ಯೂ ಟ್ಯೂಬ್ ಸ್ಟಾರ್, ಕನ್ನಡ ಬಿಗ್ ಬಾಸ್ ಸೀಸನ್ 4ರ ರನ್ನರ್ ಅಪ್ ಕಿರಿಕ್ ಕೀರ್ತಿ (ಕೀರ್ತಿ ಶಂಕರ ಘಟ್ಟ) ಈಗ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್ ಅಭಿನಯದ ದೇವ್ರಂಥ ಮನುಷ್ಯ ಸಿನಿಮಾ ಕಳೆದವಾರವಷ್ಟೇ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ಸಿನಿಮಾದಲ್ಲಿ ಕೀರ್ತಿ ಸಹ ನಟಿಸಿದ್ದಾರೆ.
ಇತ್ತೀಚಿಗಷ್ಟೇ ಬಿಡುಗಡೆಯಾದ ‘ರಾಜು ಕನ್ನಡ ಮೀಡಿಯಂ’ ಸಿನಿಮಾದಲ್ಲಿಯೂ ಕೀರ್ತಿ ಅಭಿನಯಿಸಿದ್ದರು.

ಸಾಲು ಸಾಲು ಸಿನಿಮಾಗಳು ಕೀರ್ತಿ ಅವರನ್ನು ಹುಡುಕಿಕೊಂಡು ಬರುತ್ತಿವೆ. ಒಂದೆರಡು ಸಿನಿಮಾಗಳ ಚಿತ್ರೀಕರಣ ನಡೀತಿದೆ.
ಈ ನಡುವೆ ಮತ್ತೊಂದು ಚಿತ್ರ ಕೀರ್ತಿ ಅವರನ್ನ ಹುಡುಕಿಕೊಂಡು ಬಂದಿದೆ. ಕೋಲಾರ ಸಿನಿಮಾ ನಿರ್ದೇಶಕ ಆರ್ಯ ಎಂ ಮಹೇಶ್ ನಿರ್ದೇಶನದ ಚಿತ್ರವಿದು. ಹೆಸರು, ‘ ಟೈರು’.

ಕಿರಿಕ್ ಕೀರ್ತಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೀತಾ ಇದೆ.






