No menu items!
12.1 C
Munich
Saturday, May 2, 2026

ರಕ್ಷಿತ್ -ರಶ್ಮಿಕಾ ಬ್ರೇಕ್ ಅಪ್…!? ಮುತ್ತಿ‌ನ‌ ಕಥೆ ಕೊನೆಗೂ ಇಬ್ಬರನ್ನು ದೂರ ಮಾಡಿ ಬಿಟ್ಟಿತೇ?!

Must read

‘ಕಿರಿಕ್ ಪಾರ್ಟಿ’ ಖ್ಯಾತಿಯ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಅರಳಿದ್ದ ಪ್ರೀತಿ ಮದುವೆ ತನಕ ಬಂದಿತ್ತು. ನಿಶ್ಚಿತಾರ್ಥ ಆಗಿತ್ತು. ಆದರೆ, ಇತ್ತೀಚೆಗೆ ಇವರ ಸಂಬಂಧ ಮುರಿದು ಬಿದ್ದಿದೆ ಎಂಬ ಅಂತೆ-ಕಂತೆ ಪುರಾಣಗಳು ಕೇಳಿ ಬರ್ತಿದ್ದವು. ಈಗ ಈ ಅಂತೆ-ಕಂತೆಗಳೇ ನಿಜವಾಗಿದೆ..!?

ಹೌದು, ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದೆ.

ಇಂದು ರಶ್ಮಿಕಾ ಕನ್ನಡ ಮತ್ತು ತೆಲುಗಿನ ಟಾಪ್ ಮೋಸ್ಟ್ ನಟಿ.‌ ಅನೇಕ ಸಿನಿಮಾಗಳು ಕೊಡಗಿನ ಈ ಬೆಡಗಿ ಕೈಯಲ್ಲಿದೆ.
ರಶ್ಮಿಕಾ ಅಭಿನಯದ ‘ಗೀತಾ ಗೋವಿಂದಂ’ ಸಿನಿಮಾದ ‘ಒಂದು ಮುತ್ತಿನ’ ಸೀನ್ ಬ್ರೇಕಪ್ ಅಪ್ ಗೆ ಭದ್ರ ಬುನಾದಿ ಹಾಕಿದಂತಿದೆ. ಈ ಮೊದಲು ಬ್ರೇಕಪ್ ಸುದ್ದಿ ಬಂದಾಗಲೆಲ್ಲ ರಶ್ಮಿಕಾ -ರಕ್ಷಿತ್ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದರು‌. ಇದೀಗ ಇಬ್ಬರು‌ ಪರಸ್ಪರ ಒಪ್ಪಿ ದೂರಾಗಲು ನಿರ್ಧರಿಸಿದ್ದಾರೆ ಎಂದು‌ ತಿಳಿದುಬಂದಿದೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಸಹ ಗಾಸಿಪ್ ಹರಿದಾಡಿದ್ದಿದೆ.
ಕನ್ನಡ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಬ್ಯುಸಿ ಇರುವ ರಶ್ಮಿಕಾ ಕುಟುಂಬಸ್ಥರೊಂದಿಗೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ತಮಗೆ ಮದುವೆಗಿಂತ ಕೆರಿಯರ್ ಮುಖ್ಯ ಎಂದು ರಕ್ಷಿತ್- ರಶ್ಮಿಕಾ ದೂರ ಆಗುತ್ತಿದ್ದಾರೆ ಎಂದಿ ವರದಿ ಆಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article