1. ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಹೈದರಾಬಾದ್ ವಿವಿಗೆ ಭೇಟಿ ನೀಡಿದ ರಾಹುಲ್ ಗಾಂಧಿ
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿನ ವಿದ್ಯಾರ್ಥಿಗಳು ಮಂಗಳವಾರವೂ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ದೇಶ ವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಎಐಸಿಸಿ ಉಪಾದ್ಯಕ್ಷ ರಾಹುಲ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಡನೆ ಮಾತುಕತೆ ನಡೆಸಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿ ಹಾಗೂ ಸಚಿವ ಬಂಡಾರು ದತ್ತಾತ್ರೇಯರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಸುತ್ತಿದ್ದು, ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಹೈದರಾಬಾದ್ನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಈಗ ಈ ಪ್ರಕರಣ ರಾಜಕೀಯ ಸ್ವರೂಪವನ್ನೂ ಪಡೆದಿದ್ದು, ರಾಹುಲ್ ಭೇಟಿಯ ಸಂದರ್ಭದಲ್ಲಿ ನಮಗೆ ನ್ಯಾಯ ಬೇಕೇ ಹೊರತು ನಿಮ್ಮ ರಾಜಕೀಯ ಬೇಕಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋತ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.
https://www.youtube.com/watch?v=hUQfGRFWmuo
2. ಆಸ್ಟ್ರೇಲಿಯನ್ ಓಪನ್ ಟೆನಿಸ್ನಲ್ಲಿ ಹೀನಾಯ ಸೋಲುಂಡ ನಡಾಲ್
ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಮೊದಲ ಸುತ್ತಿನ ಹಣಾಹಣಿಯಲ್ಲಿ ರಾಫೆಲ್ ನಡಾಲ್ ಹೀನಾಯ ಸೋಲನ್ನು ಕಂಡಿದ್ದಾರೆ. ಫೆರ್ನಾಂಡೋ ವೆರ್ಡಾಸ್ಕೋ ಅವರ ವಿರುದ್ಧ ಸೆಣಸಿದ ವಿಶ್ವದ ನಂ. 05ನಡಾಲ್ 7, 6(6), 4 ಮತ್ತು 6, 3 ಮತ್ತು6 7 ಮತ್ತು 6(4), 6 ಮತ್ತು 2ಸೆಟ್ ಗಳಿಂದ ಫೆರ್ನಾಂಡೋ ವೆರ್ಡಾಸ್ಕೋ ಅವರಿಗೆ ಶರಣಾಗಿದ್ದಾರೆ..!
3. 15 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ..? : ಅಸ್ಸಾಂಲ್ಲಿ ಸೋನಿಯಾ, ಸಿಂಗ್ರನ್ನು ಟೀಕಿಸಿದ ಮೋದಿ
ನಮ್ಮ ಸರ್ಕಾರದಿಂದ ಕೇವಲ 15 ತಿಂಗಳಲ್ಲೇ ಎಲ್ಲವನ್ನೂ ನಿರೀಕ್ಷೆ ಮಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತವರ ಪಕ್ಷ 15 ವರ್ಷಗಳಕಾಲ ಅಸ್ಸಾಂನಲ್ಲಿ ಏನು ಮಾಡಿದೆ..? ಅಲ್ಲಿ ಅದು ಮಾಡಿರುವ ಅಭಿವೃದ್ಧಿಯಾದರೂ ಏನೆಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಅಸ್ಸಾಂನ ಕೋಕ್ರಾಝಾಹರ್ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಸ್ಸಾಂನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಅಸ್ಸಾಂನ ರಾಜ್ಯಸಭಾ ಸದಸ್ಯರಾಗಿದ್ದ ಮನಮೋಹನ್ ಸಿಂಗ್ ಭಾವಿಸಿರಬೇಕೆಂದು ಟಾಂಗ್ ನೀಡಿದರು.
ಕಳೆದ 15 ವರ್ಷಗಳಿಂದಲೂ ಅಸ್ಸಾಂನಲ್ಲಿಅಧಿಕಾರದಲ್ಲಿದೆ. ಇಲ್ಲಿನ ಪ್ರತಿನಿಧಿ ಮನಮೋಹನ್ ಸಿಂಗ್ 10 ವರ್ಷಗಳಕಾಲ ದೇಶವನ್ನಾಳಿದ್ದಾರೆ. 15 ವರ್ಷಗಳ ಕಾಲವಿದ್ದ ಕಾಂಗ್ರೆಸ್ ಈಗ 15 ತಿಂಗಳಲ್ಲಿ ಕೆಲಸ ಆಗ್ಬೇಕಿದೆ ಅಂತ ನಿರೀಕ್ಷಿಸುತ್ತಿದೆ ಎಂದವರು ಹೇಳಿದರು.
4. ನಾಳೆಯಿಂದ ಹೆಲ್ಮೆಟ್ ಧರಿಸಿದಿದ್ದರೆ ದಂಡ ತಪ್ಪಿದ್ದಲ್ಲ..!
ದ್ವಿಚಕ್ರ ವಾಹನಗಳ ಹಿಂಬದಿ ಸವಾರರು ಹೆಲ್ಮೆಟ್ ಧರಿಸಬೇಕೆಂಬ ನಿಯಮವನ್ನು ರಾಜ್ಯದಲ್ಲಿ ಜನವರಿ 12ರಿಂದ ಜಾರಿಗೆ ತರಲಾಗಿದ್ದರೂ ಅದನ್ನು ಯಾವೊಬ್ಬ ನಾಗರಿಕನೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಕೇವಲ ಶೇಕಡ30ರಷ್ಟು ಹಿಂಬದಿ ಸವಾರರು ಹೆಲ್ಮೆಟ್ ಧರಿಸಿದ್ದಾರೆ. ಆಧರೆ ನಾಳೆಯಿಂದ ನಿಯಮವನ್ನು ಕಟ್ಟುನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿದ್ದು ಹೆಲ್ಮೆಟ್ ಧರಿಸದೇ ಇದ್ದಲ್ಲಿ 100 ರೂ ದಂಡವನ್ನು ವಿಧಿಸಲಾಗುತ್ತದೆ ಎಂದುಇ ಬೆಂಗಳೂರು ನಗರ ಸಂಚಾಋಇ ಆಯುಕ್ತ ಸಲೀಂ ತಿಳಿಸಿದ್ದಾರೆ.
5. ಗಣರಾಜ್ಯೋತ್ಸವದಂದು ಉಗ್ರರ ದಾಳಿ ಸಾಧ್ಯತೆ..?
ಗಣರಾಜ್ಯೋತ್ಸವ ಸಂದರ್ಭದಲ್ಲಿ ಐಸಿಸ್ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ದೇಶದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಐಸಿಸ್ ಲೋನ್ ವೊಲ್ಫ್ ಅಟ್ಯಾಕ್ ಎಂಬ ಹೆಸರಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತವರ ಇಲಾಖೆಗೆ ತಿಳಿದು ಬಂದಿದೆ ಎಂದು ವರದಿಯಾಗಿದೆ. ಅಂದಹಾಗೆ ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಫ್ರಾನ್ಸ್ ಅಧ್ಯಕ್ಷ ಫ್ರಾನ್ಕೋಯ್ಸ್ ಹೋಲ್ಲಾಂಡ್ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
6. ತೀವ್ರ ಕುಸಿತ ಕಂಡ ಚೀನಾ ಆರ್ಥಿಕಾಭಿವೃದ್ಧಿ
25 ವರ್ಷಗಳಲ್ಲೇ ಮೊತ್ತ ಮೊದಲ ಬಾರಿಗೆ ಶೇ.6.9ರ ಅತ್ಯಂತ ಕನಿಷ್ಠ ಆರ್ಥಿಕಾಭಿವೃದ್ಧಿಯನ್ನು ಚೀನ 2015ರಲ್ಲಿ ದಾಖಲಿಸಿದೆ. ಈ ಮೂಲಕ ವಿಶ್ವದ 2ನೇ ಬೃಹತ್ ಆರ್ಥಿಕ ರಾಷ್ಟ್ರ ಎನ್ನುವ ಖ್ಯಾತಿ ಹೊಂದಿರುವ ಚೀನಾದ ಆರ್ಥಿಕ ಅಧೋಗತಿಯು ಇಡೀ ವಿಶ್ವಕ್ಕೆ ಕಳವಳವನ್ನು ಉಂಟುಮಾಡಿದೆ. ಚೀನಾದ ಈ ಆರ್ಥಿಕಾಭಿವೃದ್ಧಿ ಗತಿಯನ್ನು ಇಂದು ಪ್ರಕಟಿಸಿರುವ ರಾಷ್ಟ್ರೀಯ ಅಂಕಿ ಅಂಶ ಇಲಾಖೆಯು ಮುಂದಿನ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕಾಭಿವೃದ್ಧಿಯು ಶೇ 6.8ರ ಗತಿಯಲ್ಲಿರುತ್ತದೆ ಎಂದು ಹೇಳಿದೆ.
7. ಹೊಸ ಪಕ್ಷ ಕಟ್ಟಲುಯೋಗೇಂದ್ರ ಯಾದವ್ ,ಪ್ರಶಾಂತ್ ಭೂಷಣ್ ಚಿಂತನೆ
2017ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಗೇರಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆಮ್ಆದ್ಮಿ ಪಕ್ಷ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಆಮ್ಆದ್ಮಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ರವರು ಪಂಜಾಬ್ ಚುನಾವಣೆಗಾಗಿ ಹೊಸ ಪಕ್ಷವೊಂದನ್ನು ಹುಟ್ಟುಹಾಕಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಚಿಂತನೆಯನ್ನು ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಸ್ವರಾಜ್ ಅಭಿಯಾನ್ ಎಂಬ ಸಮೂಹವನ್ನು ರಚಿಸಿಕೊಂಡಿರುವ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಮತ್ತು ಅವರ ಬೆಂಬಲಿಗರು ಮುಂದಿನ ವರ್ಷ ಎದುರಾಗಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷವೊಂದನ್ನು ರಚಿಸಿಕೊಂಡು ಸ್ಪರ್ಧಿಸಲು ಗಂಭೀರ ಚಿಂತನೆಯನ್ನು ನಡೆಸುತ್ತಿದ್ದಾರೆ.
8. ಪಠಾಣ್ ಕೋಟ್ ದಾಳಿ ಪ್ರಕರಣ: ಪಾಕ್ ಪರ ನಿಂತ ಮುಶರ್ರಫ್
ಪಂಜಾಬಿನ ಪಠಾಣ್ ಕೋಟ್ ಮೇಲಿನ ಉಗ್ರ ದಾಳಿಯ ಹಿಂದೆ ಉಗ್ರ ಮಸೂದ್ ಅಝರ್ಇದ್ದಾನೆಯೇ ಹೊರತು ಪಾಕಿಸ್ತಾನದ ಸೇನೆಯಾಗಲೀ ಗೂಢಚರ ಸಂಸ್ಥೆ ಐಎಸ್ಐ ಆಗಲೀ ಇಲ್ಲ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಮಿಲಿಟರಿ ಸವರ್ಾಧಿಕಾರಿ ಪವರ್ೇಜ್ ಮುಶರ್ರಫ್ ಹೇಳಿದ್ದಾರೆ. ಪಾಕ್ ಸೇನೆಯಾಗಲೀ, ಐಎಸ್ಐ ಆಗಲೀ ಭಾರತದೊಂದಿಗೆ ಶಾಂತಿ ಹೊಂದುವುದನ್ನು ಶೇ.100ರಷ್ಟು ಬಯಸುತ್ತವೆ. ಪಠಾಣ್ ಕೋಟ್ ದಾಳಿಯ ಹಿಂದೆ ಪಾಕ್ ಸೇನೆಯಾಗಲೀ ಐಎಸ್ಐ ಆಗಲೀ ಇಲ್ಲವೇ ಇಲ್ಲ. ಈ ದಾಳಿಯನ್ನು ಆಯೋಜಿಸಿದವನು ಸರಕಾರೇತರ ಪಾತ್ರಧಾರಿಯಾಗಿರುವ ಉಗ್ರ ಮಸೂದ್ ಅಝರ್. ನನ್ನನ್ನು ಕೊಲ್ಲಲು ಯತ್ನಿಸಿದ ಘಟನೆಯ ಬಳಿಕ ಆತನನ್ನು ಮುಕ್ತವಾಗಿ ಓಡಾಡಿಕೊಂಡಿರಲು ಬಿಡಬಾರದಾಗಿತ್ತು ಎಂದು ಮುಶರ್ರಫ್ ಹೇಳಿದ್ದಾರೆ.
9. ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುತ್ತೇವೆ; ಐಸಿಸ್
ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ರನ್ನು ಹತ್ಯೆಗೈಯುವುದಾಗಿ ಬೆದರಿಕೆ ಹಾಕಿರುವ ಐಸಿಸ್ ಸಹಿಯುಳ್ಳ ಪತ್ರವೊಂದು ಬಂದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಪತ್ರವನ್ನು ಗೋವಾ ಪೊಲೀಸರು ಎಲ್ಲಾ ಪೊಲೀಸ್ ಠಾಣೆಗಳಿಗೂ ರವಾನಿಸಿದ್ದಾರೆ. ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ಕ್ಕೆ ಹಸ್ತಾಂತರಿಸಿದ್ದಾರೆ. ಕಳೆದ ವಾರ ಗೋವಾ ಸೆಕ್ರೆಟರಿಯೇಟ್ ಗೆ ಬಂದಿರುವ ಫೋಸ್ಟ್ ಕಾರ್ಡ್ ನಲ್ಲಿ ಈ ಬೆದರಿಕೆ ಹಾಕಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಕಚೇರಿ ಮೂಲಗಳು ಮಂಗಳವಾರ ತಿಳಿಸಿವೆ.
1೦. ಶಾಲೆ, ಕೋರ್ಟ್ ಮತ್ತು ಗಡಿ ತಪಾಸಣಾ ಶಿಬಿರಗಳಲ್ಲಿ ಬುರ್ಖಾ ಬ್ಯಾನ್ : ಡೇವಿಡ್ ಕ್ಯಾಮರೂನ್
ಮಹಿಳೆಯರಿಗೆ ಇಂಗ್ಲಿಷ್ ಕಲಿಕೆ ಕಡ್ಡಾಯ, ಪತಿಯ ಜೊತೆ ಇಂಗ್ಲೆಂಡ್ ನಲ್ಲಿ ವಾಸಿಸುತ್ತಿರುವ ಮಹಿಳೆಯರು ಇಂಗ್ಲಿಷ್ ನಲ್ಲಿ ಫೇಲ್ ಆದರೆ ಕಡ್ಡಾಯವಾಗಿ ಗಡಿಪಾರು ಮಾಡಲಾಗುತ್ತದೆಂದು ಆದೇಶ ಹೊರಡಿಸಿದ್ದ ಬ್ರಿಟನ್ ಪ್ರಧಾನಿ ಈಗಷ್ಟೇ ಇನ್ನೊಂದು ಆದೇಶವನ್ನು ಹೊರಡಿಸಿದ್ದಾರೆ. ಬ್ರಿಟನ್ನಲ್ಲಿ ಶಾಲಾ-ಕಾಲೇಜು, ಕೋರ್ಟ್ ಮತ್ತು ಗಡಿತಪಾಸಣ ಶಿಬಿರಗಳಲ್ಲಿ ಬುರ್ಖಾ ನಿಷೇಧಿಸುವ ಸಲುವಾಗಿ ಕ್ಯಾಮರೋನ್ ಆದೇಶಿಸಿದ್ದಾರೆ.