ಬಹು ನಿರೀಕ್ಷಿತ ಕೆಸಿಸಿ (ಕನ್ನಡ ಚಲನಚಿತ್ರ ಕಪ್) ಫೈನಲ್ ಪಂದ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜಸ್ ಮುಖಾಮುಖಿ ಆಗಲಿವೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಮತ್ತು ಇಂದು ಕೆಸಿಸಿ ಪಂದ್ಯಾವಳಿಗಳು ನಡೆಯುತ್ತಿವೆ.
ಗಣೇಶ್ ಮತ್ತು ಯಶ್ ತಂಡಗಳು ಫೈನಲ್ ನಲ್ಲಿ ಸೆಣೆಸಲಿವೆ. ಯಶ್ ತಂಡದಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿಗ ಓವೈಸ್ ಶಾ ಹಾಗೂ ಗಣೇಶ್ ತಂಡದಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಇದ್ದಾರೆ.
ಕಳೆದ ಬಾರಿ ಶಿವರಾಜ್ ಕುಮಾರ್ ನೇತೃತ್ವದ ವಿಜಯ ನಗರ ಪ್ಯಾಟ್ರಿಯಾಟ್ಸ್ ಜಯಗಳಿಸಿತ್ತು. ಸುದೀಪ್ ಸಾರಥ್ಯದ ಕದಂಬ ಲಯನ್ಸ್ ರನ್ನರ್ ಅಪ್ ಆಗಿತ್ತು.
ಇಂದು ರಾತ್ರಿ8.30 ಕ್ಕೆ ಫೈನಲ್ ಪಂದ್ಯ ನಡೆಯಲಿದೆ.