ಅಸಹಿಷ್ಣುತೆ, ಅಮೀರ್ ಖಾನ್ ಹಾಗೂ ಅಮೀರ್ ಅಭಿಮಾನಿಗಳು..! ದೇಶಕ್ಕಿಂತ ಅಮೀರ್ ಖಾನ್ ದೊಡ್ಡವರಾ..?

Date:

ನಾನು ಇತ್ತೀಚೆಗೆ ಒಂದು ವೀಡಿಯೋ ಮಾಡಿದ್ದೆ. ಅಮೀರ್ ಖಾನ್ ಅಸಹಿಷ್ಣುತೆ ಬಗ್ಗೆ ಮಾತಾಡಿದ್ರಲ್ವಾ, ಅದರ ವಿರುದ್ಧವಾಗಿ. ಆ ವೀಡಿಯೋ ವೈರಲ್ ಆಯ್ತು ಎಲ್ಲಾ ಕಡೆ ತಲುಪ್ತು. ಅವತ್ತು ಅಮೀರ್ ಹೇಳಿದ್ದು ಹಾಗೆ ಅಲ್ಲವೇ ಅಲ್ಲ ಅನ್ನೋದು ಕೆಲವರ ವಾದ..! ಅಮೀರ್ ಹೇಳಿದ್ದನ್ನು ಕೇಳಿಸಿಕೊಳ್ಳದೇ ವೀಡಿಯೋ ಮಾಡಿದೀನಿ ಅಂತ ಕೆಲವರು ಭಾವಿಸಿದ್ರು ಅನ್ಸುತ್ತೆ..! ನಾನೂ ಅದನ್ನು ಕೇಳಿಸಿಕೊಂಡಿದ್ದೇನೆ. ಅದರ ಸಾರಾಂಶ ಹೀಗಿದೆ. ` ದೇಶದಲ್ಲಿ ಇತ್ತೀಚೆಗೆ ಅಂದ್ರೆ ಆರೇಳು ತಿಂಗಳಿನಿಂದ ನಡೆಯುತ್ತಿರುವ ಘಟನೆಗಳು ನೋಡುದ್ರೆ ನನಗೂ ಆತಂಕ ಆಗ್ತಿದೆ. ದೇಶದಲ್ಲಿ ಒಂಥರಾ ಅಭದ್ರತೆ ಇದೆ. ನನ್ನ ಹೆಂಡತಿ ನನಗೆ ಹೇಳಿದ್ಲು ` ನಾವು ಬೇರೆ ಎಲ್ಲಾದ್ರೂ ಹೋಗಿ ಸೆಟಲ್ ಆಗೋಣ’ ಅಂತ..! ಆದ್ರೆ ಅದು ಅವಳು ನನ್ನ ಬಳಿ ಮಾಡಬಾರದಾಗಿದ್ದಂತಹ ಅತ್ಯಂತ ಕೆಟ್ಟ ಹೇಳಿಕೆ..! ಆದ್ರೆ ಅವಳಿಗೂ ಅನ್ಸಿದ್ದು ನಿಜ. ದಿನಪತ್ರಿಕೆ ತೆಗೆಯೋಕೆ ಭಯವಾಗುತ್ತೆ..! ದೇಶದಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣ ಆಗಿದೆ..!ನಮ್ಮ ಮಕ್ಕಳ ಭವಿಷ್ಯ ಹೇಗೆ ಅನ್ನೋದರ ಬಗ್ಗೆ ಚಿಂತೆಯಾಗಿದೆ..!’ ಇದೇ ಅಲ್ವಾ ಅಮೀರ್ ಖಾನ್ ಹೇಳಿದ್ದು..! ಸರಿ, ಈಗ ನನ್ನ ಪ್ರಶ್ನೆ ಏನು ಗೊತ್ತಾ..? ನಿಮಗೆ ಯಾವ ಕಾರಣಕ್ಕೆ ಹಾಗೆಲ್ಲಾ ಅನ್ನಿಸ್ತೋ ನನಗೆ ಗೊತ್ತಿಲ್ಲ..! ನಿಮ್ಮ ಹೆಂಡತಿ ನಿಮಗೆ ನಿಮ್ಮ ರೂಮಲ್ಲಿ ಹೇಳಿದ್ದನ್ನ ಇಡೀ ವಿಶ್ವದ ಎದುರು ಹೇಳಿದ್ರೆ ಏನಾಗಬಹುದು ಅಂತ ಒಮ್ಮೆ ಯೋಚನೆ ಮಾಡಿದ್ದೀರಾ..? ಭಾರತದ Incredible India ಬ್ರ್ಯಾಂಡ್ ಅಂಬಾಸಿಡರ್ ಆದ ಅಮೀರ್ ಖಾನ್ ಅಂತಹ ಹೇಳಿಕೆ ಕೊಟ್ಟಾಗ, ಭಾರತಕ್ಕೆ ಬೇರೆ ದೇಶಗಳ ಪ್ರವಾಸಿಗರು ಬರೋದು ಸಾಧ್ಯವೇ..? ಇದನ್ನು ರೋಡಲ್ಲಿ ಹೋಗೋ ಯಾರೋ ಹೇಳಿದ್ರೆ ವಿಷಯ ಬೇರೆ ಇತ್ತು. ಆದ್ರೆ ಇದನ್ನು ಹೇಳ್ತಿರೋದು ಇಡೀ ಭಾರತ ಮೆಚ್ಚಿಕೊಂಡ ಅಮೀರ್ ಖಾನ್..! ನನ್ನ ಮನೆಯಲ್ಲಿ ಸಾವಿರ ಸಮಸ್ಯೆ ಇರಬಹುದು, ದಿನವೂ ಜಗಳವಾಗಬಹುದು. ಹಾಗಂತ ನನ್ನ ಮನೆಯ ಮರ್ಯಾದೆಯನ್ನು ನಾನೇ ಇಡೀ ಬೀದಿಯಲ್ಲಿ ತೆಗೆದುಬಿಟ್ರೆ ಹೇಗೆ..? ಅಷ್ಟಕ್ಕೂ ನೀವು ಹೇಳೋ ಹಾಗೆ ಕಳೆದ ಆರೇಳು ತಿಂಗಳಿಂದ ನಿಮಗೆ ಹೀಗೆಲ್ಲಾ ಅನ್ನಿಸ್ತಿದೆ ಅಲ್ವಾ..? 2008ರಲ್ಲಿ ಮುಂಬೈ ಮೇಲೆ ಉಗ್ರ ದಾಳಿಯಾದಾಗ ಅಮೀರ್ ಗೆ ಭಯವಾಗಲಿಲ್ವಾ..? 1993ರಲ್ಲೂ ಅದೇ ಮುಂಬೈನಲ್ಲೇ ಇದ್ರಲ್ವಾ..? ಅವತ್ತು ಅನ್ನಿಸ್ಲಿಲ್ವಾ..? ಇದ್ದಕ್ಕಿದ್ದ ಹಾಗೆ ಈಗ ಇಂತಹ ಹೇಳಿಕೆ ಯಾಕೆ ಕೊಟ್ರು..? ಅಮೀರ್ ಖಾನ್ ಪರವಾಗಿ ಬ್ಯಾಟಿಂಗ್ ಮಾಡೋರಿಗೆ ನನ್ನ ದೇಶದ ಮರ್ಯಾದೆ ಇಡೀ ವಿಶ್ವದ ಎದುರಲ್ಲಿ ಹೋಗ್ತಿದೆ ಅನ್ನೋದು ಗೊತ್ತಾಗ್ತಿಲ್ವಾ..? ಅಷ್ಟಕ್ಕೂ ಅಮೀರ್ ಖಾನ್ ರನ್ನು ಒಬ್ಬ ಭಾರತೀಯನಾಗಿ ನೋಡಿ. ಅದನ್ನು ಬಿಟ್ಟು ಅವರನ್ನು ಒಬ್ಬ ಮುಸ್ಲಿಂ ಅಂತ ಯಾಕೆ ಗುರುತಿಸುತ್ತಿದ್ದೀರಿ..? ಇಲ್ಲಿ ಅವರ ಧರ್ಮದ ಬಗ್ಗೆ ಮಾತಾಡೋರು ಮತಾಂಧರು ಅಷ್ಟೆ..! ಅವರ ಜಾತಿ ನೋಡಿ ಯಾವತ್ತೂ ಇಡೀ ಭಾರತ ಅವರ ಸಿನಿಮಾ ನೋಡಿಲ್ಲ..! ಅವರ ಸಿನಿಮಾಗಳನ್ನು ಮೆಚ್ಚಿಕೊಂಡು ನೋಡಿರೋನಲ್ಲಿ ನಾನೂ ಒಬ್ಬ..! ಆದ್ರೆ ಸಿನಿಮಾಗಳಿಂದಲೆ ಹೀರೋ ಆಗಿ, ಭಾರತದ ಸೂಪರ್ ಸ್ಟಾರ್ ಆಗಿ, ಭಾರತ ಅಂದ್ರೆ ಆತಂಕ ಮೂಡೋ ಅಂತಹ ಹೇಳಿಕೆ ಕೊಡೋದು ಎಷ್ಟು ಸರಿ..? ಅವರು ಹಾಗೆ ಹೇಳಿಲ್ಲ, ಹೀಗೆ ಹೇಳಿಲ್ಲ, ಅವರು ಏನೂ ಹೇಳಿಲ್ಲ ಅನ್ನೋದು ಬಿಡಿ..! ಸರಿಯಾಗಿ ಒಮ್ಮೆ ಕೂತು ಆ ವೀಡಿಯೋ ನೋಡಿ..! ಅವರಿಗೆ ಅನಿಸಿದ್ದು ತಪ್ಪಲ್ಲ, ಆದ್ರೆ ಅವರು ಅದನ್ನು ಕ್ಯಾಮರಾಗಳ ಎದುರಲ್ಲಿ ವಿಶ್ವದ ಎದುರಿಗೆ ಹೇಳಿದ್ದು ತಪ್ಪು..! ಇವತ್ತು ಸಾಕಷ್ಟು ರಾಷ್ಟ್ರಗಳಲ್ಲಿ ಅಮೀರ್ ಹೇಳಿಕೆ ಟ್ವಿಟರ್ ಮತ್ತು ಫೇಸ್ ಬುಕ್ಕಲ್ಲಿ ಟ್ರೆಂಡಿಂಗ್ ಆಗ್ತಿದೆ.. ಅದನ್ನು ನೋಡೋ ಯಾರಾದ್ರೂ ಭಾರತದ ಬಗ್ಗೆ ಏನು ಯೋಚಿಸಬಹುದು..? ಈಗಾಗಲೇ ಭಯೋತ್ಪಾದಕ ಚಟುವಟಿಕೆಗಳ ವಿಚಾರ ಬಂದಾಗ ಭಾರತಕ್ಕೆ ಆರನೆ ಸ್ಥಾನ ಅಂತ ವರದಿ ಬಂದಿದೆ. ಇಂತಹ ಸಮಯದಲ್ಲಿ ಅಮೀರ್ ಖಾನ್ ರಂತಹ ತಿಳಿದವರು ದೇಶಕ್ಕೆ ಅವಮಾನವಾಗುವಂತಹ ಹೇಳಿಕೆ ಕೊಡೋದು ಎಷ್ಟು ಸರಿ..?
ಇನ್ನು ನನಗೆ ನೆಗೆಟಿವ್ ಕಮೆಂಟ್ ಹಾಗೂ ಅವಾಚ್ಯ ಸಂದೇಶ ಕಳಿಸಿದವರಿಗೆ ನನ್ನ ಮಾತು. ನೋಡಿ, ನೀವು ಅಮೀರ್ ಖಾನ್ ಫ್ಯಾನ್ ಆಗಿ ಮಾತಾಡ್ತಿದ್ದೀರಿ. ವೈಯಕ್ತಿಕವಾಗಿ ನಾನೂ ಅವರ ಫ್ಯಾನ್, ಆಗಿದ್ದೆ..! ಆದ್ರೆ ದೇಶದ ಮುಂದೆ ಸಿನಿಮಾ ಏನೂ ಅಲ್ಲ..! ಸತ್ಯಮೇವ ಜಯತೆ ನೋಡಿ ಎಷ್ಟೋ ಸಲ ಕಣ್ಣೀರಿಟ್ಟಿದ್ದೇನೆ. ಅಮೀರ್ ಖಾನ್ ಗೆ ಅಮೀರ್ ಖಾನ್ ಮಾತ್ರ ಸಾಟಿ ಅಂತ ಹೇಳಿದ್ದೇನೆ..! ಆದ್ರೆ ಇದೊಂದು ಹೇಳಿಕೆ ಅವರ ಬಗೆಗಿದ್ದ ಎಲ್ಲ ಗೌರವ ಕರಗಿಸಿದೆ. ಸ್ವತಃ ಅಮೀರ್ ಖಾನ್ ಅವರ ಟ್ವಿಟರ್ ಹಾಗೂ ಫೇಸ್ ಬುಕ್ ಅಕೌಂಟಲ್ಲಿ ತಮ್ಮ ಅಸಹುಷ್ಣುತೆಯ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. ಆದ್ರೆ ನೀವುಗಳು ಇನ್ನೂ ಅವರನ್ನೇ ಸಮರ್ಥಿಸಿಕೊಂಡು ಅವರು ಹಾಗೆ ಹೇಳಿದ್ದಲ್ಲ, ಹೀಗೆ ಹೇಳಿದ್ದಲ್ಲ ಅಂತಿದೀರಿ..! ಎಲ್ಲರನ್ನೂ ಮೆಚ್ಚಿಸೋದು ಕಷ್ಟ ಇದೆ.. ನಾನು ಗಿಮಿಕ್ಕಿಗೆ, ಪಬ್ಲಿಸಿಟಿಗೆ ಮಾಡೋದಾದ್ರೆ ನನಗೆ ಬೇರೆ ಬೇರೆ ಕಲೆಗಳೇ ಗೊತ್ತಿವೆ..! ಆದ್ರೆ ನನಗೆ ನನ್ನ ದೇಶ ಹಾಗೂ ಕನ್ನಡದ ಬಗೆಗೆ ಇರುವ ಅಭಿಮಾನ ಇಂತಹ ವಿಡಿಯೋಗಳನ್ನು ಮಾಡಿಸುತ್ತಿದೆ..! ಯಾರಿಗಾದರೂ ನನ್ನ ವೀಡಿಯೋಗಳ ಬಗ್ಗೆ ಆಕ್ಷೇಪಣೆ ಇದ್ದರೆ ದಯಮಾಡಿ ನನ್ನನ್ನು ಅನ್ ಫಾಲೋ ಮಾಡಿ, ಡಿಸ್ ಲೈಕ್ ಮಾಡಿ..! ನಿಮಗೂ ನನ್ನ ಅಭಿಪ್ರಾಯ ನೋಡಿ ಹಿಂಸೆ ಆಗೋದಿಲ್ಲ..! ಎಂಟು ವರ್ಷ ಮಾಧ್ಯಮದಲ್ಲಿ ಕೆಲಸ ಮಾಡಿದ್ದೇನೆ.. ಹಾಗಾಗಿ ಏನೇ ಮಾಡೋಕೆ ಮುಂಚೆ ಅದರ ಬಗ್ಗೆ ಯೋಚಿಸಿಯೇ ಮಾಡ್ತೇನೆ..! ತಪ್ಪಾದಾಗ ಕಿವಿಹಿಂಡಿ ಬುದ್ದಿ ಹೇಳಿ, ತಲೆತಗ್ಗಿಸಿ ಕೇಳ್ತೀನಿ..! ಆದ್ರೆ ದೇಶಕ್ಕೆ ಅವಮಾನ ಆಗುವ ಹಾಗೆ ಮಾತಾಡಿದವರ ಬಗ್ಗೆ ಮಾತಾಡಿದಾಗ ನನ್ನ ವಿರುದ್ಧ ಮಾತಾಡಿದ್ರೆ ನಿಮಗೆ ನಿಮ್ಮ ದೇಶ ಎಷ್ಟು ಮುಖ್ಯ ಎಂಬುದನ್ನು ಮನಸಲ್ಲೇ ಅಳೆದು ನಿಮ್ಮನ್ನು ದೂರವಿಡ್ತೇನೆ..! ನನಗೆ ನನ್ನ ದೇಶದ ಬಗ್ಗೆ ಹೆಮ್ಮೆ ಇದೆ.. ಅದೆಷ್ಟೇ ಕೆಟ್ಟ ಪರಿಸ್ಥಿತಿ ಬರಲಿ, ನನ್ನ ದೇಶದ ವಿರುದ್ಧ ಯಾವತ್ತೂ ಕೆಟ್ಟದಗಿ ಮಾತಾಡಲ್ಲ ನಾನು..! ನನ್ನ ದೇಶ ನನ್ನ ಹೆಮ್ಮೆ..! ಜೈಹಿಂದ್  #MyCountryisTolerent

– ಕಿರಿಕ್ ಕೀರ್ತಿ

Facebook : Kirik keerthi ಕಿರಿಕ್ ಕೀರ್ತಿ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋ ಲೋಕಾಯುಕ್ತವೇ ನಿರ್ನಾಮವಾಗುತ್ತಾ..? ಜನರೇ ನಿಮ್ಮ ಧ್ವನಿಯೆತ್ತಿ.! ಇಲ್ಲವಾದ್ರೆ ನಾಳೆ ನಮಗೇ ಕಷ್ಟ..!

ವಯಸ್ಸಾದ ಅಪ್ಪ ಬೆಂಗಳೂರಲ್ಲಿ ಒಬ್ಬಂಟಿ, ಮಗ ಹೆಂಡತಿ ಮಕ್ಕಳೊಡನೆ ಅಮೇರಿಕಾದಲ್ಲಿ..!

ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!

ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!

ಫೇಸ್ ಬುಕ್ ಜನಪ್ರಿಯತೆಯಲ್ಲಿ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?! ಈ ಪಟ್ಟಿಯನ್ನು ನೋಡಿದ್ರೆ, ನಿಮಗೆ ಖಂಡಿತಾ ಆಶ್ಚರ್ಯವಾಗುತ್ತೆ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...