ಡಾ.ರಾಜ್ ಕುಮಾರ್ ಅವರಂತೆ ಕಣ್ಣು ದಾನ ಮಾಡಲು ಮುಂದಾದ ಖ್ಯಾತ ನಾಯಕನಟಿ..
ನೇತ್ರದಾನದ ಬಗ್ಗೆ ಎಲ್ಲಡೆ ಅವರಿವನ್ನ ಮೂಡಿಸಲಾಗ್ತಿದೆ.. ಡಾ.ರಾಜ್ ಕುಮಾರ್ ಅವರಂತಹ ಮೇರು ನಟರೆ ನೇತ್ರದಾನವನ್ನ ಮಾಡಿ ಸಾಮಾನ್ಯರಿಗೆ ಮಾದರಿಯಾಗಿದ್ದಾರೆ.. ಒಬ್ಬ ವ್ಯಕ್ತಿಯ ಕಣ್ಣುಗಳು ಇಬ್ಬರ ಜೀವನವನ್ನ ಬೆಳಕಾಗಿಸುತ್ತದೆ.. ಹೀಗಾಗೆ ನೇತ್ರಗಳನ್ನ ದಾನ ಮಾಡೋದು ಬೇರೆಯವರ ಜೀವನಕ್ಕೆ ದಾರಿ ದೀಪವಾದಂತೆ..
ಸದ್ಯ ತಮಿಳು, ತೆಲುಗು, ಮಲೆಯಾಳಂ ಸಿನಿಮಾ ರಂಗದಲ್ಲಿ ತನ್ನದೇ ಅಸ್ತಿತ್ವವನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ನಟಿ ಕೀರ್ತಿ ಸುರೇಶ್ ತಮ್ಮ ನೇತ್ರಗಳನ್ನ ದಾನ ಮಾಡುವುದಾಗಿ ತಿಳಿಸಿದ್ದಾರೆ.. ಇತ್ತೀಚೆಗೆ ನೇತ್ರಾ ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನೆಗೆ ತೆರಳಿದ್ದ ಕೀರ್ತಿ, ಇದೇ ಸಂದರ್ಭದಲ್ಲಿ ಈ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು, ಈ ಬಗ್ಗೆ ಜನರಲ್ಲಿ ತಾನು ಸಹ ಜಾಗೃತಿ ಮೂಡಿಸುವುದಾಗಿ ತಿಳಿಸಿದ್ದಾರೆ