ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2. 2018ರಲ್ಲಿ ತೆರೆಕಂಡಿದ್ದ ಕೆಜಿಎಫ್ ಚಾಪ್ಟರ್ 1 ಅದಾಗಲೇ ಎರಡನೇ ಅಧ್ಯಾಯದ ಕುರಿತು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಕೆಜಿಎಫ್ 2 ಬಗ್ಗೆ ಈಗಾಗಲೇ ಕುತೂಹಲ ಗರಿಗೆದರಿದೆ. ಹೆಚ್ಚು ಕಮ್ಮಿ ಎರಡು ವರ್ಷಗಳಿಂದ ಒಂದಲ್ಲ ಒಂದು ವಿಚಾರದಲ್ಲಿ ಕೆಜಿಎಫ್ ಸುದ್ದಿಯಾಗುತ್ತಲೇ ಬಂದಿತ್ತು. ಸಿನಿಮಾ ಯಾವಗಾ ತೆರೆಕಾಣುತ್ತದೆ ಎಂದು ಅಭಿಮಾನಿಗಳು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದೀಗ ಚಿತ್ರತಂಡ ಆ ಕಾಯುವಿಕೆಗೆ ಬ್ರೇಕ್ ನೀಡಿದ್ದು, ದಿನಗಣನೆ ಶುರುವಿಡುವಂತೆ ಮಾಡಿದೆ.
ಹೌದು ಕೆಜಿಎಫ್ 2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾ ಬಿಡುಗಡೆ ದಿನಾಂಕವನ್ನು ಟ್ವೀಟ್ ಮೂಲಕ ಅಧಿಕೃತವಾಗಿ ಘೋಷಿಸಿದೆ.ಅಕ್ಟೋಬರ್23ರಂದು ಸಿನಿಮಾ ಇಡೀ ವಿಶ್ವದಾದ್ಯಂತ ತೆರೆಕಾಣಲಾಗಿದೆ. ಈ ಮುಖೇನ ರಾಕಿಭಾಯ್ ಮತ್ತೆ ಎರಡು ವರ್ಷದ ವ ಬಳಿಕ ಅಬ್ಬರ ಶುರುವಿಡಲಿದ್ದಾರೆ.
ಕನ್ನಡದ ಜೊತೆಗೆ ಹಿಂದಿ, ತೆಲುಗು,, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾಕ್ಕೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ಕಿರಂಗಂದೂರ್ ಬಂಡವಾಳ ಹಾಕಿದ್ದಾರೆ. ಕೆಜಿಎಫ್ ಚಾಪ್ಟರ್ 1 ತಂಡದ ಚಾಪ್ಟರ್ 2 ರಿಲೀಸ್ಗೆ ಮುನ್ನವೇ ಸದ್ದು ಮಾಡಲಾರಂಭಿಸಿದೆ. ಕೆಜಿಎಫ್ ನಂತೆ ಪಾರ್ಟ್ 2ಗೂ ರವಿಬಸ್ರೂರ್ ಸಂಗೀತ ಬಲ ತುಂಬಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಕೂಡ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ಚಿತ್ರ ಕಣ್ತುಂಬಿಕೊಳ್ಳಲು ಅಕ್ಟೋಬರ್ 23ರವೆರೆಗೆ ಕಾಯಬೇಕು.
#KGFChapter2 Worldwide Grand Release On October 23rd, 2020.#KGFChapter2OnOct23 @TheNameIsYash @prashanth_neel @VKiragandur @duttsanjay @SrinidhiShetty7 @TandonRaveena @bhuvangowda84 @BasrurRavi @Karthik1423 @AAFilmsIndia @excelmovies @FarOutAkhtar @ritesh_sid @VaaraahiCC pic.twitter.com/kq060lfNZM
— Hombale Films (@hombalefilms) March 13, 2020