ಜೀವನಪೂರ್ತಿ ಈಕೆಗೆ ಕಿಟ್ ಕ್ಯಾಟ್ ಪೂರೈಸಬೇಕಂತೆ..! ಅಷ್ಟಕ್ಕೂ ಕಂಪನಿಯೇ ಚಾಕಲೇಟ್ ನೀಡಬೇಕೆಂದು ಇವಳು ಹಠ ಹಿಡಿದಿರುವುದೇಕೆ?

Date:

ಚಾಕಲೇಟ್ ಕಂಪನಿಗಳು ನಾನಾ ವಿಧದ ಫ್ಲೇವರ್ಗಳ ತಿನಿಸುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತವೆ..! ಜಾಹಿರಾತುಗಳನ್ನು ನೀಡಿ, ಗ್ರಾಹಕರನ್ನು ಆಕರ್ಷಿಸಿ, ತಮ್ಮ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತೆ ಮಾಡಲು ಏನೇನೋ ಕಸರತ್ತನ್ನು ಮಾಡ್ತಾರೆ..! ಸಹಜವಾಗಿಯೇ ಕಂಪನಿಗಳು ಲಾಭಗಳಿಸುವ ಉದ್ದೇಶವನ್ನು ಹೊಂದಿರುತ್ತವೆ..! ಇದು ತಪ್ಪಲ್ಲ, ಬಿಡಿ. ಆದರೆ ಈ ಕಂಪನಿಗಳು ತಮ್ಮ ಉತ್ನ್ನವನ್ನು ಒಬ್ಬ ಗ್ರಾಹಕನಿಗೆ ಜೀವಮಾನ ಪೂರ್ತಿ ಪುಕ್ಕಟೆ ಒದಗಿಸಲು ಆಗುತ್ತದೆಯೇ? ಏನ್ ಗುರು, ಹೀಗೆ ಕೇಳ್ತೀಯಾ? ಕಂಪನಿಗಳು ಹಂಗೆ ಪುಕ್ಕಟೆ ನೀಡ್ತಾ ಹೋದ್ರೆ ಮೂರು ನಾಮವೇ ಗತಿ ಅಂತಿರಾ? ನನಗೆ ಅದೆಲ್ಲಾ ಗೊತ್ತಿಲ್ಲ, ನೋಡಿ ಸಾರ್, ಇಲ್ಲೊಬ್ಬಳು ಹುಡುಗಿ ಲೈಫ್ಟೈಮ್ ಚಾಕಲೇಟ್ ನೀಡ್ಬೇಕಂತ ಕಾನೂನು ಹೋರಾಟಕ್ಕೆ ಮುಂದಾಗಿದ್ದಾಳೆ..!
ಹ್ಞಾಂ, ಇದು ನಿಜ. ನೆಸ್ಲೆ ಕಂಪನಿಯ ಕಿಟ್ ಕ್ಯಾಟ್ ಚಾಕಲೇಟನ್ನು ತನಗೆ ಜೀವನ ಪೂರ್ತಿ ಪೂರೈಸ ಬೇಕೆಂದು 20 ವರ್ಷ ವಿದ್ಯಾರ್ಥಿನಿಯೊಬ್ಬಳು ಬೇಡಿಕೆ ಇಟ್ಟಿದ್ದಾಳೆ..!
ಅವಳು ಲಂಡನ್ ನ ಕಿಂಗ್ಸ್ ಕಾಲೇಜಿನ ವಿದ್ಯಾರ್ಥಿನಿ ಸೈಮಾ ಅಹಮ್ಮದ್. ಈಕೆ ಒಂದಿಷ್ಟು ಪ್ಯಾಕ್ ಕಿಟ್ ಕ್ಯಾಟ್ ಚಾಕಲೇಟ್ ಬಾರ್ಗಳನ್ನು ಕೊಂಡುಕೊಂಡಿದ್ಲು ಆದರೆ ಅದರ ಒಳವಾಗದ ಲೇಬಲ್ನಲ್ಲಿ ಟ್ರೇಡ್ ಮಾರ್ಕ್ ನ ವೇಫರ್ ಇರಲಿಲ್ಲ..! ಅದೇಕಾರಣಕ್ಕೆ ಈಕೆ ಕಂಪನಿಗ್ರಾಹಕರಿಗೆ ಮೋಸ ಮಾಡ್ತಾ ಇದೆ, ಗ್ರಾಹಕರ ಕ್ಷೇಮವನ್ನು ಕಡೆಗಾಣಿಸಿದೆ ಅಂತ ದೂರಿದ್ದಾಳೆ..! ಕಂಪನಿ ಈ ತಪ್ಪಿಗೆ ನನಗೆ ಜೀವನ ಪೂರ್ತಿ ಕಿಟ್ ಕ್ಯಾಟ್ ಚಾಕಲೇಟ್ ಪೂರೈಸಬೇಕೆಂದು ಬೇಡಿಕೆಯನ್ನೂ ಮಾಡಿದ್ದಳೆ..!
ಅವಳು ಸೂಪರ್ ಮಾರ್ಕೆಟ್ ನಿಂದ ಕೊಂಡುತಂದ ಯಾವುದೇ ಕಿಟ್ ಕ್ಯಾಟ್ ಒಳಭಾಗದಲ್ಲಿ ವೇಫರ್ ಇಲ್ಲದೇ ಇರುವುದೇ ಆಕೆಯ ಸಿಟ್ಟಿಗೆ ಹಾಗೂ ಬೇಡಿಕೆಗೆ ಕಾರಣ..!
ಅವಳಿಗೆ ಪ್ರತಿಷ್ಠಿತ ನೆಸ್ಲೆಕಂಪನಿಯ ಕಿಟ್ ಕ್ಯಾಟ್ ಚಾಕಲೇಟ್ ತುಂಬಾ ಇಷ್ಟವಂತೆ. ಆದರೆ ಹೀಗಾಗಿದ್ದರಿಂದ ಬೇಸರವಾಗಿದೆ. ಕಂಪನಿ ಕ್ಷಮೆಯಾಚಿಸಿ ಮುಂದೆ ಇಂಥಾ ತಪ್ಪಾಗದಂತೆ ಗಮನಹರಿಸಬೇಕೆಂದು ಕೇಳಿಕೊಂಡಿದ್ದಾಳೆ..! ಈಕೆ ತನ್ನ ಬೇಡಿಕೆಯನ್ನು ಸಮಥರ್ಿಸಿಕೊಳ್ಳಲು ಒಂದಿಷ್ಟು ಕಾನೂನು ಪೂರ್ವನಿದರ್ಶನವನ್ನೂ ನೀಡಿದ್ದಾಳೆ..! ನೆಸ್ಲೆ ಈಕೆಗೆ ಲೈಫ್ ಟೈಮ್ ಕಿಟ್ ಕ್ಯಾಟ್ ಬಾರ್ ಕೊಡುತ್ತಾ? ಗೊತ್ತಿಲ್ಲ, ಆದರೆ ಅದು ಜೀವನ ಪೂರ್ತಿ ಕಿಟ್ ಕ್ಯಾಟ್ ಕೊಟ್ಟರೂ ಸೈಮಾ ಅಹ್ಮದ್ ಗೆ ಬೇಜಾರಾಗಲ್ಲಂತೆ..! ಒಂದುಚೂರೂ ಹಾಳ್ ಮಾಡದೇ ತಿನ್ತಾರಂತೆ…! ಕಿಟ್ ಕ್ಯಾಟ್ ಅಂದ್ರೆ ಅವರಿಗೆ ಅಷ್ಟೊಂದು ಅಚ್ಚು-ಮೆಚ್ಚು..!

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...