂದಿ ನಾಗರಿಕರನ್ನು ಹತ್ಯೆ ಮಾಡಿದೆ. ಈ ಬಗ್ಗೆ ಅಲ್ಲಿನ ಸಕರ್ಾರ ಮಾಹಿತಿ ನೀಡಿದೆ. ಡೇರ್-ಅಲ್-ಜೋರ್ ಎಂಬ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂದು ಸಕರ್ಾರಿ ಸ್ವಾಮ್ಯದ ಸುದ್ದಿ ಸಂಸ್ಥೆ `ಸನಾ’ ವರದಿ ಮಾಡಿದೆ. ಅಸುನೀಗಿದವರಲ್ಲಿ ಹೆಚ್ಚಿನವರು ವೃದ್ಧರು, ಮಹಿಳೆಯರು, ಮಕ್ಕಳು ಎಂದು ಅದು ವರದಿ ಮಾಡಿದೆ. ಗುಂಡು ಹಾರಿಸಿ ಅಥವಾ ಶಿರಚ್ಛೇದ ಮಾಡಿ ಅವರನ್ನು ಕೊಂದಿದ್ದಾರೆ. ಸೈನಿಕರ ಕುಟುಂಬ ವರ್ಗದರನ್ನೇ ಹೆಚ್ಚಾಗಿ ಹತ್ಯೆ ಮಾಡಲಾಗಿದೆ. .
ಇಂಡೋ-ಪಾಕ್ ಗಡಿಯಲ್ಲಿ ಲೇಸರ್ ವಾಲ್ ನಿರ್ಮಾಣಕ್ಕೆ ಕ್ರಮ
ಪಠಾಣ್ ಕೋಟ್ ದಾಳಿ ನಂತರ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಲು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಭಾರತ-ಪಾಕಿಸ್ತಾನದ 40 ಕ್ಕೂ ಹೆಚ್ಚು ಸೂಕ್ಷ್ಮಗಡಿ ಪ್ರದೇಶಗಳಿಗೆ ಲೇಸರ್ ವಾಲ್ ಅಳವಡಿಕೆ ಮಾಡುವ ಮೂಲಕ ಗಡಿ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಪಂಜಾಬ್ ಬಳಿಯಿರುವ ಎಲ್ಲಾ ನದಿ ಪ್ರದೇಶಗಳ ಗಡಿಗಳಿಗೂ ಲೇಸರ್ ವಾಲ್ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಲೇಸರ್ ವಾಲ್ ತಂತ್ರಜ್ಞಾನವನ್ನು ಬಿಎಸ್ಎಫ್ ಅಭಿವೃದ್ಧಿ ಪಡಿಸಿದ್ದು, ಯಾವುದೇ ವ್ಯಕ್ತಿ ಪಾಕಿಸ್ತಾನದಿಂದ ಭಾರತಕ್ಕೆ ನುಸುಳುವುದನ್ನು ಸಮರ್ಥವಾಗಿ ತಡೆಯುವ ಸಾಮಥ್ರ್ಯ ಹೊಂದಿದೆ.
ಹಾಸ್ಟೆಲ್ ಪ್ರವೇಶಕ್ಕೆ ನಕಾರ, ವಿದ್ಯಾರ್ಥಿ ಆತ್ಮಹತ್ಯೆ
2 ವಾರಗಳ ಹಿಂದೆ ಹಾಸ್ಟೆಲ್ ನಿಂದ ಹೊರಹಾಕಲ್ಪಟ್ಟಿದ್ದ ಸಂಶೋಧನಾ ವಿದ್ಯಾರ್ಥಿಯೊಬ್ಬ ಭಾನುವಾರ ಸಂಜೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ರಾತ್ರಿಯಿಡೀ ವಿದ್ಯಾರ್ಥಿಗಳು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಯೂನಿರ್ವಸಿಟಿಯಲ್ಲಿ ಬಿಗುವಿನ ವಾತಾವರಣ ತಲೆದೋರಿದೆ. ಹೈದರಾಬಾದ್ ವಿಶ್ವವಿದ್ಯಾಲಯದ 24 ವರ್ಷದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಶರಣಾಗಿದ್ದಾನೆ. ನನಗಾಗಿ ಕಣ್ಣೀರು ಸುರಿಸಬೇಡಿ, ನಾನು ಬದುಕುವುದಕ್ಕಿಂತ ಸಾಯುವುದೇ ತುಂಬಾ ಖುಷಿ ಎಂದು ಮನಗಂಡಿದ್ದೇನೆ ಎಂದು ರೋಹಿತ್ ಸೂಸೈಡ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!
ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!