666 ಮೋಷನ್ ಟೀಸರ್ ರಿಲೀಸ್

Date:

 

ಕನ್ನಡದಲ್ಲಿ ವೆಬ್ ಸಿರೀಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ . ಯುವತಂಡವನ್ನು ಹೊಂದಿರುವ 666 ವೆಬ್ ಸಿರೀಸ್. ಕಿರುಚಿತ್ರ ನಿರ್ದೇಶಿಸಿ ಗಮನ ಸೆಳೆದಿದ್ದ ರಂಗಸ್ವಾಮಿ ಮೊದಲ ಬಾರಿ ವೆಬ್ ಸಿರೀಸ್ ನಿರ್ದೇಶಿಸಿ ನಿರ್ಮಾಣ ಮಾಡಿದ್ದು ಇಂದು ಚಿತ್ರದ ಮೋಷನ್ ಟೀಸರ್ ಬಿಡುಗಡೆಯಾಗಿದೆ.

ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಸಿನಿಮಾ ನಿರ್ದೇಶನದ ಮೇಲೆ ಅಪಾರವಾದ ಆಸಕ್ತಿ ಹೊಂದಿದ್ದು , 275, ಡೋಂಟ್ ವಿಸ್ಪರ್, ನಿಹಾರಿಕ, ಸೇರಿದಂತೆ ಹಲವು ಕಿರುಚಿತ್ರಗಳನ್ನು ಕೆಲಸ ನಿರ್ವಹಿಸುತ್ತಲೇ ನಿರ್ದೇಶಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಕಿರುಚಿತ್ರ ನಿರ್ದೇಶಿಸಿದ್ದ ಅನುಭಗಳನ್ನೆಲ್ಲ ಇಟ್ಟುಕೊಂಡು ಮೊದಲ ಬಾರಿ ಏಳು ಕಂತುಗಳುಳ್ಳ ವೆಬ್ ಸಿರೀಸ್ ನಿರ್ದೇಶಿಸಿ ನಿರ್ಮಾಣವನ್ನು ಮಾಡಿದ್ದಾರೆ.

ಕೋಡೆಕ್ಸ್ ಗಿಗಾಸ್ ಆಧರಿಸಿ 666 ವೆಬ್ ಸಿರೀಸ್ ಕಥೆ ಹೆಣೆಯಲಾಗಿದ್ದು, ಕಥೆ ಚಿತ್ರಕಥೆಯನ್ನು ರಂಗಸ್ವಾಮಿಯವರೇ ಬರೆದಿದ್ದಾರೆ . ಹಾರಾರ್ ಥ್ರಿಲ್ಲರ್ ಜಾನರ್ ಒಳಗೊಂಡ 666 ವೆಬ್ ಸಿರೀಸ್ ಏಳು ಕಂತುಗಳನ್ನು ಒಳಗೊಂಡಿದ್ದು, ಐದು ಭಾಷೆಯಲ್ಲಿ ನಿರ್ಮಾಣವಾಗಿದೆ. ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿಯಿದೆ. ಮೋಷನ್ ಟೀಸರ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಸಿನಿಮಾ ತಂಡ ಡಿಸೆಂಬರ್ ನಲ್ಲಿ 666 ವೆಬ್ ಸಿರೀಸ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ.

ದರ್ಶಿನಿ ಒಡೆಯರ್, ಶಿವಾನಿ, ಗಣೇಶ್ ನಾಯಕ್, ಕೀರ್ತಿ, ಮಂಜುನಾಥ್, ವಿವೇಕ್ ವೀಣಾ ಈ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಸಿನಿಮಾರಂಗ ಬ್ಯಾನರ್ ನಡಿ ನಿರ್ದೇಶಕ ರಂಗಸ್ವಾಮಿ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದು, ಸಚಿನ್ ಬಸ್ರೂರು ಸಂಗೀತ ನಿರ್ದೇಶನ, ಅರುಣ್ ಭಾಗವತ್ ಕ್ಯಾಮೆರ ನಿರ್ದೇಶನ ಹಾಗೂ ಸಂಕಲನ ಚಿತ್ರಕ್ಕಿದೆ .

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...