No menu items!
11.7 C
Munich
Friday, May 1, 2026

ನಾಡಿನ ಶ್ರೀಮಂತಿಕೆ ಸಾರುವ ‘ಕನ್ನಡ ದೇಶದೊಳ್’…!

Must read

‘ಕನ್ನಡ ದೇಶದೊಳ್‌‌‌‌’ ಈ ಪದ ಈಗ ಟ್ರೆಂಡ್ ಆಗಿ ಬಿಟ್ಟಿದೆ ಅಲ್ವಾ? ಕನ್ನಡ ದೇಶದೊಳ್, ಕನ್ನಡ ದೇಶದೊಳ್, ಕನ್ನಡ ದೇಶದೊಳ್ ಎಂಬುದು ಎಲ್ಲಾ ಕಡೆ ಕೇಳಿಸುತ್ತಿದೆ…! ಅಷ್ಟೇ ಏಕೆ? ಅಂಗಿ ಮೇಲೂ ಇದೇ ಮುತ್ತಿನಂತ ಪದ..! ಸೋಶಿಯಲ್ ಮೀಡಿಯಾದಲ್ಲಂತೂ ಸಖತ್ ಹೆಸರಾಗಿದೆ.

ಹೌದು ಕಳೆದ ಮೂರು ವರ್ಷಗಳಿಂದ ಕನ್ನಡದ ಬಗ್ಗೆ ವಿನೂತನ ರೀತಿಯಲ್ಲಿ ಅಭಿಯಾನ ಮಾಡಿಕೊಂಡು ಬರುತ್ತಿರುವ ಯುವಕರ ತಂಡ ಮಾಡಿರುವ ಸಿನಿಮಾವೇ ಈ‌ ‘ಕನ್ನಡ ದೇಶದೊಳ್’….!

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ದೂಳೆಬ್ಬಿಸಿರುವ ತಂಡ ಈಗ ಸಿನಿಮಾ‌ ಮೂಲಕ ಕರುನಾಡ ಸಂಸ್ಕೃತಿ, ಸಂಪ್ರದಾಯ , ಆಚರಣೆ, ಇತಿಹಾಸವನ್ನು, ಶ್ರೀಮಂತಿಕೆಯನ್ನು ಸಾರಲಿದೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಸಂಭ್ರಮ…ಇಂದೇ ‘ಕನ್ನಡ ದೇಶದೊಳ್’ ಬಿಡುಗಡೆ ಮಾಡಲು ತಂಡ ಉತ್ಸುಕವಾಗಿದೆ.

ಈಗಾಗಲೇ ವಿಭಿನ್ನ ರೀತಿಯಲ್ಲಿ ಅದ್ಧೂರಿಯಾಗಿ ತನ್ನ ಸಿನಿಮಾವನ್ನು ಪ್ರಚಾರ ಮಾಡುತ್ತಿದೆ ಉತ್ಸಾಹಿ ಯುವಕರ ತಂಡ.‌ ಕನ್ನಡ ದೇಶದೊಳ್ ಎಂಬ ಶೀರ್ಷಿಕೆಯನ್ನು ಹೊಂದಿರುವ ಅಂಗಿಯನ್ನು ಸಿನಿಮಾ, ಕ್ರೀಡೆ, ಸಾಹಿತ್ಯ ಹೀಗೆ ಬೇರೆ ಬೇರೆ ಕ್ಷೇತ್ರದ ಸಾಧಕರಿಗೆ ನೀಡಿ ಅವರ ಶುಭಹಾರೈಕೆಯನ್ನು ಪಡೆಯುತ್ತಿದ್ದಾರೆ.   ಆಟೋ, ಬಸ್, ಅಂಗಡಿಯ ಮುಂಗಟ್ಟು, ಬೈಕ್, ಕ್ಯಾಬ್ ಹೀಗೆ ಎಲ್ಲಾ ಕಡೆ ಸಿನಿಮಾ ಶೀರ್ಷಿಕೆ ಪ್ರಚಾರ ಮಾಡಿದೆ ಚಿತ್ರತಂಡ.

ಕನ್ನಡ ದೇಶದೊಳ್ ಎಂಬ ಶೀರ್ಷಿಕೆಯಲ್ಲೇ ಕನ್ನಡದ ಗಟ್ಟಿತನವಿದೆ, ಅಭಿಮಾನವಿದೆ…ಶೀರ್ಷಿಕೆಯೇ ಆಕರ್ಷಣೀಯವಾಗಿದ್ದು, ಜನರನ್ನು ಸೆಳೆಯುತ್ತಿದ್ದು ದೊಡ್ಡಮಟ್ಟಿನ ನಿರೀಕ್ಷೆ ಹುಟ್ಟುಹಾಕಿದೆ.
ಅವಿರಾಮ್ ಕಂಠೀರವ ಎಂಬ ನವ ನಿರ್ದೇಶಕ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಸಿನಿರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಜೆ ಎಸ್ ಎಮ್ ಪ್ರೊಡಕ್ಷನ್ ನವರು ಸಿನಿಮಾ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ 7 ಹಾಡುಗಳಿವೆ. ರಾಜೇಶ್ ಕೃಷ್ಣನ್, ಅನನ್ಯ ಭಟ್, ಸಿದ್ಧಾರ್ಥ್ ಬೆಳುಮನ್ನು, ಶಶಾಂಕ್ ಶೇಷಗಿರಿ, ಸ್ಪರ್ಶ, ಸಾತ್ವಿಕ್ ಹಾಡಿದ್ದಾರೆ. ಈಗಾಗಲೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಗಣೇಶ ಹಬ್ಬಕ್ಕೆ ಹಾಡುಗಳನ್ನು ಹೊರತರಲು ತಂಡ ಸಿದ್ಧವಾಗಿದೆ.
ಕನ್ನಡ ದೇಶದೊಳ್ ಎಂಬ ಶೀರ್ಷಿಕೆ ಈಗಾಗಲೇ ಸದ್ದು‌ ಮಾಡುತ್ತಿದ್ದು ಸಿನಿಮಾ ಇದಕ್ಕೂ ಮಿಗಿಲಾಗಿ ಸದ್ದು ಮಾಡಲಿ ಕನ್ನಡ ದೇಶದಿಂದಾಚೆಗೂ ಈ ಸಿನಿಮಾ ಮೂಲಕ ಕನ್ನಡದ ಕಂಪು ಪಸರಿಸಲಿ ಎಂದು ಹಾರೈಸೋಣ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article