ಡಿಎಂಕೆ ಮುಖಂಡ , ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಅಭಿಮಾನಿಗಳು ಆಘಾತಕ್ಕೆ ಒಳಗಾಗಿ, ಈವರೆಗೆ 21 ಮಂದಿ ಸಾವನ್ನಪ್ಪಿದ್ದಾರೆ.ಇದನ್ನು ಸ್ವತಃ ಡಿಎಂಕೆ ಪಕ್ಷವೇ ಹೇಳಿದೆ.
ಕರುಣಾನಿಧಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಯಾವುದೇ ಅನಾಹುತ ಮಾಡಿಕೊಳ್ಳ ಬಾರದು ಎಂದು ಡಿಎಂಕೆ ಮನವಿ ಮಾಡಿದೆ.

ಕರುಣಾನಿಧಿ ಅವರ ಅನಾರೋಗ್ಯದ ಸುದ್ದಿ ಕೇಳಿ ನಮ್ಮ ಪಕ್ಷದ 21 ಕಾರ್ಯಕರ್ತರು ಸಾವನ್ನಪ್ಪಿದರುವುದು ತಿಳಿದು ನೋವಾಗಿದೆ ಎಂದು ಹೇಳಿರುವ ಕಾರ್ಯದ್ಯಕ್ಷ ಎಂಕೆ ಸ್ಟ್ಯಾಲಿನ್ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಕರುಣಾನಿಧಿ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.






