ಕೆಜಿಎಫ್ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಪ್ರಸಿದ್ಧ ಡೇಟಾ ಬೇಸ್ ವೆಬ್ ಸೈಟ್ ಇಂಟರ್ ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ) ಪಟ್ಟಿಯಲ್ಲಿ ಝೀರೋ ಅನ್ನು ಹಿಂದಿಕ್ಕಿದೆ.
ಈ ಪಟ್ಟಿಯಲ್ಲಿ ಕೆಜಿಎಫ್ 2ನೇ ಸ್ಥಾದಲ್ಲಿದ್ದರೆ, ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ 2.ಓ ಮೊದಲ ಸ್ಥಾನದಲ್ಲಿದೆ.
ಶಾರುಖ್ ಖಾನ್ ಅಭಿನಯದ ಝೀರೋ ಸಿನಿಮಾಕ್ಕಿಂತ ಹೆಚ್ಚಿನ ಸದ್ದು ಮಾಡ್ತಿದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್.
ಝೀರೋ ಮತ್ತು ಕೆಜಿಎಫ್ ಒಂದೇ ದಿನ , ಅಂದ್ರೆ ಡಿಸೆಂಬರ್ 21ರಂದು ರಿಲೀಸ್ ಆಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ , ಯಶ್ ಅಭಿನಯದ ಕೆಜಿಎಫ್ ಕನ್ನಡ, ಹಿಂದಿ , ತಮಿಳು, ತೆಲುಗು, ಮಲಯಾಳಂಗಳಲ್ಲಿ ರಿಲೀಸ್ ಆಗುತ್ತಿದೆ.