ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸುವ ಬಗ್ಗೆ ಇದ್ದಂತಹ ಗೊಂದಲ ಮುಗಿಯುತ್ತಿದ್ದಂತೆ ಕಂದಾಯ ಇಲಾಖೆಗೆ ಈಗ ಮತ್ತೊಂದು ಟೆನ್ಷನ್ ಶುರುವಾಗಿದೆ. ಹೀಗಾಗಿ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಈಗ ಮತ್ತೆ ತಲೆ ಎತ್ತಿದೆ. ಗಣೇಶ ಹಬ್ಬ ಮಗೀತು. ಈಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹೆಚ್ಚಾಗಿದೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಅವಕಾಶ ಕೊಡಬೇಕು ಎಂಬ ಕೂಗು ಎದ್ದಿದೆ. ಧ್ವಜಾರೋಹಣ, ಗಣೇಶೋತ್ಸವ ಮುಗಿದರೂ ಈ ಗಲಾಟೆ ಮಾತ್ರ ತಣ್ಣಗಾಗುವಂತೆ ಕಾಣುತ್ತಿಲ್ಲ. ಗಣೇಶೋತ್ಸವಕ್ಕೆ ಅನುಮತಿ ಸಿಗದೆ ನಿರಾಸೆಗೊಂಡಿರೋ ಹಿಂದೂ ಸಂಘಟನೆಗಳು ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದಿವೆ. ಕನ್ನಡ ಸಾಹಿತ್ಯ ಪರಿಷತ್ ನಿಂದ ನಾಡಧ್ವಜ ಹಾರಿಸುವಂತೆ ಒತ್ತಡ ಹೇರಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮನವಿ ಮಾಡಿದೆ.
ಮತ್ತೆ ಸುದ್ದಿಯಾಗುತ್ತಿದೆ ಈದ್ಗಾ ಮೈದಾನ
Date: