KGF ಚಾಪ್ಟರ್ 2 ಕೊಡ್ತು ಬಂಪರ್ ಆಫರ್..! ಇದನ್ನು ಕೇಳಿದ ಅಭಿಮಾನಿಗಳು ಫುಲ್ ಖುಷ್..!?

Date:

ಕೆಜಿಎಫ್ ಸಿನಿಮಾ ರಿಲೀಸ್ ಆಗಿದ್ದು ಆಯ್ತು ಸೂಪರ್ ಹಿಟ್ ಆಗಿದ್ದು ಆಯ್ತು ಇಡೀ ದೇಶದಾದ್ಯಂತ ಕನ್ನಡ ಸಿನಿಮಾ ಅಂದ್ರೆ ಏನು ಅಂತ ತೋರಿಸಿ ಕೊಟ್ಟಿದ್ದು ಆಯಿತು ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ಒಟ್ಟು ಐದು ಭಾಷೆಗಳಲ್ಲಿ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ ತೆರೆ ಕಂಡಿದ್ದು ಈಗ ಇತಿಹಾಸ.


ಕೆಜಿಎಫ್ ಚಾಪ್ಟರ್ 1 ರ ನಂತರ ಕೆಜಿಎಫ್ ಚಾಪ್ಟರ್ 2 ಬಗ್ಗೆ ಎಲ್ಲರಲ್ಲಿ ಕುತೂಹಲ ಹೆಚ್ಚಾಗಿತ್ತು ಅದರಂತೆ ಚಿತ್ರತಂಡ ಕೂಡ ಇತ್ತೀಚೆಗಷ್ಟೇ ಚಾಪ್ಟರ್ 2 ಮುಹೂರ್ತವನ್ನು ಮಾಡಿ ಮುಗಿಸಿತ್ತು.


ಕೆಜಿಎಫ್ ಚಿತ್ರವನ್ನ ನೋಡಿದ ಅದೆಷ್ಟೋ ಮಂದಿಗೆ ನಾವು ಕೂಡ ಕೆಜಿಎಫ್ ಚಿತ್ರದಲ್ಲಿ ಒಂದು ಪಾತ್ರವಾಗಿ ಇರಬಾರದ ಎಂದು ಅನಿಸದೆ ಇರದು ಹೀಗೆ ಯಾರಿಗಿಲ್ಲ ಕೆಜಿಎಫ್ ಭಾಗವಾಗಬೇಕು ಎಂದು ಅನಿಸಿತು ಅವರಿಗೆಲ್ಲ ಇದೀಗ ಚಿತ್ರತಂಡದ ಕಡೆಯಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ.


ಇತ್ತೀಚೆಗಷ್ಟೇ ಮುಹೂರ್ತ ಮಾಡಿಕೊಂಡಿದ್ದ ಚಿತ್ರತಂಡ ಇದೀಗ ಹೊಸ ಕಲಾವಿದರ ಹುಡುಕಾಟದಲ್ಲಿದೆ ಈ ಸಂಬಂಧ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಕಲಾವಿದರಿಗೆ ಕೆಜಿಎಫ್ 2 ನಲ್ಲಿ ನಟಿಸುವ ಸುವರ್ಣ ಅವಕಾಶವನ್ನು ನೀಡಿದ್ದಾರೆ.


ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವೀಟರ್ ನಲ್ಲಿ ಆಡಿಶನ್ ದಿನಾಂಕವನ್ನು ಪ್ರಕಟ ಮಾಡಿದ್ದಾರೆ ಇದೇ ಏಪ್ರಿಲ್ 26ರಂದು ಬೆಂಗಳೂರಿನ ಜಿಎಂ ರಿಜಾಯಜ್ ನಲ್ಲಿ ಆಡಿಷನ್ ನಡೆಯಲಿದೆ ಏಪ್ರಿಲ್ 26ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಡಿಷನ್ ನಡೆಯಲಿದೆ, 8 ರಿಂದ 16 ವರ್ಷದ ಹುಡುಗರು ಮತ್ತು 25 ವರ್ಷ ಮೇಲ್ಪಟ್ಟ ಆಸಕ್ತಿಯುಳ್ಳ ಪುರುಷರು, ಕಲಾವಿದರು ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ.


ಆಡಿಷನ್ ನಲ್ಲಿ ಭಾಗವಹಿಸಲು ಇಷ್ಟ ಪಡುವವರು ಕೇವಲ 1 ನಿಮಿಷದಲ್ಲಿ ತಮ್ಮ ಡೈಲಾಗ್ ಒಂದನ್ನ ಚಿತ್ರತಂಡದ ಮುಂದೆ ಒಪ್ಪಿಸಬೇಕು ಹೀಗೆ ಒಪ್ಪಿಸಿದ ನಿಮ್ಮ ನಟನೆ ಇಷ್ಟವಾದರೆ ಕೆಜಿಎಫ್ ಚಾಪ್ಟರ್ 2 ನಲ್ಲಿ ನಟಿಸುವ ಅವಕಾಶ ನಿಮ್ಮದಾಗಲಿದೆ.
ಈ ಹಿಂದೆ ಕೆಜಿಎಫ್ ಮೊದಲ ಭಾಗದಲ್ಲಿಯೂ ಚಿತ್ರತಂಡ ಹೊಸ ಕಲಾವಿದರಿಗೆ ಮಣೆ ಹಾಕಿತ್ತು ಇದೀಗ ಎರಡನೇ ಭಾಗದಲ್ಲಿ ಮತ್ತೆ ಹೊಸ ನಟರ ನಿರೀಕ್ಷೆಯಲ್ಲಿ ಪ್ರಶಾಂತ್ ನೀಲ್ ಅಂಡ್ ಟೀಮ್ ಇದೆ.

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...