ನಟ ಶಾರೂಖ್ ಖಾನ್ ಜೊತೆ ನಟಿಸಲು ಸಾಕಷ್ಟು ನಟಿಯರು ಕಾಯ್ತಿದ್ದಾರೆ. ಶಾರೂಖ್ ಜೊತೆ ನಟಿಸಲು ಒಂದೇ ಒಂದು ಅವಕಾಶ ಸಿಕ್ರೆ ಸಾಕಪ್ಪ ಎಂದು ತುದಿಗಾಲಲ್ಲಿ ನಟಿಯರು ನಿಂತಿದ್ದಾರೆ. ಆದರೆ ಈಗ ಬಾಲಿವುಡ್ ನ ಸ್ಟಾರ್ ನಟಿಯೊಬ್ಬರು ಶಾರುಖ್ ಜೊತೆ ನಟಿಸಲ್ಲ ಎಂದು ಹೇಳಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡ್ತಿದೆ.
ಶಾರೂಖ್ ಖಾನ್ ಈಗ ‘ಝೀರೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಗಗನಯಾತ್ರಿ ರಾಕೇಶ್ ಶರ್ಮಾ ಅವರ ಜೀವನಾಧರಿತ ಸಿನಿಮಾ. ಈ ಸಿನಿಮಾಕ್ಕೆ ‘ಸೆಲ್ಯೂಟ್’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಕರೀನಾ ಕಪೂರ್ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ, ಕರೀನಾ ಶಾರೂಖ್ ಜೊತೆ ನಟಿಸಲು ಇಷ್ಟವಿಲ್ಲ ಎಂದಿದ್ದಾರೆ ಎಂದು ಹೇಳಲಾಗ್ತಿದೆ.