ಕರ್ನಾಟಕ ಸರ್ಕಾರದ ನೂತನ ಸಚಿವರ ಪಟ್ಟಿ.

Date:

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದ ಬೆನ್ನಲ್ಲೇ ಭಾನುವಾರ ಸಂಜೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಾಳೆ ಸಂಜೆ ರಾಜಭವನದಲ್ಲಿ 13 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ನಾಳೆ ಸಂಜೆ 4 ಗಂಟೆ ಸುಮಾರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ 13 ಮಂದಿ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಸಂಜೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲ ವಜುಭಾಯಿವಾಲಾ ಅವರಿಗೆ ನೀಡಲಿದ್ದು, ಆ ಮೂಲಕ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅಧಿಕೃತ ಸಿದ್ಧತೆ ಆರಂಭಗೊಳ್ಳುತ್ತದೆ.
ಇನ್ನು 13 ಮಂದಿ ಹಾಲಿ ಸಚಿವರನ್ನು ನೂತನ ಸಂಪುಟದಿಂದ ಕೈಬಿಡಲಾಗಿದ್ದು, ಅವರ ಬದಲಿಗೆ 12 ಮಂದಿ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಹಾಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಚಿವ ಸ್ಥಾನಕ್ಕೆ ಬಡ್ತಿ ಪಡೆದಿರುವ ಹಿನ್ನಲೆಯಲ್ಲಿ ಅವರು ಸ್ಪೀಕರ್ ಸ್ಥಾನವನ್ನು ತೆರವುಗೊಳಿಸುತ್ತಿದ್ದು, ಅವರ ಸ್ಥಾನಕ್ಕೆ ಕೆಬಿ ಕೊಳಿವಾಡ ಅವರನ್ನು ನೇಮಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಉಳಿದಂತೆ ರಾಜ್ಯ ಸಂಪುಟ ಪುನಾರಚನೆಯಲ್ಲಿ ಕೈ ಬಿಡಲಾಗುವ ಮತ್ತು ಸೇರ್ಪಡೆಯಾಗುವ ಸಚಿವರ ಪಟ್ಟಿ ಇಂತಿದೆ.

ಸಂಪುಟದಿಂದ ಕೈಬಿಡಲಾಗುವ ಸಚಿವರು

ಪಿಟಿ ಪರಮೇಶ್ವರ್ ನಾಯಕ್ (ಕಾರ್ಮಿಕ ಸಚಿವ)
ಯುಟಿ ಖಾದರ್ (ಆರೋಗ್ಯ ಸಚಿವ)
ವಸತಿ ಸಚಿವ ಅಂಬರೀಶ್ (ವಸತಿ ಸಚಿವ)
ಕಿಮ್ಮನೆ ರತ್ನಾಕರ್ (ಶಿಕ್ಷಣ ಸಚಿವ)
ಅಭಯ್ ಚಂದ್ರ ಜೈನ್ (ಮೀನುಗಾರಿಕೆ ಸಚಿವ)
ಕೃಷ್ಣ ಬೈರೇಗೌಡ (ಕೃಷಿ ಸಚಿವ)
ದಿನೇಶ್ ಗುಂಡೂರಾವ್ (ಆಹಾರ-ನಾಗರಿಕ ಪೂರೈಕೆ ಸಚಿವ)
ವಿನಯ್ ಕುಮಾರ್ ಸೊರಕೆ (ನಗರಾಭಿವೃದ್ಧಿ ಸಚಿವ)
ಶ್ಯಾಮನೂರು ಶಿವಶಂಕರಪ್ಪ (ತೋಟಗಾರಿಕೆ ಸಚಿವ)
ಬಿ ಶ್ರೀನಿವಾಸ್ ಪ್ರಸಾದ್ (ಕಂದಾಯ ಸಚಿವ)
ಎಸ್ ಆರ್ ಪಾಟೀಲ್ (ಐಟಿ ಬಿಟಿ ಸಚಿವ)
ಖಮರುಲ್ ಇಸ್ಲಾಂ (ಅಲ್ಪ ಸಂಖ್ಯಾತ ಸಚಿವ)
ಸತೀಶ್ ಜಾರಕಿ ಹಳಿ (ಸಣ್ಣ ಕೈಗಾರಿಕೆ ಸಚಿವ)
ಬಾಬೂರಾವ್ ಚಿಂಚನಸೂರ (ಜವಳಿ ಸಚಿವ)
ಶಿವರಾಜ್ ತಂಗಡಗಿ (ಸಣ್ಣ ನೀರಾವರಿ ಸಚಿವ)

ಸಂಪುಟ ಸೇರುವ ನೂತನ ಸಚಿವರು

ರುದ್ರಪ್ಪ ಲಮಾಣಿ (ಹಾವೇರಿ ಶಾಸಕ)
ಸಂತೋಷ್ ಲಾಡ್ (ಧಾರವಾಡ ಜಿಲ್ಲೆಯ ಕಲಘಟಗಿ )
ತನ್ವೀರ್ ಸೇಠ್- (ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ)
ಶಿವಮೂರ್ತಿ ನಾಯಕ್ ಅಥವಾ ಗೋಪಾಲಕೃಷ್ಣ
ಎನ್ ಎ ಹ್ಯಾರಿಸ್ಗೆ (ಶಾಂತಿನಗರ ಶಾಸಕ)
ಕೆ ಸುಧಾಕರ್ (ಚಿಕ್ಕಬಳ್ಳಾಪುರ ಶಾಸಕ)
ಕಾಗೋಡು ತಿಮ್ಮಪ್ಪ (ಸಾಗರ ಶಾಸಕ)
ಸುಧಾಕರ್ (ಹಿರಿಯೂರು ಶಾಸಕ )
ಎಂ ಕೃಷ್ಣಪ್ಪ (ವಿಜಯನಗರ ಶಾಸಕ)
ರಮೇಶ್ ಕುಮಾರ್ (ಶ್ರೀನಿವಾಸಪುರ ಶಾಸಕ)
ಪ್ರಮೋದ್ ಮದ್ವರಾಜ್ (ಉಡುಪಿ ಶಾಸಕ)
ಎಸ್ ಎಸ್ ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ)
ಪ್ರಿಯಾಂಕ್ ಖರ್ಗೆ (ಚಿತ್ತಾಪುರ ಶಾಸಕ)
ಅಪ್ಪಾಜಿ ನಾಡಗೌಡ ಅಥವಾ ಸಿದ್ದು ನ್ಯಾಮಗೌಡ

POPULAR  STORIES :

ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!

`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’

ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…

ದರ್ಭೆಯನ್ನುಪವಿತ್ರವಾಗಿ ಶುಭ ಹಾಗೂ ಅಶುಭ ‍‍ಸಂದರ್ಭಗಳಲ್ಲಿ ನಮ್ಮಬಲಕೈ ಬೆರಳಲ್ಲಿ ಯಾಕೆ ಧರಿಸುತ್ತೇವೆ????

ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!

ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!

ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!

7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!

ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...