No menu items!
12.4 C
Munich
Wednesday, April 29, 2026

ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!

Must read

ಅಂಗಡಿಗಳಲ್ಲಿ ಕಳ್ಳತನವಾಗಬಾರದು ಎಂದು ಅದೆಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಕೂಡಾ ಕಳ್ಳರು ಕಳವು ಮಾಡುವುದನ್ನು ಬಿಡುತ್ತಿಲ್ಲ. ಅಂಗಡಿ ಮಾಲೀಕರು ಚಾಪೆಯ ಕೆಳಗೆ ನುಸುಳಿದರೆ, ಕಳ್ಳರು ರಂಗೋಲಿ ಕೆಳಗೇ ನುಸುಳಿಬಿಡುತ್ತಾರೆ. ಅಂಥದ್ದೇ ಒಂದು ಘಟನೆ ಬೆಂಗಳೂರಿನ ಜಯಶ್ರೀ ಬ್ಯಾಂಕರ್ಸ್ ಮತ್ತು ಜ್ಯೂವೆಲರ್ಸ್ ಶಾಪ್ ನಲ್ಲಿ ನಡೆದಿದೆ..!
ಗ್ರಾಹಕರ ಸೋಗಿನಲ್ಲಿ ಬೆಂಗಳೂರಿನ ಜಯಶ್ರೀ ಜ್ಯುವೆಲರ್ಸ್ ಮಳಿಗೆಗೆ ಬಂದ ಮೂವರು ಮಹಿಳೆಯರು, ನೌಕರನ ಗಮನ ಬೇರೆಡೆ ಸೆಳೆದು ಎರಡು ಚಿನ್ನದ ಸರಗಳನ್ನು ಕದ್ದೊಯ್ದಿದ್ದಾರೆ. ಅಂಗಡಿಗೆ ಬಂದವರು ವಿವಿಧ ವಿನ್ಯಾಸ ಸರಗಳನ್ನು ತೋರಿಸುವಂತೆ ಕೇಳಿದ್ದಾರೆ. ಆಗ ಅಲ್ಲಿ ಕೆಲಸ ಮಾಡುವವನಿಂದ 10 ಸರಗಳಿರುವ ಟ್ರೇ ಪಡೆದಿದ್ದಾರೆ.
ಈ ಹಂತದಲ್ಲಿ ಒಬ್ಬಾಕೆ, `ಆ ಸರ ತೋರಿಸಿ, ಈ ಸರ ತೋರಿಸಿ’ ಎನ್ನುತ್ತ ನೌಕರನ ಗಮನ ಬೇರೆಡೆ ಸೆಳೆದಿದ್ದಾಳೆ. ಆಕೆ ತೋರಿಸಿದ ಸರಗಳನ್ನು ತೆಗೆಯಲು ನೌಕರ ತಿರುಗಿಕೊಳ್ಳುತ್ತಿದ್ದಂತೆಯೇ, ಒಬ್ಬಳು ಟ್ರೇನಲ್ಲಿದ್ದ ತಲಾ 50 ಗ್ರಾಮ್ ನ ಎರಡು ಸರಗಳನ್ನು ತೆಗೆದು ಹಿಂದೆ ನಿಂತಿದ್ದಾಕೆಗೆ ಕೊಟ್ಟಿದ್ದಾಳೆ. ಆಕೆ ಅವುಗಳನ್ನು ತಮ್ಮ ಕೈಚಳಕ ಪ್ರದರ್ಶಿಸಿ ಎರಡು ಚಿನ್ನದ ಮಂಗಳಸೂತ್ರಗಳನ್ನ ಎಗರಿಸಿ ಕೆಲ ನಿಮಿಷಗಳ ಕಾಲ ಸರ ನೋಡಿದ ಕಳ್ಳಿಯರು, ಯಾವುದೇ ಆಭರಣ ಇಷ್ಟವಾಗಿಲ್ಲ ಎಂದು ಹೇಳಿ ತೆರಳಿದ್ದಾರೆ. ಆದರೆ ಕೆಲ ಸಮಯದ ಬಳಿಕ ಆಭರಣ ಕಳ್ಳತನವಾಗಿರುವ ವಿಷಯ ತಿಳಿದಿದೆ.
ಪ್ರಕರಣ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ

Video :

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article