ಕ್ರಿಕೆಟ್ ಮತ್ತು ಬಾಲಿವುಡ್ ನಂಟಿನ ಬಹು ಜನಪ್ರಿಯ ಜೋಡಿ ಯಾವ್ದು? ಈ ಪ್ರಶ್ನೆಗೆ ಪ್ರತಿಯೊಬ್ಬರು ಥಟ್ ಅಂತ ಹೇಳೋ ಉತ್ರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿ ..!
2013 ರಿಂದಲೂ ವಿರಾಟ್ ಮತ್ತು ಅನುಷ್ಕಾ ಶರ್ಮಾ ನಡುವೆ ಏನೋ ಇದೆ…ಅನ್ನೋ ಸುದ್ದಿ ವೈರಲ್ ಆಗ್ತಾನೇ ಇದೆ..ಮತ್ತೆ ಮತ್ತೆ ಈ ಜೋಡಿ ಹೆಸ್ರು ಎಲ್ಲೆಡೆ ಕೇಳಿಬರ್ತಿದೆ…! ಆದ್ರೆ ಇವ್ರಿಬ್ರು ನೇರವಾಗಿ ಯಾವತ್ತು ತಮ್ಮ ಸಂಬಂಧನಾ ವೈರಲ್ ಮಾಡ್ಲಿಲ್ಲ…!
ಈಗ ವಿರಾಟ್ ತನ್ನ ಗೆಳತಿ ಅನುಷ್ಕಾರನ್ನು ಏನೆಂದು ಕರೀತಾರೆ ಎನ್ನೋ ವಿಷ್ಯ ಗೊತ್ತಾಗಿದೆ.ಸ್ವತಃ ಕೋಹ್ಲಿಯವರೇ ಕಾರ್ಯಕ್ರಮವೊಂದರಲ್ಲಿ ತಾನು ಅನುಷ್ಕಾ ಗೆ ಏನೆಂದು ಕರೀತಿನಿ ಅನ್ನೋದನ್ನ ಹೇಳಿದ್ದಾರೆ…!
ಕಾರ್ಯಕ್ರಮದಲ್ಲಿ ಅಮಿರ್ ಖಾನ್ ಅವರೊಂದಿಗೆ ಭಾಗವಹಿಸಿದ್ದ ಕೋಹ್ಲಿ ತಾನು ಅನುಷ್ಕಾಗೆ ‘ನುಷ್ಕಿ’ ಅಂತ ಅಡ್ಡ ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನುಷ್ಕಿ ಬಹಳಾ ಪ್ರಾಮಾಣಿಕಳು ಎಂದು ವಿರಾಟ್ ಗುಣಗಾನ ಮಾಡಿದ್ದಾರೆ. ನುಷ್ಕಿ ಯಾವಾಗಲೂ ಐದಾರು ನಿಮಿಷ ತಡವಾಗಿ ಬರ್ತಾರೆ ಇದೊಂದೇ ಇಷ್ಟವಲ್ಲದ ಗುಣ ಅಂದಿದ್ದಾರೆ ವಿರಾಟ್.