ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡಲು ಇಷ್ಟವಿತ್ತಂತೆ. ಅಂದು ಕರೀನಾ ಹೇಳಿದ ವಿಷಯ ಇಂದು ಸುದ್ದಿಯಾಗಿದೆ.
ಕರೀನಾ 2002ರಲ್ಲಿ ಸಿಮಿ ಗರೆವಾಲ್ ಅವರ ಟಾಕ್ ಶೋ ‘ರೆಂಡಜ್ವಸ್ ವಿತ್ ಸಿಮಿ’ ಗರೆವಾಲ್ ನಲ್ಲಿ ಕರೀನಾ ಕಪೂರ್ ನಿರೂಪಕಿಯೊಂದಿಗೆ ಮಾತುಕತೆ ನಡೆಸುತ್ತಿರುವಾಗ ತಾವು ಸಿಂಗಲ್ ಎಂದಿದ್ದರು. ನನ್ನಂತೇ ಇರೋ ಬಾಳ ಸಂಗಾತಿಯನ್ನು ಭೇಟಿಯಾಗಲು ಕಾಯುತ್ತಿದ್ದೇನೆ ಎಂದಿದ್ದ ಕರೀನಾಗೆ ನಿರೂಪಕಿ ಡೇಟೆಂಗ್ ಗೆ ಹೋಗುವುದಾದರೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದ್ದರು.
ಆಗ ಕರೀನಾ ಬಾಲಿವುಡ್ ನಟರಾರ ಹೆಸರನ್ನೂ ಹೇಳದೆ ಕನ್ನಡ ಇಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರನ್ನು ಹೇಳಿದ್ದರು.
ತನಗೆ ರಾಹುಲ್ ಗಾಂಧಿ ಅವರ ಜೊತೆ ಡೇಟಿಂಗ್ ಮಾಡಲು ಇಷ್ಟ. ನಾನು ಅವರ ಬಗ್ಗೆ ತಿಳಿದುಕೊಳ್ಳಲು ಬಯಸ್ತೀನಿ ಎಂದಿದ್ರು.
ಇದೀಗ ಸುದ್ದಿಯಾಗಿ ವೈರಲ್ ಆಗ್ತಿದೆ.