ಇಂದಿನ ಟಾಪ್ 10 ಸುದ್ದಿಗಳು..! 10.12.2015

Date:

ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್..!
ಬಾಲಿವುಡ್ ನಟ ಸಲ್ಮಾನ್ ಖಾನ್ 2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಾಂಬೆ ಹೈಕೋರ್ಟ್ ಸಲ್ಮಾನ್ `ನಿರ್ದೋಷಿ’ಎಂದು ತೀಪರ್ು ನೀಡಿದೆ. ಇದರಿಂದ ಸಲ್ಮಾನ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಆದರೆ ಬಾಂಬೆ ಹೈಕೋರ್ಟ್ ನ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಪ್ರಾಸಿಕ್ಯೂಷನ್ ತಿಳಿಸಿದೆ.

ಹಾರ್ದಿಕ್ ಪಟೇಲ್ ಜಾಮೀನು ಅರ್ಜಿ ತಿರಸ್ಕೃತ

ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿರೋ ಮೀಸಲು ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ಜಾಮೀನು ಕೋರಿಕೆ ಅರ್ಜಿಯನ್ನು ಸೂರತ್ ಜಿಲ್ಲಾ ಮತ್ತು ಸಶೆನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಪೊಲೀಸರನ್ನೇ ಕೊಲ್ಲಿ ಎಂದು ಸರ್ಕಾರದ ವಿರುದ್ಧ ಹಿಂಸಾತ್ಮಕ ದಂಗೆಗೆ ಪ್ರಚೋಧಿಸಿದ್ದಕ್ಕಾಗಿ ಅಕ್ಟೋಬರ್ ನಿಂದ ಹಾರ್ದಿಕ್ ಜೈಲಿನಲ್ಲೇ ಇದ್ದಾರೆ.

 

ಚೆನ್ನೈ ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದು ಟ್ಯಾಟೋ…!

ಚೆನ್ನೈ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯೊಬ್ಬನ ಬಗ್ಗೆ ಟ್ಯಾಟೋ ಮಾಹಿತಿ ನೀಡಿದೆ…! ಚೆನ್ನೈ ಹತ್ತಿರದ ಬಾಡಿ ಕೌನ್ಸಿಲರ್ ಎಮ್ ಅರುಣ್ ಕುಮಾರ್ ಎಂಬ ವ್ಯಕ್ತಿ ತನ್ನ ಫೇಸ್ ಬುಕ್ ಪೇಜಿನಲ್ಲಿ ಎದೆ, ಬಲಭುಜ ಮತ್ತು ಕೈ ಮೇಲಿರುವ ಮೂರು ಟ್ಯಾಟೋಗಳ ಫೋಟೋವನ್ನು ಪೋಸ್ಟ್ ಮಾಡಿ `ಈ ವ್ಯಕ್ತಿ ತಮಿಳುನಾಡಿನ ಪೊರಯಾರ್ ಸರ್ಕಾರಿ ಆಸ್ಪತ್ರೆಯಲ್ಲಿದ್ದಾರಂತ ತಿಳಿಸಿದ್ದಾರೆ..! ಈ ಪೋಸ್ಟ್ ಎಲ್ಲಾ ಕಡೆ ವೇಗವಾಗಿ ಹರಡಿದಾಗ ಸಂಜಯ್ ಎಂಬುವವರು ಅರುಣ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ..! ಆ ಬಳಿಕ ಅರುಣ್ ಪೋಸ್ಟ್ ಮಾಡಿರುವ ಟ್ಯಾಟೋಧಾರಿ ವ್ಯಕ್ತಿ 35 ವರ್ಷದ ಜಯರಾಜ್ ಎಂದು ತಿಳಿದಿದೆ. ಜಯರಾಜ್ ಮರಣ ಹೊಂದಿರೋದು ದೃಡವಾಗಿದೆ. ಜಯರಾಜ್ ಬದುಕಿದ್ದಾರೆ, ಅವರು ಬಂದೇ ಬರ್ತಾರೆ ಅಂತ ಕಾಯ್ತಾ ಇದ್ದ ಕುಟುಂದವರಿಗೆ ಇದರಿಂದ ದುಃಖ ಇಮ್ಮಡಿಯಾಗಿದೆ.

 

ರಾಜ್ಯಕ್ಕೆ ನೆರವು ನೀಡುವಂತೆ ಕನ್ನಡದಲ್ಲಿ ಆಗ್ರಹಿಸಿದ ಯಡಿಯೂರಪ್ಪ..!

ಕರ್ನಾಟಕದಲ್ಲಿ ಅಂದಾಜು 33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಗತ್ಯವಾದ ನೆರವು ನೀಡಬೇಕೆಂದು ಬಿ.ಎಸ್.ವೈ ಆಗ್ರಹಿಸಿದ್ದಾರೆ. ಕೋಲಾಹಲದ ನಡುವೆಯೂ ಕನ್ನಡದಲ್ಲೇ ಮಾತನಾಡಿದ ಬಿ.ಎಸ್.ವೈ ರೈತರ ಆತ್ಮಹತ್ಯೆ ತಡೆಯಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯ ನೆರವು ನೀಡಬೇಕೆಂದರು.

 

ದೇಶಕ್ಕಾಗಿ ಚಿಂತಿಸುವಂತೆ ಮೋದಿ ಮನವಿ
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸಂಸತ್ತಿನ ಉಬಯ ಸದನಗಳ ಕಲಾಪಕ್ಕೆ ಅಡ್ಡಿಪಡಸುತ್ತಿರೋದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಜನಶಕ್ತಿಯಿಂದಲೇ ಪ್ರಜಾಪ್ರಭುತ್ವ ಪ್ರಬಲವಾಗಿದೆ. ಆದರೆ ಸಂಸತ್ ಕಲಾಪ ಸುಲಲಿತವಾಗಿ ನಡೆಯದೇ ಇರುವುದು ಬೇಸರ ತಂದಿದೆ ಎಂದು ಹೇಳಿರೋ ಮೋದಿ, ಎಲ್ಲರೂ ದೇಶಕ್ಕಾಗಿ ಚಿಂತಿಸಿ ಎಂದು ಮನವಿ ಮಾಡಿದ್ದಾರೆ.

 
ಮುಸ್ಲಿಂರನ್ನು ಫೇಸ್ ಬುಕ್ ಗೆ ಸ್ವಾಗತಿಸಿದ ಜುಕರ್ ಬರ್ಗ್

ಅಮೆರಿಕಾದ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೇರಿಕಾಕ್ಕೆ ಬರುವ ಮುಸ್ಲಿಮರಿಗೆ ಕಡಿವಾಣ ಹಾಕಬೇಕೆಂದು ನೀಡಿರೋ ಹೇಳಿಕೆಗೆ ಪ್ರತಿಕ್ರಿಯೆ ಎಂಬಂತೆ ಫೇಸ್ ಬುಕ್ ಸಂಸ್ಥಾಪಕ ಜುಕರ್ ಬರ್ಗ್ “ಸಾಮಾಜಿಕ ತಾಣ ಫೇಸ್ ಬುಕ್ ಗೆ ಮುಸ್ಲಿಂರಿಗೆ ಸ್ವಾಗತ ಎಂದು ಹೇಳಿದ್ದಾರೆ.
“ನಮ್ಮ ಸುಮದಾಯ ಹಾಗೂ ಜಗತ್ತಿನಲ್ಲಿನ ಮುಸ್ಲಿಂರಿಗೆ ಬೆಂಬಲ ಸೂಚಿಲು ನಾಣು ಧ್ವನಿ ಎತ್ತುತ್ತೇನೆ” ಎಂದು ಜುಕರ್ ಬರ್ಗ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಮುಸಲ್ಮಾನರ ಹಕ್ಕುಗಳಿಗಾಗಿ ಹೋರಾಡುತ್ತೇನೆಂದು ಹೇಳಿರೋ ಅವರು ಫೇಸ್ ಬುಕ್ ನಾಯಕನಾಗಿ ನಾನು ನಿಮ್ಮನ್ನು ಸದಾ ಸ್ವಾಗತಿಸುತ್ತೇನೆಂದು ಹೇಳಿದ್ದಾರೆ.

 

ಪ್ರವಾಹ ಸಂತ್ರಸ್ತರಿಗೆ 1.100 ಕೋಟಿ ರೂ. ಪರಿಹಾರ ನೀಡಿದ ಟಾಟ ಕನ್ಸಲ್ ಟೆನ್ಸಿ

ಭಾರಿ ಮಳೆಯಿಂದ ತತ್ತರಿಸಿರೋ ತಮಿಳುನಾಡಿನ ಪ್ರವಾಹ ಸಂತ್ರಸ್ತರಿಗೆ ಟಾಟ ಕನ್ಸಲ್ಟನ್ಸಿ 1.100 ಕೋಟಿ ರೂಪಾಯಿ ಪರಿಹಾರ ನೀಡಿದೆ. ಪ್ರವಾಹ ಸಂತ್ರಸ್ತರು ಹಾಗೂ ಚೆನ್ನೈನಲ್ಲಿರುವ ಟಿಸಿಎಸ್ ಉದ್ಯೋಗಿಗಳಿಗೂ ಟಾಟ ಕನ್ಸಲ್ಟನ್ಸಿ ಆರ್ಥಿಕ ನೆರವು ನೀಡಲು ಮುಂದಾಗಿದೆ.

 

ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನಕ್ಷರಸ್ಥರನ್ನು ತಡೆಯುವುದು ತಪ್ಪಲ್ಲ : ಸುಪ್ರೀಂ ಕೋರ್ಟ್

ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಮಾಡಿರುವ ಹರಿಯಾಣ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನಕ್ಷರಸ್ಥರನ್ನು ತಡೆಯುವುದು ತಪ್ಪಲ್ಲವೆಂದು ಹೇಳಿದೆ.
ಪಂಚಾಯಿತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಪುರುಷರು ಕಡ್ಡಾಯವಾಗಿ 10ನೇ ತರಗತಿ ಹಾಗೂ ಮಹಿಳೆಯರು 8ನೇ ತರಗತಿ, ದಲಿತರು 5ನೇ ತರಗತಿ ತೇರ್ಗಡ ಹೊಂದಿರಬೇಕೆಂದು ಹರಿಯಾಣ ಸರ್ಕಾರ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವನ್ನು ವಿರೋಧಿಸಿ ಮಹಿಳಾ ಸ್ಪರ್ಧಕಾಂಕ್ಷಿಗಳು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಸಲ್ಲಿಸಿದ್ದರು.

 

ಗಂಭೀರ್ ನಾಯಕತ್ವದಲ್ಲಿ ಕೋಹ್ಲಿ ಆಡಲ್ಲ..!

ಗೌತಮ್ ಗಂಭೀರ್ ನಾಯಕತ್ವದ ದೆಹಲಿ ತಂಡದಲ್ಲಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೋಹ್ಲಿ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ವಿರಾಟ್ ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ್ದಾರೆಂಬುದು ತಿಳಿದು ಬಂದಿದೆ.
ಐಪಿಎಲ್ ಸಂದರ್ಭದಲ್ಲಿ ಕೋಹ್ಲಿ ಮತ್ತು ಗಂಭೀರ್ ನಡುವೆ ಎರಡು ಸಲ ಜಗಳವಾಗಿತ್ತು..! ಅವರಿಬ್ಬರ ನಡುವೆ ಬಾಂಧವ್ಯ ಅಷ್ಟೊಂದು ಚೆನ್ನಾಗಿಲ್ಲ..!ಆದ್ದರಿಂದ ವಿರಾಟ್ ಗಂಭೀರ್ ನಾಯಕತ್ವದಲ್ಲಿ ಆಡುತ್ತಾರೆಂಬುದು ಖಚಿತವಾಗಿರಲಿಲಲ್ಲ..! ಈಗ ಸ್ವತಃ ಕೋಹ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಸಿನಿಮಾರಂಗಕ್ಕೆ ರಾಜ್ ಕುಟುಂಬದ ಇನ್ನೊಂದು ಕುಡಿ

ವಿನಯ್ ರಾಜ್ ಕುಮಾರ್ ನಟಿಸಲಿರುವ ಮುಂದಿನ ಚಿತ್ರಕ್ಕೆ ಅವರ ಸೋದರ ಸಾಥ್ ನೀಡುತ್ತಿದ್ದಾರೆ. ವಿನಯ್ ಅಭಿನಯಿಸಲಿರೋ ರನ್ ಆ್ಯಂಟನಿ ಚಿತ್ರಕ್ಕೆ ಅವರ ಸೋದರ ಗುರುರಾಜ್ ಬಂಡವಾಳ ಹಾಕಲು ಮುಂದಾಗಿದ್ದಾರೆ. ಇದರೊಂದಿಗೆ ರಾಜ್ ಕುಟುಂಬದ ಇನ್ನೊಬ್ಬರು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...