ಕೊಡಗು ವರುಣನ ಆರ್ಭಟಕ್ಕೆ ನಲುಗಿದೆ. ಬಿರುಗಾಳಿ ಸಹಿತ ಭಾರಿ ಮಳೆಗೆ ಭೂಕುಸಿತದಲ್ಲಿ 8ಮಂದಿ ಮೃತಪಟ್ಟಿರುವ ಶಂಕೆ ಮೂಡಿದೆ. 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗ್ತಿದೆ.
500ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ತಿಳಿದುಬಂದಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ವಾಗಿದೆ.
ಕಾಟಗೇರಿ ಗ್ರಾಮದಲ್ಲಿ ಭೂ ಕುಸಿತದಿಂದ ಯಶವಂತ್, ವೆಂಕಟರಮಣ, ಪವನ್ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಂದೂರಿನಲ್ಲಿ ಭೂಕುಸಿತದಿಂದ ಸಾವು ಸಂಭವಿಸಿರುವ ಸಾಧ್ಯತೆಯಿದೆ. ಮಣ್ಣಿನಡಿಯಲ್ಲಿ ಜನರ ಕೈ ಕಾಣಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಕುಶಾಲನಗರ, ಮಡಿಕೇರಿ, ವಿರಾಜಪೇಟೆಯ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಮಡಿಕೇರಿ, ವಿರಾಜಪೇಟೆ, ಮಡಿಕೇರಿ, ಮಂಗಳೂರು, ಹಟ್ಟಿಹೊಳೆ, ಸೋಮವಾರಪೇಟೆಗಳಲ್ಲಿ ರಸ್ತೆಗಳು ನೀರು ತುಂಬಿ ಸಂಪರ್ಕ ಕಳೆದುಕೊಂಡಿವೆ.