ಕೇರಳದ 96ವರ್ಷದ ಅಜ್ಜಿಯೊಬ್ಬರು ಮೂರನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಇದು ಅವರ ಜೀವನದಲ್ಲಿ ಬರೆದ ಮೊಟ್ಟಮೊದಲ ಪರೀಕ್ಷೆ ..! ಪ್ರಶ್ನೆ ಪತ್ರಿಕೆ ಯಲ್ಲಿ ತಾನು ಓದಿರೋ ಎಲ್ಲವನ್ನೂ ಕೇಳಿಲ್ಲ ಎಂದು ಈ ಅಜ್ಜಿ ಶಿಕ್ಷಕರ ಮೇಲೆ ಸಿಟ್ಟಾಗಿದ್ದಾರೆ.
ಈ ಅಜ್ಜಿಯ ಹೆಸರು ಕಾತ್ಯಾಯಿನಿ. ಇತರೆ ನಾಗರಿಕರು ಸಹ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದವರಲ್ಲಿ ಕಾತ್ಯಾಯಿನಿ ಅಜ್ಜಿಯೇ ಹಿರಿಯರು.
ಅಲಪ್ಬುಜ್ಹಾ ನಗರದ ಕಾನಿಚೆನೆಲ್ಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಭಾನುವಾರ ಪರೀಕ್ಷೆ ನಡೆದಿತ್ತು. ಅಜ್ಜಿಯ ಜೊತೆ 45 ಮಂದಿ ಪರೀಕ್ಷೆ ಬರೆದಿದ್ದಾರೆ.
ಇಂಗ್ಲಿಷ್ ಮೌಖಿಕ ಪರೀಕ್ಷೆಯಲ್ಲಿ ಶೇ.100ರಷ್ಟು ಅಂಕ ಪಡೆದುಕೊಂಡಿದ್ದೀನಿ. ಉಳಿದ ವಿಷಯಗಳ ಫಲಿತಾಂಶ ಪ್ರಕಟವಾಗಿಲ್ಲ. ಮುಂದಿನ ವರ್ಷ ನಾಲ್ಕನೇ ತರಗತಿ ಸೇರುತ್ತೇನೆ. ಗಣಿತ ಮತ್ತು ಇಂಗ್ಲಿಷ್ ಗಾಗಿ 6ತಿಂಗಳು ಟ್ಯೂಷನ್ ತೆಗೆದುಕೊಂಡಿದ್ದೆ ಎಂದು ಕಾತ್ಯಾಯಿನಿ ಹೇಳಿದ್ದಾರೆ.
ಕೇರಳ ರಾಜ್ಯ ಸರ್ಕಾರದ ‘ಅಕ್ಷರಲಕ್ಷಮ’ ಯೀಜನೆಯಡಿ ಈ ಪರೀಕ್ಷೆ ನಡೆದಿದೆ. ಇಂಗ್ಲಿಷ್ ಮೌಖಿಕ, ಮಲೆಯಾಳಂ ಬರೆಯುವಿಕೆ, ಗಣಿತ ಹೀಗೆ 3 ವಿಷಯಗಳನ್ನು ಬರೆದಿದ್ದಾರೆ. ಪ್ರತಿ ವಿಷಯಕ್ಕೆ 30ಅಂಕಗಳಿಗೆ ಪರೀಕ್ಷೆ ನಡೆದಿತ್ತು.