ಇಂದಿನ ಟಾಪ್ 10 ಸುದ್ದಿಗಳು..! 21.01.2016

Date:

ರೋಹಿತ್ ಆತ್ಮಹತ್ಯೆ : 10 ಪ್ರೊಫೆಸರ್ ಗಳ ರಾಜೀನಾಮೆ

ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಹೈದರಾಬಾದ್ ವಿವಿಯಲ್ಲಿ ವಿವಿಧ ಆಡಳಿತಾತ್ಮಕ ಹುದ್ದೆಗಳನ್ನು ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಸೇರಿದ 10 ಉಪನ್ಯಾಸಕರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಸ್ಮೃತಿ ಇರಾನಿಯವರು ನೀಡಿರುವ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ರೋಹಿತ್ ಆತ್ಮಹತ್ಯೆ: ಸ್ಮೃತಿ ಇರಾನಿ ಸುಳ್ಳಿನ ಕಂತೆ – ಕೇಜ್ರಿವಾಲ್

ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಯ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಹೈದರಾಬಾದ್ ವಿವಿಗೆ ಭೇಟಿ ನೀಡಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದರು. ಈ ವೇಳೆ ಮಾತನಾಡಿದ ಕೇಜ್ರಿವಾಲ್, ಸ್ಮೃತಿ ಇರಾನಿ ಅವರು ರೋಹಿತ್ ಜಾತಿಗೆ ಸಂಬಂಧಿಸಿದಂತೆ ಸುಳ್ಳಿನ ಮೇಲೆ ಸುಳ್ಳು ಹೇಳಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದರು.

ಭಾರತದತ್ತ ಮುಖ ಮಾಡಿವೆ ಪಾಕ್ ನ 130 ಅಣ್ವಸ್ತ್ರಗಳು..!

ಪಾಕಿಸ್ತಾನವು ಸುಮಾರು 130 ಅಣ್ವಸ್ತ್ರಗಳನ್ನು ಭಾರತದತ್ತ ಗುರಿಯಾಗಿಸಿ ಇಟ್ಟಿದೆ ಎಂದು ವರದಿಯೊಂದು ಹೇಳಿದೆ.
ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ “ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್” ಈ ವರದಿ ನೀಡಿದ್ದು, ಭಾರತದ ಸಂಭಾವ್ಯ ಮಿಲಿಟರಿ ಕಾರ್ಯಾಚರಣೆ ಹಿಮ್ಮೆಟಿಸಲು ಪಾಕಿಸ್ತಾನ ತನ್ನ 130 ಅಥವಾ ಅದಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳನ್ನು ಭಾರತದತ್ತ ತಿರುಗಿಸಿ ಇಟ್ಟಿದೆ ಎಂದು ಹೇಳಿದೆ.

ಪತ್ರಕರ್ತೆಗೆ ಥಳಿತ: ಗುಜರಾತ್ ಗಲಭೆ ಅಪರಾಧಿ ಬಂಧನ

2002ರ ಗುಜರಾತ್ ಗಲಭೆ ಅಪರಾಧಿ ಸುರೇಶ್ ಛಾರನ್ ಸಂದರ್ಶನ ವೇಳೆ ಪತ್ರಕರ್ತೆ ರೇವತಿ ಲೌಲ್ ಗೆ ಥಳಿಸಿದ ಹಿನ್ನೆಲೆಯಲ್ಲಿ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ನರೋಡಾ ಪಾಟಿಯಾ ನರಮೇಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿದ್ದ ಸುರೇಶ್ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಸುರೇಶ್ ಛಾರನ್ ಸಂದರ್ಶನ ನಡೆಸಿದ ರೇವತಿ ಲೌಲ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ ಕೆರಳಿದ ಸುರೇಶ್ ತನ್ನ ಕೆನ್ನೆಗೆ ಬಾರಿಸಿದುದಲ್ಲದೆ, ದೈಹಿಕ ಹಲ್ಲೆಯನ್ನು ನಡೆಸಿದ್ದಾಗಿ ಪತ್ರಕರ್ತೆ ಆಪಾದಿಸಿದ್ದಾರೆ.

ಗಂಗಾ ಶುದ್ಧಿ ಯೋಜನೆ: 150 ಕಾರ್ಖಾನೆಗಳು ಬಂದ್

ಸರ್ಕಾರದ ನಿರ್ದೇಶನವಿದ್ದರೂ ತ್ಯಾಜ್ಯಜಲ ವೀಕ್ಷಣಾ ವ್ಯವಸ್ಥೆ ಅಳವಡಿಸಿಕೊಳ್ಳದ ಹಿನ್ನಲೆಯಲ್ಲಿ ಗಂಗಾ ನದಿ ದಡದ ಸುಮಾರು 150 ಕಾರ್ಖಾನೆಗಳನ್ನು ಕೇಂದ್ರ ಸರ್ಕಾರ ಬಂದ್ ಮಾಡಿದೆ. ಹಲವು ಟೀಕೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಗಂಗಾ ಶುದ್ಧೀಕರಣ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ನದಿ ತಟದಲ್ಲಿ ತ್ಯಾಜ್ಯಜಲವನ್ನು ನದಿಗೆ ಬಿಡುತ್ತಿದ್ದ ಸುಮಾರು 150 ಕಾರ್ಖಾನೆಗಳನ್ನು ಮುಚ್ಚಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಪ್ರಕಾಶ್ ಜಾವಡೇಕರ್, ಗಂಗಾನದಿ ತಟದಲ್ಲಿ ಸುಮಾರು 764 ಕಾರ್ಖಾನೆಗಳು ತ್ಯಾಜ್ಯಜಲವನ್ನು ನದಿಗೆ ಬಿಡುಗಡೆ ಮಾಡುತ್ತಿವೆ. ಈ ಪೈಕಿ, 514 ಕಾರ್ಖಾನೆಗಳು ಕೇಂದ್ರ ಸರ್ಕಾರದ ನಿರ್ದೇಶನದ ಹಿನ್ನಲೆಯಲ್ಲಿ ನಿರಂತರ ಆನ್ ಲೈನ್ ತ್ಯಾಜ್ಯಜಲ ವೀಕ್ಷಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. 94 ಕಾರ್ಖಾನೆಗಳು ಈ ಒಸಿಇಎಂಎಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದು ತಿಳಿಸಿದರು.

ಫ್ರಾನ್ಸ್ ರಾಯಭಾರಿ ಕಚೇರಿಗೆ ಐಸಿಸ್ ಬೆದರಿಕೆ ಪತ್ರ

ಗಣರಾಜ್ಯದಿನದಂದು ಮುಖ್ಯ ಅತಿಥಿಯಾಗಿ ಭಾರತಕ್ಕೆ ಫ್ರಾನ್ಸ್ ನ ಅಧ್ಯಕ್ಷ ಹೋಲಾಂಡೆ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರಾನ್ಸ್ ರಾಯಭಾರ ಕಚೇರಿ ಮೇಲೆ ದಾಳಿ ಮಾಡುವ ಬೆದರಿಕೆ ಪತ್ರವೊಂದು ಬಂದಿದೆ. ಇಸಿಸ್ ಉಗ್ರ ಸಂಘಟನೆ ಹೆಸರಿನಲ್ಲಿ ಬೆಂಗಳೂರಿನ ಫ್ರಾನ್ಸ್ ರಾಯಭಾರಿ ಕಚೇರಿಗೆ ಬೆದರಿಕೆ ಪತ್ರ ಬಂದಿದ್ದು, ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಖ್ಯಾತ ನರ್ತಕಿ ಮೃಣಾಲಿನಿ ಸಾರಾಭಾಯಿ ಇನ್ನಿಲ್ಲ.

ಪ್ರಖ್ಯಾತ ಶಾಸ್ತ್ರೀಯ ನೃತ್ಯಪಟು ಹಾಗೂ ನೃತ್ಯ ಗುರು ಮೃಣಾಲಿನಿ ಸಾರಾಭಾಯಿಯವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು. ನಿಧನದ ವಿಚಾರವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಅವರ ಪುತ್ರಿ ಮಲ್ಲಿಕಾ ಸಾರಾಭಾಯಿ `ನನ್ನ ತಾಯಿ ಶಾಶ್ವತ ನೃತ್ಯರಂಗಕ್ಕೆ ನಿರ್ಗಮಿಸಿದ್ದಾರೆ’ ಎಂದು ಬರೆದಿದ್ದಾರೆ.

ಉತ್ತರ ಚೀನಾದಲ್ಲಿ ಪ್ರಭಲ ಭೂಕಂಪ

ಉತ್ತರ ಚೀನಾದ ಕ್ಸಿನಿಂಗ್ ಇನ್ ಖೀಂಗ್ವಿ ಪ್ರಾಂತ್ಯದಲ್ಲಿ ಗುರುವಾರ ಪ್ರಭಲ ಭೂಕಂಪ ಸಂಭವಿಸಿದ್ದು, ಹಲವು ಮನೆಗಳು ಹಾಗೂ ಕಟ್ಟಡಗಳು ಹಾನಿಗೊಳಗಾಗಿವೆ. ಭೂಕಂಪದ ತೀವ್ರತೆ 6.4ರಷ್ಟಿತ್ತು ಎನ್ನಲಾಗಿದೆ. ಇದುವರೆಗೂ ಯಾವುದೇ ಸಾವುನೋವಿನ ವರದಿಯಾಗಿಲ್ಲ.
ಗೆಲುವಿನ ಓಟ ಮುಂದುವರೆಸುದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್

ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ.
ಮಹಿಳಾ ಡಬಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾ ಮತ್ತು ಬ್ರೆಜಿಲ್ ನ ಮಾರಿಯಾ ಡಕ್-ಮರಿನೋ ಹಾಗೂ ಟೆಲಿಯಾನಾ ಪೆರೈರಾ ಜೋಡಿಯನ್ನು 6-2, 6-3 ನೇರ ಸೆಟ್ ಗಳ ಅಂತರದಲ್ಲಿ ಮಣಿಸಿದರು. ಇದು ಇಂಡೋ-ಸ್ವಿಸ್ ಜೋಡಿಯ ಸತತ 31ನೇ ಗೆಲುವು.

ಗಂಡನ ತಪ್ಪಿಗೆ ಪತ್ನಿಗೆ ಶಿಕ್ಷೆ ನೀಡಿದ ಪಂಚಾಯ್ತಿ..!

ಗಂಡ ಆರು ಲಕ್ಷ ರೂಪಾಯಿ ಸಾಲ ತೀರಿಸಲು ವಿಫಲವಾದ್ದರಿಂದ, ಪಂಚಾಯಿತಿಯು ಆತನ ಹೆಂಡತಿಯಿಂದ ಲೈಂಗಿಕ ಸುಖ ನೀಡುವಂತೆ ಒತ್ತಾಯಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಫರ್ಬಾನಿಯಲ್ಲಿ ನಡೆದಿದೆ. ಮರಾಠವಾಡಾದ ಪರ್ಭನಿ ಜಿಲ್ಲೆಯ ಸೆಳು ಎಂಬ ಗ್ರಾಮದ ವಾಸಿಗಳಾಗಿರುವ ದಂಪತಿ ದೀಪಕ್ ಭೋರೆ ಮತ್ತು ಆತನ ಪತ್ನಿ ಕಿರುಕುಳಕ್ಕೆ ಒಳಗಾದವರು. ಈ ಸಮುದಾಯದ ಜಾತಿ ಪಂಚಾಯತ್ನಿಂದ ದೀಪಕ್ ಭೋರೆ 9 ಲಕ್ಷ ರೂ. ಸಾಲ ಪಡೆದಿದ್ದ. ಈ ಪೈಕಿ 2.5 ಲಕ್ಷ ರೂ.ಗಳನ್ನು ಆತ ಮರು ಪಾವತಿಸಿದ್ದ. ಬಾಕಿ ಉಳಿದ ಆರು ಲಕ್ಷ ರೂ.ಗಳನ್ನು ಒಂದೇ ಬಾರಿ ಕೊಡಬೇಕು ಎಂದು ಜಾತಿ ಪಂಚಾಯತ್ನ ಪಂಚರು ಆಗ್ರಹಿಸಿದ್ದರು. ಆದರೆ ಇದಕ್ಕೆ ದೀಪಕ್ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಪಂಚರು ದೀಪಕ್ ಭೋರೆ ಇಲ್ಲದಿದ್ದಾಗ ಆತನ ಮನೆಗೆ ನುಗ್ಗಿ ಆತನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...