ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ, ಅದರಲ್ಲೂ ಟ್ವೀಟರ್‍ನಲ್ಲಿ ಸಕ್ರಿಯವಾಗಿದ್ದಾರೆ ಅನ್ನೋದು ಗೊತ್ತೇ ಇದೆ. ತಮ್ಮ ಅಭಿಮಾನಿಗಳ ಟ್ವೀಟ್‍ಗೆ ರೀ ಟ್ವೀಟ್ ಮಾಡುವ ಕಿಚ್ಚ ಟ್ವೀಟರ್‍ನಲ್ಲೇ ತನ್ನ ಪತ್ನಿಗೆ ಶುಭಕೋರಿದ್ದಾರೆ…!
ಹೌದು, ಸುದೀಪ್ ಪತ್ನಿ ಪ್ರಿಯಾ ಟ್ವೀಟರ್‍ನಲ್ಲಿ 50ಸಾವಿರ ಫಾಲೋವರ್ಸ್ ದಾಟಿದ ಹಿನ್ನೆಲೆಯಲ್ಲಿ ಕಿಚ್ಚ ವಿಶ್ ಮಾಡಿದ್ದಾರೆ. ಅದಕ್ಕೆ ಪ್ರಿಯಾ ಧನ್ಯವಾದ ತಿಳಿಸಿದ್ದಾರೆ.
Congrats @iampriya06 …. 50k ,,,😁👏👏👏…..
— Kichcha Sudeepa (@KicchaSudeep) November 7, 2017
2016ರಲ್ಲಿ ಟ್ವೀಟರ್ ಖಾತೆ ತೆರೆದಿರೋ ಪ್ರಿಯಾ ಸುದೀಪ್, ನರೇಂದ್ರ ಮೋದಿ, ಶಾರೂಖ್ ಖಾನ್, ಅಮಿತಾ ಬಚ್ಚನ್ ಸೇರಿದಂತೆ 18ಸಾವಿರ ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.
ತನ್ನ ಫಾಲೋವರ್ಸ್ ಸಂಖ್ಯೆ 50 ಸಾವಿರ ದಾಟಿದಕ್ಕೆ ಟ್ವೀಟರ್‍ನಲ್ಲಿ ಸಂತಸ ಹಂಚಿಕೊಂಡಿರೋ ಪ್ರಿಯ, ‘ ನನಗೆ 50ಸಾವಿರ ಫಾಲೋವರ್ಸ್ ಆಗಿರೋದನ್ನು ನಂಬೋಕೆ ಆಗ್ತಿಲ್ಲ. ನಿಮ್ಮ ಪ್ರೀತಿ ನನ್ನ ಜೊತೆಯಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.