ಅವರಿವರ ಹಂಗಿಸುವ ಇವರವರು
ತನ್ನೆಸರಲೇ ರುಜು ಒತ್ತಿ
ತನ್ನನ್ನೇ ದ್ವೇಷಿಸಲು ಸುಪಾರಿಕೊಟ್ಟಿಹನು
ಕಂತೆ ಮಾತುಗಳ ತೂತು ಮಡಿಕೆಯೊಳು
ಕಂಡಿದ್ದೆಲ್ಲಾ ಕೊಳಕು ಮೋರಿಯಾ ನೀರು
ನಾರುತಿದೆ ಈ ಬದುಕು
ಆದರೂ ಅನ್ಯರಿಗೆ ಕೆಡಕು ಬಯಸುತಿಹನು
ಜಗ ಕಣ್ ಬಿಟ್ಟಾಗ ಕಣ್ ಮುಚ್ಚಿ
ಲೋಕದಲಿ ಕುರುಡನೇ ಕುಬೇರನೆಂದವನು
ಕೊನೆಗೊಂದುದಿನ ವೈರಾಗ್ಯತಾಳಿಹನು.
ಕಾವ್ಯದತ್ತ ಅಂದು ನಕ್ಕಿರಲಿಲ್ಲ
ಇಂದು ಹೊಟ್ಟೆಹುಣ್ಣಾಗುವ ನಗು
ಅಲೆಅಲೆಯಂತೆ ಹೊರಹಾಕಿ
ಕಣ್ಣಂಚಿನ ಮಾತಲ್ಲೇ ವೈರಾಗಿಯ
ಬುದ್ದನಾಗಿಸಿಹನು
ಆಸೆಯ ನಿರಾಸೆಯೊಳು ಕೈಹಿಸುಕಿಕೊಂಡಿದ್ದ
ಕುಹಕದ ಮಾತಿಗೆ ಇಂದು
ಜಗವು ಹಾಸ್ಯದ ನಗುವ
ಉತ್ತರ ನೀಡಿ ನಿರುತ್ತರದತ್ತ ಚಿತ್ತ
ಜಾರಿತಿಂದು
ಮನದಿ ಹೊಸಕಿರಣ ಉದಯಿಸಿತಿಂದು.⭐
✍?ದತ್ತರಾಜ್ ಪಡುಕೋಣೆ✍?
ಕಿಚ್ಚೇ ಹುಚ್ಚು
Date: