ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗ್ತಾ ಇರೋ ಬಿಗ್‍ಬಾಸ್ ಸೀಸನ್-4 ಮುಕ್ತಾಯವಾಗೋಕೆ ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿರೋದು ಅನ್ಸತ್ತೆ. ಸೀಸನ್-1 ರಿಂದ ಹಿಡಿದು ಸೀಸನ್-4 ವರೆಗೂ ಕೂಡ ಕಿಚ್ಚಾ ಸುದೀಪ್ ಅವರೆ ಕಾರ್ಯಕ್ರಮ ನಿರೂಪಕರಾಗಿ ಮುಂದುವರೆಯುತ್ತಾ ಬರ್ತಾ ಇದಾರೆ. ಇನ್ನು ಪ್ರತೀ ಶನಿವಾರ ಪ್ರಸಾರ ಆಗೋ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಂತೂ ಸುದೀಪ್ ಜೊತೆ ವೇದಿಕೆಯ ಮೇಲೆ ಕಾಣಿಸಿಕೊಳ್ಳೋ ನಟ ನಟಿಯರೇ ಇಲ್ಲ. ಆದ್ರೆ ಅಭಿಮಾನಿಗಳಿಗೆ ಬೇಸರದ ಸಂಗತಿ ಅಂದ್ರೆ ಈ ವೇದಿಕೆ ಮೇಲೆ ಒಬ್ಬ ಸ್ಟಾರ್ ನಟ ಕಾಣಿಸಿಕೊಂಡಿಲ್ವಲ್ಲಾ..? ಅನ್ನೋ ಕೊರಗು ಇದೆ. ಅದು ಯಾರು ಅಂತೀರಾ..? ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್..! ಹೌದು ಕನ್ನಡ ವಾಹಿನಿಯಲ್ಲಿ ಬಿಗ್‍ಬಾಸ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಒಂದು ಬಾರಿಯೂ ಕೂಡ ಕಿಚ್ಚನ ಜೊತೆ ನಮ್ಮ ಚಾಲೆಂಜಿಂಗ್ ಸ್ಟಾರ್ ಕಾಣಿಸಿಕೊಂಡಿಲ್ಲ..! ಹೀಗಾಗಿ ಕಿಚ್ಚ ಅವರಿಗೆ ಸ್ವತಃ ಅಭಿಮಾನಿಗಳೇ ಟ್ವಿಟರ್‍ನಲ್ಲಿ ಕೆಲವೊಂದು ಪ್ರಶ್ನೆಗಳನ್ನ ಕೇಳಿದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು ದರ್ಶನ್ ಅವರಿಗೆ ಬಿಗ್‍ಬಾಸ್ ವೇದಿಕೆ ಮೇಲೆ ಯಾಕೆ ಕರಿಯೊಲ್ಲಾ..? ಎಂಬುದು. ಅದಕ್ಕೆ ಮರು ಉತ್ತರ ನೀಡಿರೋ ಸುದೀಪ್, ಅವರು ಬಂದ್ರೆ ನಾವು ಖಂಡಿತಾ ಕರಿತೀವಿ ಎಂದಿದ್ದಾರೆ. ಅದಕ್ಕೆ ಅಭಿಮಾನಿಯೊಬ್ಬ ನೀವೆ ಕರಿಬೋದಲ್ವ ಎಂದು ಕೇಳಿದಕ್ಕೆ, ಸುದೀಪ್ ನಾವು ಕರ್ದಿಲ್ಲಾ ಅಂತ ನೀವ್ ಹೇಗೆ ಊಹೆ ಮಾಡಿ ಹೇಳ್ತಿರಾ..? ಅಂತ ಕೇಳಿದ್ದಾರೆ..! ಮತ್ತೋರ್ವ ಅಭಿಮಾನಿ ನೀವು ಮತ್ತು ದರ್ಶನ್ ಜಗಳ ಮಾಡಿಕೊಂಡಿದ್ದೀರಾ..? ಎಂಬ ಟ್ವೀಟ್‍ಗೆ ಸಿಟ್ಟಾದ ಸುದೀಪ್ ಇಂತಹ ಪ್ರಶ್ನೆಗಳನ್ನು ಕೇಳೊದು ಮೊದ್ಲು ಬಿಡಿ, ನಮಗೂ ತಿಳುವಳಿಕೆ ಬಂದಿದೆ ನೀವಾಗೆ ಜಡ್ಜ್ ಮಾಡೊದು ಇಲ್ಲಿಗೆ ಬಿಟ್ಬಿಡಿ ಅಂದಿದ್ದಾರೆ. ಅದೇನೆ ಆಗ್ಲಿ ಬಿಡಿ ಆದಷ್ಟು ಬೇಗ ಈ ಇಬ್ಬರು ದಿಗ್ಗಜರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಸಣ್ಣ ಕ್ಲ್ಯೂ ಕಿಚ್ಚ ಕೊಟ್ಟಿದ್ದಾರೆ..! ಆ ಸಂದರ್ಭಕ್ಕಾಗಿ ಅಭಿಮಾನಿಗಳು ಕಾಯ್ತಾ ಇದಾರೆ..
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!
ಶಾಕಿಂಗ್ ವೀಡಿಯೋ: ಬಟ್ಟೆ ಅಂಗಡಿಯಲ್ಲಿ ಬ್ಲಾಸ್ಟ್ ಆಯ್ತು ಜೇಬಲಿದ್ದ ಮೊಬೈಲ್..!
ಮತ್ತೆ ಆಸ್ಕರ್ ರೇಸ್‍ನಲ್ಲಿ ಎ.ಆರ್ ರೆಹಮಾನ್..!