ಇಂದಿನ ಟಾಪ್ 10 ಸುದ್ದಿಗಳು..! 01.02.2016

0
48

1. ಅನುಪಮಾ ಶಣೈ ವರ್ಗಾವಣೆ ರದ್ದು:
ಅಂತೂ-ಇಂತೂ ಜನಾಭಿಪ್ರಾಯಕ್ಕೆ ಸರ್ಕಾರ ತಲೆಬಾಗಿದೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್ರ ಕರೆ ಸ್ವೀಕರಿಸದೇ ಇದ್ದ ಕಾರಣಕ್ಕೆ ಕೂಡ್ಲಿಗಿಯಿಂದ ವರ್ಗಾವಣೆಗೊಂಡಿದ್ದ ಡಿವೈಎಸ್ಪಿ ಅನುಪಮಾ ಶಣೈ ಅವರನನು ಮತ್ತೆ ಕೂಡ್ಲಿಗಿ ಡಿವೈಎಸ್ಪಿಯಾಗಿ ನೇಮಕ ಮಾಡಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸಹಿಯುಳ್ಳ ಆದೇಶ ಪತ್ರ ಸರ್ಕಾರದಿಂದ ಹೊರಡಿಸಲ್ಪಟ್ಟಿದೆ.

2. ಬೆಂಗಳೂರಿನ ಗೋಪಲನ್ ಮಾಲ್ನಲ್ಲಿ ಬೆಂಕಿ ಅವಘಡ
ಬೆಂಗಳೂರಿನ ಪ್ರತಿಷ್ಠಿತ ಮಾಲ್ಗಳಲ್ಲೊಂದಾದ ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕೇಡ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದ್ದು ಅನೇಕರು ಮಾಲ್ನಲ್ಲಿ ಸಿಕ್ಕಿ ಕೊಂಡಿದ್ದಾರೆಂದು ಊಹಿಸಲಾಗುತ್ತಿದೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

3. ಜಮ್ಮು-ಕಾಶ್ಮೀರ್ ಸರ್ಕಾರ ರಚನೆಗೆ ನಾಳೆ ಅಂತಿಮ ಗಡುವು
ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ನಿಧನದ ನಂತರ ಸರ್ಕಾರ ರಚನೆಯ ಬಿಕ್ಕಟ್ಟು ಮುಂದುವರೆದಿರುವ ಬೆನ್ನಲ್ಲೇ ಮಂಗಳವಾರ (ನಾಳೆ) ಯೊಳಗೆ ಸರ್ಕಾರ ರಚನೆ ಬಗ್ಗೆ ತಮ್ಮ ಅಂತಿಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಹಾಗೂ ಪಿಡಿಪಿ ಮೈತ್ರಿಕೂಟಕ್ಕೆ ರಾಜ್ಯಪಾಲರಾದ ಎನ್ಎನ್ ವೋಹ್ರಾ ಇಂದು ಅಂತಿಮ ಗಡುವು ನೀಡಿದ್ದಾರೆ.

4. ಸುನಂದಾ ಕೊಲೆ ಪ್ರಕರಣ : ಶಶಿ ತರೂರ್ಗೆ ಶೀಘ್ರದಲ್ಲೇ ಸುಳ್ಳು ಪತ್ತೆ ಪರೀಕ್ಷೆ
ಸುನಂದಾ ಪುಷ್ಕರ್ ಕೊಲೆ ಪ್ರಕರಣದ ಭಾಗವಾಗಿ ಸುನಂದಾ ಪತಿ ಹಾಗೂ ಸಂಸದ ಶಶಿ ತರೂರ್ ರನ್ನು ಶೀಘ್ರದಲ್ಲೇ ಸುಳ್ಳುಪತ್ತೆ ಪರೀಕ್ಷೆಗೆ ಗುರಿಪಡಿಸಲಾಗುತ್ತದೆಂಬ ಮಾತು ಕೇಳಿ ಬಂದಿದೆ.
ಸುನಂದಾ ಕೊಲೆಗೆ ಸಂಬಂಧಿಸಿದಂತೆ ನಡೆಯಲಿರುವ ತನಿಖೆಯಲ್ಲಿತರೂರ್, ಅವರ ಕಾರಿನ ಚಾಲಕ ಹಾಗೂ ಮನೆಕೆಲಸದವರಾದ ಬಜರಂಗಿ ಹಾಗೂ ನಾರಾಯಣ್ ಸಿಂಗ್ ಅವರನ್ನು ಪ್ರಶ್ನಿಸಲಾಗುತ್ತದೆ ಎಂಬ ಅಂಶವೂ ತಿಳಿದು ಬಂದಿದೆ.

5 ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕ್ಗೆ ಇನ್ನೂ ಸಾಕ್ಷಿ ಬೇಕಂತೆ..!
ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡಸುತ್ತಿರುವ ಪಾಕ್ ಭಾರತದಿಂದ ಇನ್ನೂ ಹೆಚ್ಚಿನ ಸಾಕ್ಷ್ಯಗಳನ್ನು ಒದಗಿಸುವಂತೆ ಕೇಳಿದೆ..! ಈ ಕುರಿತು ಪಾಕ್ ಪತ್ರಿಕೆಯೊಂದು ವರದಿ ಮಾಡಿದೆ.

6. ಡೆಟಾಲ್ನಷ್ಟೇ ಪರಿಣಾಮಕಾರಿ ಔಷಧ ಮೂತ್ರ : ಲಾಲು ಪ್ರಸಾದ್ ಯಾದವ್
ಮೂತ್ರ ಡೆಟಾಲ್ನಷ್ಟೇ ಪರಿಣಾಮಕಾರಿ ಔಷಧ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ನಾನಾ ರೀತಿಯ ರೋಗಗಳು ಹಾಗೂ ಹೋಮಿಯೋಪತಿ ಸರಳತೆ ಎಂಬ ವಿಷಯದ ಬಗ್ಗೆ ಪಾಟ್ನಾದಲ್ಲಿಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಾಲ್ಯದಲ್ಲಿ ಗಾಯಗಳಾದಾಗ ಮೂತ್ರವೇ ಪರಿಣಾಮಕಾರಿ ಔಷಧವಾಗಿತ್ತು, ಅದು ಆಂಟಿ ಸೆಫ್ಟಿಕ್ (ನಂಜು ನಿರೋಧಕ) ಎಂದ ಹೇಳಿದ್ದಾರೆಂದು ವರದಿಯಾಗಿದೆ.

7. ಒಬಿಸಿ ಚಳುವಳಿ ಹಿಂಪಡೆದ ಕಾಪು ನಾಯಕರು :
ಹಿಂದುಳಿದ ವರ್ಗದವರ ಪಟ್ಟಿಯಲ್ಲಿ ತಮಗೆ ಮೀಸಲಾತಿ ದೊರಕಿಸಿಕೊಡ ಬೇಕೆಂದು ಆಗ್ರಹಿಸಿ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಕಾಪು ಸಮುದಾಯದ ನಾಯಕರು ಸಿಎಂ ಚಂದ್ರಬಾಬು ನಾಯ್ಡು ನೀಡಿದ ಆಶ್ವಾಸನೆ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಕಾಪು ಸಮುದಾಯಕ್ಕೆ ಮೀಸಲಾತಿ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ನಾಯ್ಡು ತಿಳಿಸಿದ್ದಾರೆ. ಬೇಡಿಕೆ ಈಡೇರದೇ ಇದ್ದರೆ ಮತ್ತೆ ಪ್ರತಿಭಟಿಸುವುದಾಗಿ ಕಾಪು ನಾಯಕರು ಹೇಳಿದ್ದಾರೆ.
8. ಮಕ್ಕಳನ್ನು ಜೀವಂತ ಸುಟ್ಟ ಬೊಕೊ ಭಯೋತ್ಪಾಧಕರು
ನೈಜಿರಿಯಾದಲ್ಲಿ ಬೊಕೊ ಉಗ್ರರು ಮತ್ತೆ ಅಟ್ಟಹಾಸ ಮುಂದುವರೆಸಿದ್ದಾರೆ. ಉಗ್ರರ ಅಟ್ಟಹಾಸಕ್ಕೆ 86ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.
ನೈಜೀರಿತಯಾದ ದಲೋರಿ ಹಳ್ಳಿಯ ಮೇಲೆ ದಾಳಿ ಮಾಡಿರುವ ಉಗ್ರರು ಮನೆಯಲ್ಲಿದ್ದ ಮಕ್ಕಳನ್ನು ಜೀವಂತವಾಗಿ ಸುಟ್ಟಿದ್ದಾರೆಂದು ವರದಿಯಾಗಿದೆ.
9. ಮಹದಾಯಿ ಸಂಬಂಧ ಮತ್ತೆ ಪತ್ರ ಬರೆಯುತ್ತಾರಂತೆ ಸಿಎಂ
ಮಹದಾಯಿ ವಿಚಾರದಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೂ ಕೇಂದ್ರ ಸರ್ಕಾರ ನ್ಯಾಯಾಧೀಕರಣದ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನೀಡಿರುವ ಸೂಚನೆ ಕುರಿತು ಇನ್ನೊಮ್ಮೆ ಪತ್ರ ಬರೆಯುತ್ತೇನೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 

10. ವಿಸ್ಕಿ ಬಾಟಲ್ ಕದ್ದು ಸಿಕ್ಕಿಬಿದ್ದ ಗಗನ ಸಖಿ..!

ಏರ್ ಇಂಡಿಯಾ ವಿಮಾನ ಗಗನ ಸಖಿಯೊಬ್ಬರು ತಾನು ಕರ್ತವ್ಯ ನಿರ್ವಹಿಸ್ತಾ ಇದ್ದ ವಿಮಾನದಲ್ಲಿ ಸರ್ಕಾರಕ್ಕೆ ಸೇರಿದ್ದ ವಿವಿಧ ಬಗೆಯ ಗ್ರಾಹಕ ವಸ್ತುಗಳನ್ನು ಕದ್ದು ತನ್ನ ಬ್ಯಾಗಿನಲ್ಲಾಕಿಕೊಂಡಿದ್ದಾರೆ. ನಂತರ ತಪಾಸಣೆ ವೇಳೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಇವರು ಚೆನ್ನೈ-ಕೊಲೊಂಬೋ-ದಿಲ್ಲಿ ಪ್ರಯಾಣ ಮತ್ತು ಮರು ಪ್ರಯಾಣದ ಅಂತರಾಷ್ಟ್ರೀಯಾ ಹಾರಾಟದ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅನುಮಾನದ ಮೇಲೆ ಇವರ ಬ್ಯಾಗ್ ಅನ್ನು ತಪಾಸಣೆ ಮಾಡಿದಾಗ ಊಟದ ಪ್ಯಾಕ್, ಕಾಫಿ ಬಾಕ್ಸ್, ವಿಸ್ಕಿ ಬಾಟಲ್ ಮೊದಲಾದವು ಸಿಕ್ಕಿವೆ.

LEAVE A REPLY

Please enter your comment!
Please enter your name here