ನೆಪವೊಡ್ಡಿ ಅಥವಾ ಬೇಜವಬ್ದಾರಿತನದಿಂದ ಸರ್ಕಾರಿ ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ತಪ್ಪಿಸಿಕೊಳ್ಳುವಂತಿಲ್ಲ. ಕರ್ತವ್ಯದಿಂದ ತಪ್ಪಿಸಿಕೊಂಡ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುವುದು ಗ್ಯಾರೆಂಟಿ.
ಹೌದು, ಚುನಾವಣಾ ಆಯೋಗವೇ ಹೀಗೊಂದು ಖಡಕ್ ಎಚ್ಚರಿಕೆ ನೀಡಿದೆ. ಚುನಾ ಕರ್ತವ್ಯಕ್ಕೆ ಹಾಜರಾಗದ ಸರ್ಕಾರಿ ಅಧಿಕಾರಿಗಳ ಇತಿಹಾಸ ಗುರುತಿಸಿ ಅವರಿಗೂ ಎಚ್ಚರಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುವವರ ಸಂಖ್ಯೆ ಬೆಂಗಳೂರಲ್ಲೇ ಹೆಚ್ಚಿದೆ. 1500ಕ್ಕೂ ಹೆಚ್ಚು ಅಧಿಕಾರಿಗಳು ಕುಂಟು ನೆವ ಹೇಳಿ ಕರ್ತವ್ಯದಿಂದ ತಪ್ಪಿಸಿಕೊಳ್ಳುವ ಗುಣದವರಂತೆ. ಬೇರೆ ಜಿಲ್ಲೆಗಳಲ್ಲಿ ಈ ಸಮಸ್ಯೆ ಇಲ್ಲವಂತೆ.