ಕಿರಿಕ್ ಪಾರ್ಟಿ ಖ್ಯಾತಿಯ ನಿರ್ದೇಶಕ ರಿಶಬ್ ಶೆಟ್ಟಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಮೂಲಕ ಮತ್ತೊಂದು ಮ್ಯಾಜಿಕ್ ಮಾಡಲಿದ್ದಾರೆ…! ಈ ಸಿನಿಮಾದ ಟ್ರೇಲರ್ ಸಿನಿಮಾ ಸಾಮಾನ್ಯವಂತೂ ಇಲ್ಲ ಎಂಬುದನ್ನು ಹೇಳುತ್ತಿದೆ.
ಕನ್ನಡ ಶಾಲೆಗಳ ಮೇಲಿನ ಪ್ರೀತಿ, ಗೌರವ, ಆ ಶಾಲೆಗಳ ಶಕ್ತಿ, ಪ್ರಸ್ತುತ ಸಾ್ಥಿತಿಗತಿಗಳ ಬಗ್ಗೆ ಕಾಸರುಗೋಡು ಶಾಲೆ ಬೆಳಕು ಚೆಲ್ಲಿದೆ.
ಹಿರಿಯ ನಟ ಅನಂತ್ ನಾಗ್ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ವೆಂಕಟೇಶ್ ಅಂಗುರಾ ಛಾಯಾಗ್ರಹಣ, ಎಲ್ಲಾದಕ್ಕಿಂತ ಹೆಚ್ಚಾಗಿ, ರಂಜನ್, ಸಂಪತ್, ಪ್ರಮೋದ್ ಶೆಟ್ಟಿ, ಸಪ್ತಪವೂರ್, ಮಹೇಂದ್ರ, ಸೋಹಾನ್ ಶೆಟ್ಟಿ ಸೇರಿದಂತೆ, ಈ ಚಿತ್ರದಲ್ಲಿ ಅಭಿನಯಿಸಿರೋ ಕಲಾವಿದ್ರ ಪಾತ್ರಗಳು ಸಹ ಮೆಚ್ಚುವಂತಿವೆ ಎಂಬುದನ್ನು ಟ್ರೇಲರ್ ಹೇಳ್ತಿದೆ. ನೀವೊಮ್ಮೆ ನೋಡಿ…