ರಾಣಿ ಎಲಿಜಬೆತ್ ಕಿರೀಟದ ಭಾಗವಾಗಿರುವ ಕೊಹಿನೂರ್ ವಜ್ರ ಕದ್ದದ್ದಲ್ಲ ಹಾಗೆ ಅದನ್ನುಒತ್ತಾಯವಾಗಿ ಬ್ರಿಟನ್ಗೆ ತೆಗೆದುಕೊಂಡು ಹೋದದ್ದೂ ಅಲ್ಲ ಬದಲಾಗಿ ಕೊಹಿನೂರ್ ವಜ್ರವನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.
ಸರ್ಕಾರದ ಪರವಾಗಿ ಕೋರ್ಟ್ ಮುಂದೆ ಹಾಜರಾಗಿದ್ದ ಸಾಲಿಸಿಟರ್ ರಂಜಿತ್ ಕುಮಾರ್, ಇದು ಸಂಸ್ಕೃತಿ ಸಚಿವಾಲಯದ ನಿಲುವಾಗಿದ್ದು, 108 ಕ್ಯಾರೆಟ್ ಕೊಹಿನೂರ್ ವಜ್ರವು ವಸಾಹತು ಶಾಹಿ ಆಡಳಿತ ಇದ್ದಾಗ ಬ್ರಿಟಿಷರ ಕೈಗೆ ಹೋಗಿತ್ತು. 19ನೇ ಶತಮಾನದ ಸಿಖ್ ದೊರೆ ರಣಜಿತ್ ಸಿಂಗ್ ಈ ವಜ್ರವನ್ನು ಬ್ರಿಟಿಷರಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ರಣ್ಜಿತ್ ಸಿಂಗ್ ಅವರು ಸ್ವಯಂಸ್ಪೂರ್ತಿಯಿಂದ ಸಿಖ್ ಯುದ್ಧಗಳಲ್ಲಿ ನೀಡಿದ ನೆರವಿಗೆ ಪ್ರತಿಯಾಗಿ ಈ ವಜ್ರವನ್ನು ಬ್ರಿಟಿಷರಿಗೆ ನೀಡಿದ್ದರು. ಅದು ಕಳವು ಮಾಲು ಅಲ್ಲ’ ಎಂದು ಸ್ಪಷ್ಟಪಡಿಸಿದರು.
ಕೊಹಿನೂರ್ ವಜ್ರಕ್ಕೆ ಸಂಬಂಧ ಪಟ್ಟಂತೆ ಐತಿಹಾಸಿಕ ಮಾಲೀಕತ್ವದ ಪ್ರಶ್ನೆ ಉದ್ಭವಿಸಿದ್ದು ಅದನ್ನು ಭಾರತಕ್ಕೆ ಮರಳಿಸಬೇಕು ಎಂದು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಭಾರತವೂ ಸೇರಿದಂತೆ 4 ರಾಷ್ಟ್ರಗಳು ಈ ಬೇಡಿಕೆ ಮುಂದಿಟ್ಟಿತ್ತು. ಆಲ್ ಇಂಡಿಯಾ ಹ್ಯೂಮನ್ ರೈಟ್ಸ್ ಅಂಡ್ ಸೋಷಿಯಲ್ ಜಸ್ಟೀಸ್ ಫ್ರಂಟ್ ಎಂಬ ಸರ್ಕಾರೇತರ ಸಂಘಟನೆ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವಂತೆ ನಿರ್ದೇಶಿಸಬೇಕು ಎಂದು ಕೋರಿ ಈ ಅರ್ಜಿಯನ್ನು ಸಲ್ಲಿಸಿತ್ತು.
ಇನ್ನು ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಆರು ವಾರದೊಳಗೆ ವಿಸ್ತೃತ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ತಿಳಿಸಿದೆ.
- “ಶ್ರೀ”
POPULAR STORIES :
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’
ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ